ಬೆಂಗಳೂರು: ವ್ಲಾಗ್ ಮಾಡುವಾಗ ಎದೆ ಸ್ಪರ್ಶಿಸಿ ಓಡಿ ಹೋದ ಬಾಲಕ, ಕಣ್ಣೀರಿಟ್ಟ ಯುವತಿ

ಬೆಂಗಳೂರು ಸುರಕ್ಷಿತವಾಗಿಲ್ಲ ಎಂದು ಮಹಿಳಾ ಇನ್​ಫ್ಲುಯೆನ್ಸರ್​ ಕಣ್ಣೀರು ಹಾಕಿದ್ದಾರೆ. ಅವರು ಬಿಟಿಎಂ ಲೇಔಟ್​ನಲ್ಲಿ ರಸ್ತೆಯಲ್ಲಿ ವ್ಲಾಗ್ ಮಾಡುತ್ತಾ ಹೋಗುತ್ತಿರುವಾಗ ಬಾಲಕನೊಬ್ಬ ಆಕೆಯ ಎದೆಯನ್ನು ಸ್ಪರ್ಶಿಸಿ ಓಡಿ ಹೋಗಿರುವ ಘಟನೆಯನ್ನು ಆಕೆ ವಿವರಿಸಿದ್ದಾಳೆ.

ಬೆಂಗಳೂರು: ವ್ಲಾಗ್ ಮಾಡುವಾಗ ಎದೆ ಸ್ಪರ್ಶಿಸಿ ಓಡಿ ಹೋದ ಬಾಲಕ, ಕಣ್ಣೀರಿಟ್ಟ ಯುವತಿ
ಯುವತಿ
Follow us
ನಯನಾ ರಾಜೀವ್
|

Updated on: Nov 07, 2024 | 10:24 AM

ಬೆಂಗಳೂರು ಸುರಕ್ಷಿತವಾಗಿಲ್ಲ ಎಂದು ಮಹಿಳಾ ಇನ್​ಫ್ಲುಯೆನ್ಸರ್​ ಕಣ್ಣೀರು ಹಾಕಿದ್ದಾರೆ. ಅವರು ಬಿಟಿಎಂ ಲೇಔಟ್​ನಲ್ಲಿ ರಸ್ತೆಯಲ್ಲಿ ವ್ಲಾಗ್ ಮಾಡುತ್ತಾ ಹೋಗುತ್ತಿರುವಾಗ ಬಾಲಕನೊಬ್ಬ ಆಕೆಯ ಎದೆಯನ್ನು ಸ್ಪರ್ಶಿಸಿ ಓಡಿ ಹೋಗಿರುವ ಘಟನೆಯನ್ನು ಆಕೆ ವಿವರಿಸಿದ್ದಾರೆ.

ನೇಹಾ ಬಿಸ್ವಾಲ್ ಕೆಲಸದಿಂದ ಹಿಂದಿರುಗುತ್ತಿದ್ದಾಗ ಮತ್ತು ವೀಡಿಯೊ ಬ್ಲಾಗ್ ಅನ್ನು ರೆಕಾರ್ಡ್ ಮಾಡುತ್ತಿದ್ದಾಗ ಎದುರು ದಿಕ್ಕಿನಿಂದ ಸೈಕಲ್​ನಲ್ಲಿ ಬಂದ 10 ವರ್ಷದ ಬಾಲಕ ಆಕೆಯ ಎದೆ ಸ್ಪರ್ಶಿಸಿ ಓಡಿ ಹೋಗಿದ್ದಾನೆ ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಂಥಾ ಘಟನೆ ನನ್ನ ಜೀವನದಲ್ಲಿ ಎಂದೂ ನಡೆದಿರಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ. ನಾನು ನಡೆಯುವಾಗ ವಿಡಿಯೋ ಮಾಡುತ್ತಾ ಹೋಗುತ್ತಿದ್ದೆ, ಆ ಹುಡುಗ ಆರಂಭದಲ್ಲಿ ನಾನು ಹೋಗುತ್ತಿದ್ದ ದಿಕ್ಕಿನಲ್ಲೇ ಹೋಗುತ್ತಿದ್ದ, ನಂತರ ಮುಂದೆ ಹೋದವನು ನನ್ನ ನೋಡಿ ಯೂ-ಟರ್ನ್ ತೆಗೆದುಕೊಂಡು ಬಂದು ನಾನು ಹೇಗೆ ಮಾತನಾಡುತ್ತಿದ್ದೆ ಅದೇ ರೀತಿ ಮಾತನಾಡಿ ಗೇಲಿ ಮಾಡಿದ, ಬಳಿಕ ಕಿರುಕುಳ ನೀಡಿದ್ದಾನೆ ಎಂದು ವಿವರಿಸಿದ್ದಾರೆ.

ಮತ್ತಷ್ಟು ಓದಿ: ಮುಂಬೈ ರೈಲಿನಲ್ಲಿ ನೇತಾಡುತ್ತಾ ಯುವಕನ ನೃತ್ಯ; ಮಿಸ್ ಮಾಡದೆ ನೋಡಿ

ಕಿರುಕುಳ ನೀಡಿ ಓಡಿ ಹೋಗಲು ಪ್ರಯತ್ನಿಸಿದ್ದ ಕೂಡಲೇ ಸ್ಥಳೀಯರು ಆತನನ್ನು ಹಿಡಿದಿದ್ದಾರೆ. ಆತ ಇನ್ನೂ ಚಿಕ್ಕವನು ಇದೊಂದು ಬಾರಿ ಕ್ಷಮಿಸುವಂತೆ ಜನರು ಕೇಳಿಕೊಂಡರು, ಸಿಕ್ಕಿಬಿದ್ದ ಬಳಿಕ ಆತ ನಾನು ಸೈಕಲ್​ನಲ್ಲಿ ಸಮತೋಲನ ಕಳೆದುಕೊಂಡು ಬೀಳುಬಂತಾದೆ ಆಗ ಆಕೆಯನ್ನು ಆಕಸ್ಮಿಕವಾಗಿ ತಳ್ಳಿದ್ದೇನೆ ಎಂದು ಆರೋಪಿ ಹೇಳಿದ್ದಾರೆ. ಅವನು ಮಾಡಿದ್ದನ್ನು ಸ್ಪಷ್ಟವಾಗಿ ತೋರಿಸುವ ವೀಡಿಯೊವನ್ನು ನಾನು ಪ್ಲೇ ಮಾಡಿದ ನಂತರವೇ ಜನರು ನನ್ನನ್ನು ನಂಬುತ್ತಾರೆ ಎಂದು ಅವರು ಹೇಳಿದರು.

ಆತ ಇನ್ನೂ ಚಿಕ್ಕವನಾಗಿರುವ ಕಾರಣ ನಾನು ಯಾವುದೇ ಎಫ್​ಐಆರ್ ದಾಖಲಿಸಿಲ್ಲ, ಆತನ ಭವಿಷ್ಯವನ್ನು ಹಾಳು ಮಾಡುವ ಮನಸ್ಸಿಲ್ಲ ಎಂದರು. ಆದರೆ ನಡೆದ ಘಟನೆಯಿಂದ ಇನ್ನೂ ಮಾನಸಿಕವಾಗಿ ವಿಚಲಿತನಾಗಿದ್ದೇನೆ ಎಂದಿದ್ದಾರೆ.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ