AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕೊರೆದು 13 ತಿಂಗಳ ನಂತರ ಹೊರಬಂದ ಊರ್ಜಾ ಯಂತ್ರ

ಉರ್ಜಾ ಯಂತ್ರ ಕಂಟೋನ್ಮೆಂಟ್ನಿಂದ ಶಿವಾಜಿನಗರ ಮಾರ್ಗವಾಗಿ ಸುರಂಗ ಕೊರೆದಿದೆ. 855 ಮೀಟರ್ ಸುರಂಗ ಕೊರೆದು ಟಿಬಿಎಂ ಹೊರ ಬಂದಿದೆ. ಎರಡನೇ ಹಂತದಲ್ಲಿ ಒಟ್ಟು 9 ಟಿಬಿಎಂ ಮಿಷನ್​ಗಳು ಕಾರ್ಯ ನಿರ್ವಹಿಸುತ್ತಿವೆ.

ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕೊರೆದು 13 ತಿಂಗಳ ನಂತರ ಹೊರಬಂದ ಊರ್ಜಾ ಯಂತ್ರ
ಊರ್ಜಾ ಯಂತ್ರ ಹೊರಬರುತ್ತಿರುವುದನ್ನು ಬಸವರಾಜ ಬೊಮ್ಮಾಯಿ ವೀಕ್ಷಿಸಿದರು
TV9 Web
| Updated By: sandhya thejappa|

Updated on:Sep 22, 2021 | 10:57 AM

Share

ಬೆಂಗಳೂರು: ಮೆಟ್ರೋ (Metro) ಸುರಂಗ (Tunnel) ಕೊರೆದು ಸುಮಾರು 13 ತಿಂಗಳ ನಂತರ ಊರ್ಜಾ ಯಂತ್ರ (Urja Machine) ಹೊರಬಂದಿದೆ. ಬೆಂಗಳೂರಿನ ಶಿವಾಜಿನಗರದಲ್ಲಿ ಮೆಟ್ರೋ ಸುರಂಗ ಕಾಮಗಾರಿ ನಡೆಯುತ್ತಿದೆ. 855 ಮೀಟರ್ ಮೆಟ್ರೋ ಸುರಂಗ ಮಾರ್ಗದ ಕಾಮಗಾರಿ ನಡೆಯುತ್ತಿದ್ದು, 2020ರ ಆಗಸ್ಟ್​ನಲ್ಲಿ ಊರ್ಜಾ ಯಂತ್ರ ಸುರಂಗ ಪ್ರವೇಶಿಸಿತ್ತು. 13 ತಿಂಗಳ ಬಳಿಕ ಇಂದು (ಸೆ.22) ಊರ್ಜಾ ಯಂತ್ರ ಹೊರಬಂದಿದೆ. ಯಂತ್ರ ಹೊರಬರುವ ವೇಳೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದು, ಊರ್ಜಾ ಬ್ರೇಕ್ ಥ್ರೂ ವೀಕ್ಷಿಸಿದ್ದಾರೆ.

ಉರ್ಜಾ ಯಂತ್ರ ಕಂಟೋನ್ಮೆಂಟ್​ನಿಂದ ಶಿವಾಜಿನಗರ ಮಾರ್ಗವಾಗಿ ಸುರಂಗ ಕೊರೆದಿದೆ. 855 ಮೀಟರ್ ಸುರಂಗ ಕೊರೆದು ಟಿಬಿಎಂ ಹೊರ ಬಂದಿದೆ. ಎರಡನೇ ಹಂತದಲ್ಲಿ ಒಟ್ಟು 9 ಟಿಬಿಎಂ ಮಿಷನ್​ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಪೈಕಿ ಸುರಂಗ ಮಾರ್ಗ ಕೆಲಸ ಪೂರ್ಣಗೊಳಿಸಿ ಮೊದಲ ಟಿಬಿಎಂ ಉರ್ಜಾ ಹೊರಬಂದಿದೆ.

ಶಿವಾಜಿನಗರ ಭಾಗದಲ್ಲಿ ಭೂಮಿಯೊಳಗೆ ಸುರಂಗ ಮಾರ್ಗ ಕೊರೆಯುವುದು ದೊಡ್ಡ ಸವಾಲಾಗಿತ್ತು. ಸಡಿಲ ಮಣ್ಣು ಹಾಗೂ ಸಾಕಷ್ಟು ಬೋರ್​ವೆಲ್​ಗಳು ಸಿಕ್ಕಿದ್ದವು. ಇದನ್ನೆಲ್ಲಾ ಬೇಧಿಸಿ ಊರ್ಜಾ ಯಶಸ್ವಿಯಾಗಿ ತನ್ನ ಕೆಲಸ ಮುಗಿಸಿ ಸುರಂಗ ಮಾರ್ಗದಿಂದ ಹೊರಬಂದಿದೆ. ಈ ಮಹತ್ವದ ಕ್ಷಣಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಸಾಕ್ಷಿಯಾಗಿದ್ದಾರೆ. ಮೆಟ್ರೋ ಫೇಸ್ 2 ನಲ್ಲಿ, ಗೊಟ್ಟಿಗೆರೆಯಿಂದ ನಾಗಾವರವರೆಗೆ 21 ಕಿ.ಮೀ ಉದ್ದ ಮೆಟ್ರೋ ಕಾಮಗಾರಿ ನಡೆಯುತ್ತಿದೆ.

ಇದರಲ್ಲಿ ಸುಮಾರು 13 ಕಿ.ಮೀ ನಷ್ಟು ಸುರಂಗ ಮಾರ್ಗ ಕಾಮಗಾರಿ ಮಾಡಲಾಗುತ್ತಿದೆ. ಇದಕ್ಕಾಗಿ 9 ಟಿಬಿಮ್ (ಟನಲ್ ಬೋರಿಂಗ್ ಮಿಷನ್)ಗಳು ಕೆಲಸ ನಿರ್ವಹಿಸುತ್ತಿವೆ. ಈ 9 ಮಿಷನ್ಗಳ ಪೈಕಿ ಊರ್ಜಾ ಸುರಂಗ ಮಾರ್ಗ ಕೆಲಸ ಮುಗಿಸಿ ಹೊರ ಬರುತ್ತಿರುವ ಮೊದಲ ಯಂತ್ರವಾಗಿದೆ.

ಇದನ್ನೂ ಓದಿ

ದೇವನಹಳ್ಳಿ: ಬಿಎಸ್ಎಫ್ ಕ್ಯಾಂಪ್​ನಲ್ಲಿ ಕೊರೊನಾ ರಣಕೇಕೆ; ಮೇಘಾಲಯದಿಂದ ಬಂದಿದ್ದ 70 ಯೋಧರಿಗೆ ಕೊರೊನಾ, ಓರ್ವ ಗಂಭೀರ

ಬೆಂಗಳೂರು ಬಸ್​ನಲ್ಲಿ ಗೀತ ಗೋವಿಂದಂ ಸಿನಿಮಾ ಸ್ಟೈಲ್​ನಲ್ಲಿ ಹುಡುಗಿಗೆ ಮುತ್ತು ಕೊಟ್ಟಿದ್ದ ಬಳ್ಳಾರಿಯ ಇಂಜಿನಿಯರ್​ ಬಂಧನ

(Urja machine came out 13 months after the Metro Tunnel was drilled At shivajinagar)

Published On - 10:55 am, Wed, 22 September 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ