ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಪ್ರಕರಣ; ಜೀವ ಬಿಡುವವರೆಗೂ ಅಳಿಯನ ಜೊತೆ ಫೋನ್​ನಲ್ಲೇ ಮಾತಾಡುತ್ತಿದ್ದ ಅತ್ತೆ, ನಡೆದಿದ್ದೇನು?

| Updated By: sandhya thejappa

Updated on: Sep 22, 2021 | 9:44 AM

ಸಂದೀಪ್​ಗೆ ಫೋನ್ ಮಾಡಿ ಬೆಂಕಿ ಹೊತ್ತಿಕೊಂಡಿದೆ, ಬಾರಪ್ಪ ಎಂದು ಅತ್ತೆ ಮನವಿ ಮಾಡಿಕೊಳ್ಳುತ್ತಾರೆ. ಫೋನ್​ನಲ್ಲಿ ಮಾತಾಡಿಕೊಂಡೆ ಅಳಿಯ ಓಡಿ ಬರುತ್ತಾರೆ. ಬಾಗಿಲು ತೆಗೆಯುವಂತೆ ಅತ್ತೆಗೆ ಅಳಿಯ ಹೇಳುತ್ತಾರೆ.

ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಪ್ರಕರಣ; ಜೀವ ಬಿಡುವವರೆಗೂ ಅಳಿಯನ ಜೊತೆ ಫೋನ್​ನಲ್ಲೇ ಮಾತಾಡುತ್ತಿದ್ದ ಅತ್ತೆ, ನಡೆದಿದ್ದೇನು?
ಹೊತ್ತಿ ಉರಿದ ಫ್ಲಾಟ್
Follow us on

ಬೆಂಗಳೂರು: ನಿನ್ನೆ (ಸೆ.21) ನಡೆದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿ ಭಾಗ್ಯ ರೇಖಾ ತನ್ನ ಅಳಿಯನ ಜೊತೆ ಜೀವ ಬಿಡುವವರೆಗೂ ಫೋನ್​ನಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ತಮ್ಮನ್ನ ರಕ್ಷಿಸುವಂತೆ ಭಾಗ್ಯ ರೇಖಾ ಅಳಿಯನಿಗೆ ಫೋನ್​ನಲ್ಲಿ ಹೇಳಿದ್ದರು. ಮೊದಲು ಹಾಲ್​ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಹಾಲ್​ನಲ್ಲಿ ಬೆಂಕಿ ಹೊತ್ತಿಕೊಂಡಿದೆ ಅಂತಾ ಅಳಿಯ ಸಂದೀಪ್​ಗೆ ಭಾಗ್ಯ ರೇಖಾ ಕರೆ ಮಾಡಿದ್ದರಂತೆ. ಹಾಲ್​ನಲ್ಲಿ ಬೆಂಕಿ ಹೊತ್ತ ಕಾರಣ ಫ್ಲ್ಯಾಟ್​ನಿಂದ ಹೊರ ಬರಲು ಆಗದೆ ಒಳಗಡೆ ಸಿಲುಕಿ ಕೊಂಡಿದ್ದರು. ಪಕ್ಕದ ಫ್ಲ್ಯಾಟ್​ನಲ್ಲಿ ಭಾಗ್ಯ ರೇಖಾ ಮಗಳ ಗಂಡ ಸಂದೀಪ್ ಇದ್ದರು.

ಸಂದೀಪ್​ಗೆ ಫೋನ್ ಮಾಡಿ ಬೆಂಕಿ ಹೊತ್ತಿಕೊಂಡಿದೆ, ಬಾರಪ್ಪ ಎಂದು ಅತ್ತೆ ಮನವಿ ಮಾಡಿಕೊಳ್ಳುತ್ತಾರೆ. ಫೋನ್​ನಲ್ಲಿ ಮಾತಾಡಿಕೊಂಡೆ ಅಳಿಯ ಓಡಿ ಬರುತ್ತಾರೆ. ಬಾಗಿಲು ತೆಗೆಯುವಂತೆ ಅತ್ತೆಗೆ ಅಳಿಯ ಹೇಳುತ್ತಾರೆ. ಆದರೆ ಓಪನ್ ಮಾಡಲು ಆಗಲ್ಲ ಎಂದು ಭಾಗ್ಯ ರೇಖಾ ಕಣ್ಣೀರು ಹಾಕುತ್ತಿದ್ದರಂತೆ. ನಂತರ ಭಾಗ್ಯ ರೇಖಾ ಗಂಡ ಭೀಮಸೇನ್ ಹೊರಗಿನಿಂದ ಬಾಗಿಲಿಗೆ ಒದ್ದು ಓಪನ್ ಮಾಡಿದ್ದಾರೆ. ಅಷ್ಟರಲ್ಲಿ ಬೆಂಕಿ ತೀವ್ರವಾಗಿ ಹೊತ್ತಿಕೊಂಡ ಕಾರಣ ಭೀಮಸೇನ್​ಗೆ ಗಾಯವಾಗಿದೆ ಅಂತ ಮಾಹಿತಿ ತಿಳಿದುಬಂದಿದೆ.

ಭೀಮಸೇನ್ ಫ್ಲ್ಯಾಟ್ನ ಬಾಲ್ಕನಿಯಲ್ಲಿ ಕಬ್ಬಿಣದ ಗ್ರಿಲ್ ಹಾಕಿಸಿದ್ದರು. ಕಬ್ಬಿಣದ ಗ್ರಿಲ್ ಇಲ್ಲದಿದ್ದಿದ್ರೆ ಎರಡು ಜೀವ ಬದುಕುಳಿಯುತ್ತಿತ್ತು. ಬಾಲ್ಕನಿ ಮೂಲಕ ಫ್ಲ್ಯಾಟ್ ಒಳಗೆ ಯಾರು ಬಾರದಂತೆ ಕಬ್ಬಿಣದ ಗ್ರಿಲ್ ಅಳವಡಿಕೆ ಮಾಡಲಾಗಿತ್ತು. ನಿನ್ನೆ ಬೆಂಕಿ ಬಿದ್ದ ಕೂಡಲೇ ಲಕ್ಷ್ಮೀದೇವಿ ಬಾಲ್ಕನಿಗೆ ಬಂದಿದ್ದರು. ಆದರೆ ಬಾಲ್ಕನಿಯಲ್ಲಿ ಕಬ್ಬಿಣದ ಗ್ರಿಲ್ ಇದ್ದ ಕಾರಣ ಫ್ಲ್ಯಾಟ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಾಲ್ಕನಿಗೆ ಬಂದು ತಾಯಿ- ಮಗಳು ರಕ್ಷಣೆಗೆ ಕೂಗುತ್ತಾರೆ. ಆದರೆ ಗ್ರಿಲ್ ಇದ್ದಿದ್ದರಿಂದ ಹೊರಗಿನಿಂದ ಯಾರು ರಕ್ಷಣೆ ಮಾಡಲು ಸಾಧ್ಯವಾಗಿಲ್ಲ.

ಬೆಂಕಿಗೆ ನಿಖರ ಕಾರಣವೇ ಇನ್ನೂ ನಿಗೂಢ
ಬೆಂಕಿಯ ಮೊದಲ ಕಿಡಿಗೆ ಕಾರಣ ಏನು ಎಂಬುದು  ನಿಗೂಢವಾಗಿಯೇ ಉಳಿದಿದೆ. ಮೊದಲು ಸಿಲಿಂಡರ್ ಬ್ಲಾಸ್ಟ್ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದರು. ಪ್ರಾಥಮಿಕ ತನಿಖೆ ವೇಳೆ ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ ಎಂಬುದು ಬೆಳಕಿಗೆ ಬಂದಿದೆ. ಗ್ಯಾಸ್ ಪೈಪ್ ಲೈನ್​ನಿಂದಲೂ ಬೆಂಕಿ ಹೊತ್ತಿಕೊಂಡಿಲ್ಲ. ಮನೆ ಬಾಗಿಲ ಕಡೆಯಿಂದ ಬೆಂಕಿ ಹೊತ್ತಿರುವ ಬಗ್ಗೆ ಅನುಮಾನವಿದೆ. ಹಾಗಾಗಿಯೇ ಮನೆಯಿಂದ ಹೊರಬರಲಾರದೆ ಒದ್ದಾಟ ಮಾಡಿದ್ದಾರೆ.

ಮನೆಯಲ್ಲಿ ಯುಪಿಎಸ್ ಕೂಡ ಇತ್ತು. ಬೆಂಕಿಗೆ ಯುಪಿಎಸ್ ಬ್ಯಾಟರಿಗಳು ಕಾರಣನಾ, ದೇವರಿಗೆ ಹಚ್ಚಿದ ದೀಪಗಳು ಕಾರಣನಾ, ಟಿವಿ, ಫ್ರಿಡ್ಜ್ ಎಲ್ಲವೂ ಆನ್ ಅಗಿತ್ತು. ಅದರಿಂದ ಏನಾದರೂ ಬೆಂಕಿ ತಗುಲಿದ್ಯಾ? ಎಂಬ ಅನುಮಾನುಗಳು ಹುಟ್ಟಿವೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ

ಬೆಂಗಳೂರು ಅಗ್ನಿ ಅವಘಡ: ತಾಯಿ- ಮಗಳು ಸಜೀವ ದಹನ; ನಿನ್ನೆಯಷ್ಟೇ ಅಮೆರಿಕದಿಂದ ಬಂದಿದ್ದರು ಕುಟುಂಬಸ್ಥರು

ಬೆಂಗಳೂರು: ಸಿಲಿಂಡರ್​ ಸ್ಫೋಟಿಸಿ ಭಾರಿ ಅಗ್ನಿ ಅವಘಡ; ಹೊತ್ತಿ ಉರಿದ ಫ್ಲ್ಯಾಟ್

(Bhagya Rekha phoned her son in law after death for save Bengaluru Cylinder Blast)

Published On - 9:33 am, Wed, 22 September 21