ಯುವತಿಗೆ ಮೆಸೇಜ್ ಮಾಡಿದ್ದೇ ಯುವಕನಿಗೆ ಕಂಟಕವಾಯ್ತಾ? ಯುವತಿಯ ಸೋದರ ಮಾವನಿಂದ ಕೊಲೆ ಆರೋಪ, ಯುವಕ ನಾಪತ್ತೆ

| Updated By: ಆಯೇಷಾ ಬಾನು

Updated on: Jan 31, 2023 | 11:02 AM

ಗೋವಿಂದರಾಜು ಯುವತಿಗೆ ಮೆಸೇಜ್ ಮಾಡಿದ್ದನಂತೆ. ಹೀಗಾಗಿ ಯುವತಿಯ ಸೋದರ ಮಾವ ಗೋವಿಂದರಾಜುನನ್ನು ಕರೆಸೆ ಮೆಸೇಜ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ.

ಯುವತಿಗೆ ಮೆಸೇಜ್ ಮಾಡಿದ್ದೇ ಯುವಕನಿಗೆ ಕಂಟಕವಾಯ್ತಾ? ಯುವತಿಯ ಸೋದರ ಮಾವನಿಂದ ಕೊಲೆ ಆರೋಪ, ಯುವಕ ನಾಪತ್ತೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು:  ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯುವಕನೊಬ್ಬ ನಾಪತ್ತೆಯಾಗಿದ್ದು ಯುವಕನ ಕುಟುಂಬಸ್ಥರು ತಮ್ಮ ಮಗನನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಯುವತಿ ವಿಚಾರಕ್ಕೆ ಯುವಕನ ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಮತ್ತಿಕೆರೆ ನಿವಾಸಿ ಗೋವಿಂದರಾಜು(19) ನಾಪತ್ತೆಯಾದ ಯುವಕ.

ನಾಪತ್ತೆಯಾದ ಯುವಕ ಗೋವಿಂದರಾಜು ಹಾಗೂ ಆರೋಪ ಕೇಳಿ ಬರುತ್ತಿರುವ ಯುವತಿ ಇಬ್ಬರೂ ಸಂಬಂಧಿಕರೇ ಆಗಿದ್ದಾರೆ. ಗೋವಿಂದರಾಜು ಯುವತಿಗೆ ಮೆಸೇಜ್ ಮಾಡಿದ್ದನಂತೆ. ಹೀಗಾಗಿ ಯುವತಿಯ ಸೋದರ ಮಾವ ಗೋವಿಂದರಾಜುನನ್ನು ಕರೆಸೆ ಮೆಸೇಜ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಬಳಿಕ ಆತನನ್ನು ಕರೆದೊಯ್ದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಬಳಿಕ ಬ್ಯಾಡರಹಳ್ಳಿಯ ತೋಟದಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಗೋವಿಂದರಾಜು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ 25ಕ್ಕೂ ಹೆಚ್ಚು ಜ್ಯುವೆಲ್ಲರಿ ಅಂಗಡಿಗಳ ಮೇಲೆ ಐಟಿ ದಾಳಿ

ವೃತ್ತಿಯಲ್ಲಿ ಪೇಂಟರ್ ಆಗಿರುವ ಗೋವಿಂದರಾಜು ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯ ಹಿಂದೆ ಬಿದ್ದಿದ್ದನಂತೆ. ಸದ್ಯ ಪೊಲೀಸರಿಗೆ ಪೋಷಕರು ಘಟನೆಯ ಸಂಬಂಧ ಇರುವ ಅನುಮಾನದ ಬಗ್ಗೆ ಮಾಹಿತಿ ನೀಡಿದ್ದು ಮಾಹಿತಿ ಆಧರಿಸಿ ಯಶವಂತಪುರ ಪೊಲೀಸರು ಪರಿಶೀಲನೆಗೆ ಮುಂದಾಗಿದ್ದಾರೆ. ನಾಪತ್ತೆಯಾದ ಗೊವಿಂದರಾಜು ಎಲ್ಲಿ ಇದ್ದಾನೆ ಎಂಬುವುದು ಯಾರಿಗೂ ತಿಳಿದಿಲ್ಲ.

ಘಟನೆ ಸಂಬಂಧ ಮಾತನಾಡಿದ ಗೊವಿಂದರಾಜು ತಾಯಿ ರಂಗಮ್ಮ, ನಿನ್ನೆ ಮಧ್ಯಾಹ್ನ ಕರೆ ಮಾಡಿದ್ದೆ ಆಗ ಮನೆಯಲ್ಲೇ ಇದ್ದೀನಿ ಅಂತ ಹೇಳಿದ್ದ. ನಂತರ ಫೋನ್ ಮಾಡಿದ್ರೆ ಫೋನ್ ಪಿಕ್ ಮಾಡ್ತಿಲ್ಲ. ಅವರ ಅತ್ತೆ ನನಗೆ ಕಾಲ್ ಮಾಡಿದ್ರು. ಏನು ವಿಚಾರ ಅನ್ನೊದು ನನಗೆ ಗೊತ್ತಿಲ್ಲ. ಆದ್ರೆ ಅವರು ನಿನ್ನ ಮಗನ ಹೊಡೆದು ಸಾಯಿಸ್ತಾನೆ ಅಂತ ಹೇಳಿದ್ರು. ಆಮೇಲೆ ಮತ್ತೆ ನಾನು ಕೇಳಿದಾಗ ಸಾಯಂಕಾಲ ಕಳುಹಿಸುತ್ತೀವಿ ಅಂದ್ರು. ಆದ್ರೆ ಮಗ ಬರಲಿಲ್ಲ. ಹಾಗಾಗಿ ನಾನು ಸಂಜೆ ಠಾಣೆಗೆ ಬಂದು ದೂರು ಕೊಟ್ಟಿದ್ದೇವೆ ಎಂದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:02 am, Tue, 31 January 23