Bangalore Crime: ಹ್ಯಾಂಡ್​ಗನ್ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧಿಸಿದ ಕಬ್ಬನ್ ಪಾರ್ಕ್​ ಪೊಲೀಸರು

ಶಂಕಿತ ಆರೋಪಿ ಕೇರಳ ಮೂಲದವನಾಗಿದ್ದು, ನಾಗಾಲ್ಯಾಂಡ್‌ನಿಂದ ಹ್ಯಾಂಡ್​ಗನ್​ಗಳನ್ನು ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

Bangalore Crime: ಹ್ಯಾಂಡ್​ಗನ್ ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯ ಬಂಧಿಸಿದ ಕಬ್ಬನ್ ಪಾರ್ಕ್​ ಪೊಲೀಸರು
ಬಂಧಿತನಿಂದ ವಶಪಡಿಸಿಕೊಳ್ಳಲಾಗಿರುವ ಹ್ಯಾಂಡ್​​ಗನ್​ಗಳು
Follow us
Ganapathi Sharma
|

Updated on: Jun 07, 2023 | 7:51 PM

ಬೆಂಗಳೂರು: ನಗರದಲ್ಲಿ ದೇಶಿ ನಿರ್ಮಿತ ಹ್ಯಾಂಡ್​ಗನ್​​ಗಳನ್ನು (Handguns) ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಕಬ್ಬನ್ ಪಾರ್ಕ್ ಪೊಲೀಸರು (Cubbon Park police) ಬುಧವಾರ ಬಂಧಿಸಿದ್ದಾರೆ. ಆರೋಪಿಯಿಂದ 99 ಸಜೀವ ಗುಂಡುಗಳನ್ನು ಒಳಗೊಂಡಿದ್ದ ಮೂರು ಹ್ಯಾಂಡ್​ಗನ್​ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹ್ಯಾಂಡ್​ಗನ್​ಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆಯ ನಂತರ ಇನ್ನೂ ಎರಡು ಬಂದೂಕುಗಳು, ಬುಲೆಟ್‌ಗಳು ಮತ್ತು ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಂಕಿತ ಆರೋಪಿ ಕೇರಳ ಮೂಲದವನಾಗಿದ್ದು, ನಾಗಾಲ್ಯಾಂಡ್‌ನಿಂದ ಹ್ಯಾಂಡ್​ಗನ್​ಗಳನ್ನು ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ. ಶಂಕಿತ ವ್ಯಕ್ತಿ ಮಾದಕ ದ್ರವ್ಯ ದಂಧೆಯಲ್ಲಿಯೂ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಈ ವಿದ್ಯಮಾನದಿಂದ ಬೆಂಗಳೂರು ಅಕ್ರಮ ಶಸ್ತ್ರಾಸ್ತ್ರಗಳ ಮಾರುಕಟ್ಟೆಯಾಗಿ ಹೊರಹೊಮ್ಮುತ್ತಿರುವ ಆತಂಕ ಸೃಷ್ಟಿಯಾಗಿದೆ. ಈ ವರ್ಷದ ಫೆಬ್ರವರಿಯಲ್ಲಿ, ನಾಲ್ಕು ದೇಶಿ ನಿರ್ಮಿತ ಪಿಸ್ತೂಲ್‌ಗಳು ಮತ್ತು 12 ಬುಲೆಟ್‌ಗಳನ್ನು ಸಮಾಜಘಾತುಕರಿಗೆ ಮಾರಾಟ ಮಾಡಲು ಯತ್ನಿಸಿದ್ದ ಮಹಾರಾಷ್ಟ್ರದ ನಾಗ್ಪುರದ ಲಾರಿ ಚಾಲಕನನ್ನು ಮೆಜೆಸ್ಟಿಕ್ ಪ್ರದೇಶದಲ್ಲಿ ಬಂಧಿಸಲಾಗಿತ್ತು.

ಕಳೆದ ವರ್ಷ ಜುಲೈನಲ್ಲಿ ಬೆಂಗಳೂರಿನ ಹೆಬ್ಬಾಳ ಪ್ರದೇಶದಲ್ಲಿ ದೇಶಿ ನಿರ್ಮಿತ ಬಂದೂಕನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬಿಹಾರ ಮೂಲದ ಇಬ್ಬರನ್ನು ಬಂಧಿಸಲಾಗಿತ್ತು. ಅವರಿಂದ ಪಿಸ್ತೂಲ್ ಮತ್ತು ಆರು ಲೈವ್ ಸುತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ‘ನ್ಯೂಸ್9’ ವರದಿ ಮಾಡಿದೆ.

ಇದನ್ನೂ ಓದಿ: Bengaluru News: ನೈತಿಕ ಪೊಲೀಸ್​​ಗಿರಿ, ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಪೋಸ್ಟ್; ಖಡಕ್ ಎಚ್ಚರಿಕೆ ನೀಡಿದ ಬೆಂಗಳೂರು ಪೊಲೀಸರು

2021 ರ ಮಾರ್ಚ್​​ನಲ್ಲಿ, ಸಿಟಿ ಮಾರ್ಕೆಟ್ ಪೊಲೀಸರು ಎಂಟು ಸದಸ್ಯರ ಅಂತರರಾಜ್ಯ ಬಂದೂಕುಧಾರಿ ಗ್ಯಾಂಗ್ ಅನ್ನು ಬಂಧಿಸಿದ್ದರು ಮತ್ತು ಅವರಿಂದ 52 ಸುತ್ತಿನ ಲೈವ್ ಬುಲೆಟ್‌ಗಳೊಂದಿಗೆ 13 ದೇಶಿ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ