ಆಸ್ಪತ್ರೆಯ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್​ ಬಾಯ್ ಅರೆಸ್ಟ್​

ಆಸ್ಪತ್ರೆಯ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್​ಬಾಯ್​ನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಕ್ಟೋಬರ್ 31ರಂದು ಯಲ್ಲಾಲಿಂಗ ಎಂಬಾತನನ್ನು ಬಂಧಿಸಲಾಗಿದ್ದು, ಆತ ಕಲಬುರಗಿ ಮೂಲದವನು ಎನ್ನುವ ಮಾಹಿತಿ ಲಭ್ಯವಾಗಿದೆ. ತಿಲಕನಗರದ ಆಸ್ಪತ್ರೆಯಲ್ಲಿ ವಾರ್ಡ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.

ಆಸ್ಪತ್ರೆಯ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್​ ಬಾಯ್ ಅರೆಸ್ಟ್​
ವಾಶ್​ರೂಂ-ಸಾಮದರ್ಭಿಕ ಚಿತ್ರ
Image Credit source: Stanza Living

Updated on: Nov 07, 2024 | 8:26 AM

ಆಸ್ಪತ್ರೆಯ ಮಹಿಳೆಯರ ಶೌಚಾಲಯದಲ್ಲಿ ಕ್ಯಾಮರಾ ಇಟ್ಟಿದ್ದ ವಾರ್ಡ್​ಬಾಯ್​ನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಕ್ಟೋಬರ್ 31ರಂದು ಯಲ್ಲಾಲಿಂಗ ಎಂಬಾತನನ್ನು ಬಂಧಿಸಲಾಗಿದ್ದು, ಆತ ಕಲಬುರಗಿ ಮೂಲದವನು ಎನ್ನುವ ಮಾಹಿತಿ ಲಭ್ಯವಾಗಿದೆ. ತಿಲಕನಗರದ ಆಸ್ಪತ್ರೆಯಲ್ಲಿ ವಾರ್ಡ್ ಸಹಾಯಕನಾಗಿ ಕೆಲಸ ಮಾಡುತ್ತಿದ್ದ.

ಪೊಲೀಸ್ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ, ಅಕ್ಟೋಬರ್ 31 ರಂದು ಬೆಳಗ್ಗೆ 8.20ರ ಸುಮಾರಿಗೆ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ವಾಶ್​ರೂಂನ ಕಿಟಕಿಯ ಮೇಲೆ ಮೊಬೈಲ್​ ಇರುವುದನ್ನು ಕಂಡರು. ಅದನ್ನು ಅನ್​ಲಾಕ್ ಮಾಡಿದ ಬಳಿಕ ಹಲವು ರೆಕಾರ್ಡಿಂಗ್ಸ್​ಗಳನ್ನು ನೋಡಿ ಗಾಬರಿಗೊಂಡಿದ್ದರು.

ಅವಳು ಹೊರಗೆ ಬಂದಾಗ ಯಲ್ಲಾಲಿಂಗ ಆ ಫೋನ್​ ನನ್ನದು ನನಗೆ ವಾಪಸ್ ಕೊಡು ಎಂದು ಕೇಳಿದ್ದಾನೆ, ಆದರೆ ಸಿಬ್ಬಂದಿ ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಮತ್ತಷ್ಟು ಓದಿ: ಬದುಕನ್ನೇ ನರಕವಾಗಿಸಿದ ಪ್ರವಾಸ; ಮುಂಬೈ ಬಾಲಕಿ ಮೇಲೆ ಪುದುಚೆರಿಯಲ್ಲಿ ಸಾಮೂಹಿಕ ಅತ್ಯಾಚಾರ

ತಿಲಕನಗರ ಪೊಲೀಸರು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಕಾಯ್ದೆಯ ಸೆಕ್ಷನ್ 77 (ವೋಯರಿಸಂ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಈ ಕುರಿತು ಕೇಳಿದಾಗ ತಪ್ಪಾಗಿ ತನ್ನ ಮೊಬೈಲ್​ನ್ನು ವಾಶ್​ರೂಂನಲ್ಲಿ ಇರಿಸಿರುವುದಾಗಿ ತಿಳಿಸಿದ್ದಾನೆ.

ಆದರೆ ಅಲ್ಲಿರುವ ರೆಕಾರ್ಡಿಂಗ್​ಗಳು ವಿಭಿನ್ನ ಕಥೆಯನ್ನೇ ಹೇಳುತ್ತಿವೆ. ಯಲ್ಲಾಲಿಂಗ ಅವರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಏತನ್ಮಧ್ಯೆ, ಆಸ್ಪತ್ರೆಯು ತನ್ನ ಲೈಂಗಿಕ ಕಿರುಕುಳ ತಡೆ (POSH) ಸಮಿತಿಯ ತನಿಖೆಯ ಬಾಕಿ ಇರುವವರೆಗೆ ಅವರನ್ನು ಅಮಾನತುಗೊಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ