Bengaluru: ಹೊಸ ವರ್ಷಕ್ಕೆ ಬೆಂಗಳೂರಿನ ಹೋಟೆಲ್​ ರೂಮ್​​ಗಳಿಗೆ ಭಾರೀ ಬೇಡಿಕೆ; ಮಾಲೀಕರಿಗೆ ಕೊರೋನಾಘಾತ

ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಭೀತಿ ಮತ್ತೆ ಎದುರಾಗಿದ್ದು, ಈ ನಡುವೆ ಸಾಲುಸಾಲು ರಜೆಗಳು ಇರುವುದರಿಂದ ನಗರದಲ್ಲಿರುವ ಹೊಟೇಲ್​ಗಳಲ್ಲಿರುವ ರೂಮ್​ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.

Bengaluru: ಹೊಸ ವರ್ಷಕ್ಕೆ ಬೆಂಗಳೂರಿನ ಹೋಟೆಲ್​ ರೂಮ್​​ಗಳಿಗೆ ಭಾರೀ ಬೇಡಿಕೆ; ಮಾಲೀಕರಿಗೆ ಕೊರೋನಾಘಾತ
ಬೆಂಗಳೂರು ಹೊಟೇಲ್ ಬುಕ್ಕಿಂಗ್ (ಫೋಟೋ: ಸಾಂದರ್ಭಿಕ ಚಿತ್ರ)Image Credit source: yatra.com
Follow us
TV9 Web
| Updated By: Rakesh Nayak Manchi

Updated on:Feb 07, 2023 | 6:34 AM

ಬೆಂಗಳೂರು: ಕ್ರಿಸ್​ಮಸ್ ಹಬ್ಬ (Christmas Festival), ಹೊಸ ವರ್ಷ (New Year 2023) ಆಚರಣೆ ಸೇರಿದಂತೆ ವರ್ಷಾಂತ್ಯದಲ್ಲಿ ಸಾಲುಸಾಲು ರಜೆಗಳು ಇರುವುದರಿಂದ ನಗರದಲ್ಲಿರುವ ಹೊಟೇಲ್​ಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ. ಕೊರೋನಾ ಆಂತಕ (Covid Scare in Bengaluru)ದ ನಡುವೆಯೂ ನಗರದಲ್ಲಿರುವ ಹೊಟೇಲ್ ರೂಮ್ ​ಬುಕ್ಕಿಂಗ್ (Bengaluru hotel room booking)​ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ರಜೆ ಮತ್ತು ಇತರ ಕಾರಣಗಳಿಗಾಗಿ ಅನಿವಾಸಿ ಭಾರತೀಯರು ತವರಿನತ್ತ ಆಗಮಿಸುತ್ತಿದ್ದು, ತಂಗಲು ಹೊಟೇಲ್​ಗಳನ್ನು ಕಾಯ್ದಿರಿಸುತ್ತಿದ್ದಾರೆ. ಬೆಂಗಳೂರಿನ ಶೇಕಡ 90ರಷ್ಟು ಹೋಟೆಲ್​​ಗಳು ಭರ್ತಿಗೊಂಡಿದ್ದು, ಸುಮಾರು 55 ಸಾವಿರ ರೂಮ್​​ಗಳು ಮುಂಚಿತವಾಗಿ ಕಾಯ್ದಿರಿಸಲಾಗಿದೆ.​

ರಜೆಗಳು ಇರುವ ಹಿನ್ನಲೆ ಅನಿವಾಸಿ ಭಾರತೀಯರು ಮಾತ್ರವಲ್ಲದೆ ಹೊರ ರಾಜ್ಯದ ಜನರು ಕೂಡ ಬೆಂಗಳೂರಿಗೆ ಆಗಮಿಸುತ್ತಿದ್ದು, ನಗರದಲ್ಲಿನ ಹೋಟೆಲ್​​ ರೂಮ್​ಗಳಲ್ಲಿ ಉಳಿದುಕೊಳ್ಳಲು ಕೊಠಡಿಗಳನ್ನು ಮುಂಚಿತವಾಗಿ ಬುಕ್ ಮಾಡುತ್ತಿದ್ದಾರೆ. ಈ ನಡುವೆ ಕೊರೋನಾ ಹೆಚ್ಚುತ್ತಿರುವುದು ಮಾಲೀಕರಿಗೆ ಆತಂಕ ಶುರುವಾಗಿದೆ.

ಇದನ್ನೂ ಓದಿ: Coronavirus Live Updates: ಮತ್ತೆ ಆವರಿಸುತ್ತಿದೆ ಕೊರೊನಾ ಭೀತಿ, ಖಾಸಗಿ ಶಾಲೆಗಳಿಗೆ ಮಾರ್ಗಸೂಚಿ ಪ್ರಕಟಿಸಿದ ರುಪ್ಸಾ

ಕಳೆದ 2 ವರ್ಷ ಕೊರೊನಾ ಕಾರಣ ಜನ ನಗರಕ್ಕೆ ಬಂದಿರಲಿಲ್ಲ. ಇದೀಗ ಸಾಲು ಸಾಲು ರಜೆಯ ಹಿನ್ನಲೆ ಅನಿವಾಸಿ ಭಾರತೀಯರು ತವರಿಗೆ ಬರುತ್ತಿದ್ದರೆ, ಪ್ರವಾಸಿಗರು ಬೆಂಗಳೂರು ಸೇರಿ ರಾಜ್ಯದ ಬೇರೆ ಭಾಗಕ್ಕೆ ಭೇಟಿಕೊಡಲು ಸಜ್ಜಾಗುತ್ತಿದ್ದಾರೆ. ವಿಮಾನ, ಬಸ್​ದರ ಏರಿಕೆ ಆದರೂ ಜನರು ರಾಜ್ಯಕ್ಕೆ ಆಗಮಿಸುತ್ತಿದ್ದು, ಬೆಂಗಳೂರಿನಲ್ಲಿ ಭಾಗಶಃ ಹೊಟೇಲ್​ ರೂಮ್​ಗಳು ಭರ್ತಿಗೊಂಡಿವೆ. ಜನರು, ಪ್ರವಾಸಿಗರು ಆನ್​ಲೈನ್ ಮೂಲಕ ರೂಮ್​ಗಳನ್ನು ಮುಂಚಿತವಾಗಿ ಕಾಯ್ದಿರಿಸಿದ್ದಾರೆ.

ಬೆಂಗಳೂರಿಗೆ ಎನ್​ಆರ್​ಐಗಳು ಬರಲು ಕಾರಣವೇನು?

  • ಕ್ರಿಸ್​ ಮಸ್​ಗೆ ಬೇರೆ ದೇಶದಲ್ಲಿ 1 ತಿಂಗಳಿಗೂ ಹೆಚ್ಚು ರಜೆ ಇರುತ್ತದೆ
  • ಅಲ್ಲಿನ ಶಾಲೆಗಳಿಗೂ ರಜೆ ಇರುತ್ತದೆ, ಹೀಗಾಗಿ ತವರಿಗೆ ಬರುತ್ತಾರೆ
  • ಬೇರೆ ದೇಶದಲ್ಲಿ ಚಳಿ ಜಾಸ್ತಿಯಿರುವ ಕಾರಣ ತಮ್ಮೂರಿಗೆ ಬರುತ್ತಾರೆ
  • ಈ ತಿಂಗಳಿನಲ್ಲಿ ಹಬ್ಬದ ಜೊತೆಗೆ ಇನ್ನೀತರ ಕಾರ್ಯಕ್ರಮವೂ ಇರುತ್ತದೆ

ನಗರದ ಹೋಟೆಲ್​ ಮಾಲೀಕರಿಗೆ ಕೊರೋನಾಘಾತ

ಹೊಸ ವರ್ಷದ ಆಚರಣೆಗೆ ನಗರದ ಹೊಟೇಲ್​ ಮಾಲೀಕರು ಸಕಲ ಸಿದ್ಧತೆಗಳನ್ನು ನಡೆಸಿದ್ದಾರೆ. ಈಗಾಗಲೇ ಶೇ 90ರಷ್ಟು ಹೋಟೆಲ್​ ರೂಮ್​ಗಳು​ ಬುಕ್​​​ ಆಗಿದ್ದು, ಜನರು ಮುಂಗಡವಾಗಿ ಹೋಟೆಲ್​ ರೂಮ್​ಗಳಿಗೆ ಹಣ ಪಾವತಿ ಮಾಡಿದ್ದಾರೆ. ಈ ನಡುವೆ ಕೊರೋನಾ ಹೆಚ್ಚಳದ ಭೀತಿ ಎದುರಾಗಿದ್ದು, ಕಟ್ಟು ನಿಟ್ಟಿನ ಕ್ರಮ ಕೈಗೊಂಡರೆ ಹೋಟೆಲ್​ಗಳಿಗೆ ನಷ್ಟವಾಗಲಿದೆ. ಕೊರೋನಾ ಮಹಾಮಾರಿ ಸೋಂಕು ಹರಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳು ಅವಶ್ಯಕವಾಗಿದೆ. ಸರ್ಕಾರದ ಮುಂದಿರುವ ಮಾರ್ಗ ಇದೊಂದೇ ಆಗಿದೆ. ಒಂದೊಮ್ಮೆ ಕಟ್ಟುನಿಟ್ಟಿನ ನಿಯಮ ಹೊರಡಿಸಿದರೆ ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಹೀಗಾಗಿ ಅವೈಜ್ಞಾನಿಕ ನಿರ್ಧಾರಗಳನ್ನು ಕೈಗೊಳ್ಳದಂತೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:44 am, Sat, 24 December 22