ಬೆಂಗಳೂರು ಅಗ್ನಿ ಅವಘಡ: ತಾಯಿ- ಮಗಳು ಸಜೀವ ದಹನ; ನಿನ್ನೆಯಷ್ಟೇ ಅಮೆರಿಕದಿಂದ ಬಂದಿದ್ದರು ಕುಟುಂಬಸ್ಥರು

TV9 Digital Desk

| Edited By: ganapathi bhat

Updated on:Sep 21, 2021 | 9:25 PM

Bengaluru Fire Accident: ಅಗ್ನಿ ಅವಘಡದಲ್ಲಿ ಭೀಮಸೇನ್‌ ಎಂಬುವವರಿಗೆ ಗಾಯಗೊಂಡಿದ್ದಾರೆ. ನಿನ್ನೆಯಷ್ಟೇ ಅಮೆರಿಕದಿಂದ ಕುಟುಂಬಸ್ಥರು ಆಗಮಿಸಿದ್ದರು ಎಂದು ಮಾಹಿತಿ ತಿಳಿದುಬಂದಿದೆ.

ಬೆಂಗಳೂರು ಅಗ್ನಿ ಅವಘಡ: ತಾಯಿ- ಮಗಳು ಸಜೀವ ದಹನ; ನಿನ್ನೆಯಷ್ಟೇ ಅಮೆರಿಕದಿಂದ ಬಂದಿದ್ದರು ಕುಟುಂಬಸ್ಥರು
ಹೊತ್ತಿ ಉರಿದ ಫ್ಲಾಟ್

Follow us on


ಬೆಂಗಳೂರು: ನಗರದಲ್ಲಿ ನಡೆದ ಅಗ್ನಿ ಅವಘಡಕ್ಕೆ ಸಂಬಂಧಿಸಿ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಅಪಾರ್ಟ್​ಮೆಂಟ್​ ಅಗ್ನಿ ಅವಘಡದಲ್ಲಿ ಇಬ್ಬರು ಸಜೀವದಹನ ಆಗಿದ್ದಾರೆ. ತಾಯಿ ಲಕ್ಷ್ಮೀದೇವಿ (82), ಪುತ್ರಿ ಭಾಗ್ಯ ರೇಖಾ (59) ಮೃತ ದುರ್ದೈವಿಗಳು. 210 ನೇ ಫ್ಲ್ಯಾಟ್‌ನಲ್ಲಿದ್ದ ತಾಯಿ ಹಾಗೂ ಮಗಳು ಸಜೀವದಹನ ಆಗಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯಿಂದ ತಾಯಿ, ಪುತ್ರಿ ಮೃತದೇಹ ಪತ್ತೆಯಾಗಿದೆ. ಮೂರನೇ ಮಹಡಿಯ 210ನೇ ಫ್ಲ್ಯಾಟ್‌ನಲ್ಲಿದ್ದ ನಿವಾಸಿಗಳು ಸಾವನ್ನಪ್ಪಿದ್ದಾರೆ.

ಅಗ್ನಿ ಅವಘಡದಲ್ಲಿ ಭೀಮಸೇನ್‌ ಎಂಬುವವರಿಗೆ ಗಾಯಗೊಂಡಿದ್ದಾರೆ. ಗಾಯಾಳು ಭೀಮಸೇನ್‌ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಭೀಮಸೇನ್‌ ತಲೆ, ಕೈ-ಕಾಲುಗಳಲ್ಲಿ ಸುಟ್ಟಗಾಯ ಆಗಿದೆ. ನಿನ್ನೆಯಷ್ಟೇ ಅಮೆರಿಕದಿಂದ ಕುಟುಂಬಸ್ಥರು ಆಗಮಿಸಿದ್ದರು ಎಂದು ಮಾಹಿತಿ ತಿಳಿದುಬಂದಿದೆ. ಅಗ್ನಿ ಅವಘಡದಲ್ಲಿ ತಾಯಿ, ಮಗಳು ಸಜೀವದಹನ ಆಗಿದ್ದಾರೆ.

ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಅಗ್ನಿಶಾಮಕ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಹೇಳಿಕೆ ನೀಡಿದ್ದಾರೆ. ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಘಟನೆ ಸಂಭವಿಸಿದ ಶಂಕೆ ಇದೆ. ಪ್ರಾಥಮಿಕ ಮಾಹಿತಿ ಪ್ರಕಾರ ಸಿಲಿಂಡರ್ ಸ್ಫೋಟ ಶಂಕೆ ವ್ಯಕ್ತವಾಗಿದೆ. ತನಿಖೆ ನಂತರ ವಾಸ್ತವಾಂಶ ತಿಳಿಯಲಿದೆ. ಏರಿಯಲ್ ಲ್ಯಾಡರ್ ಪ್ಲಾಟ್​ಫಾರಂ ಮಷೀನ್​ ಬಂದಿದೆ. ಅತ್ಯಂತ ಕ್ಲಿಷ್ಟ ಸಂದರ್ಭದಲ್ಲಿ ಮಾತ್ರ ಈ ಯಂತ್ರ ಬಳಸ್ತೇವೆ. ಅಗ್ನಿಶಾಮಕ ದಳದ 5 ವಾಹನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಘಟನೆಗೆ ನಿಖರ ಕಾರಣ ಪತ್ತೆಯಾಗಿಲ್ಲ
ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಶಿಯಿಂದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾಹಿತಿ ಪಡೆಯುತ್ತಿದ್ದಾರೆ. ಮನೆ ಸಂಪೂರ್ಣ ಸುಟ್ಟ ಕರಕಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಕ್ಕಪಕ್ಕದವರ ಮಾಹಿತಿ ಪ್ರಕಾರ ಘಟನೆ ಸಿಲಿಂಡರ್ ಸ್ಫೋಟವಲ್ಲ. ಯಾವುದೇ ಸ್ಫೋಟದ ಸದ್ದು ಕೇಳಿ ಬಂದಿಲ್ಲ ಎಂಬ ಮಾಹಿತಿ ದೊರಕಿದೆ. ಹೀಗಾಗಿ ಶಾರ್ಟ್ ಸರ್ಕ್ಯೂಟ್​ನಿಂದ ಅನಾಹುತ ಸಂಭವಿಸಿರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ. ಘಟನೆಗೆ ಇನ್ನೂ ನಿಖರವಾದ ಕಾರಣ ಪತ್ತೆಯಾಗಿಲ್ಲ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.

ಮತ್ತೊಂದೆಡೆ ರೆಸ್ಕ್ಯೂ ಆಪರೇಷನ್​ ನಡೆಯುತ್ತಿದೆ. ಹೊಗೆ ದಟ್ಟವಾಗಿ ಆವರಿಸಿರುವುದರಿಂದ ಕಾರ್ಯಾಚರಣೆ ಸ್ವಲ್ಪ ತಡವಾಗಿದೆ. ಬೆಂಕಿ ನಂದಿಸಲು, ರಕ್ಷಣಾ ಕಾರ್ಯಾಚರಣೆ ವಿಳಂಬವಾಗಿದೆ ಎಂದು ಘಟನಾ ಸ್ಥಳದಲ್ಲಿ ಎಡಿಜಿಪಿ ಅಮರ್‌ಕುಮಾರ್ ಪಾಂಡೆ ಹೇಳಿದ್ದಾರೆ. ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಘಟನೆಗೆ ಸಂಬಂಧಿಸಿ ಸ್ಥಳಕ್ಕೆ ಅಗ್ನಿಶಾಮಕ ಇಲಾಖೆ ಹಿರಿಯ ಅಧಿಕಾರಿ ರಾಮಕೃಷ್ಣ, ಅಗ್ನಿಶಾಮಕ ಇಲಾಖೆ ಎಡಿಜಿಪಿ ಅಮರ್ ಕುಮಾರ್ ಪಾಂಡೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿ ಘಟನಾ ಸ್ಥಳಕ್ಕೆ ಬೊಮ್ಮನಹಳ್ಳಿ ಶಾಸಕ ಸತೀಶ್​ ರೆಡ್ಡಿ ತೆರಳಿದ್ದಾರೆ. ಸ್ಪೀಕರ್ ಅನುಮತಿ ಪಡೆದು ವಿಧಾನಸಭೆಯಿಂದ ನಿರ್ಗಮಿಸಿದ್ದಾರೆ. ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕ ಸತೀಶ್ ರೆಡ್ಡಿ ನಿರ್ಗಮಿಸಿದ್ದಾರೆ.

ಅಪಾರ್ಟ್​ಮೆಂಟ್​ನಲ್ಲಿ ಅಗ್ನಿ ಅವಘಡ ಸಂಭವಿಸಿರುವುದರಿಂದ ನಿವಾಸಿಗಳಿಗೆ ಸಮೀಪದ ಅಪಾರ್ಟ್​ಮೆಂಟ್​ನಲ್ಲಿ ಆಶ್ರಯ ಒದಗಿಸಲಾಗಿದೆ. ಸಮೀಪದ ಅಪಾರ್ಟ್‌ಮೆಂಟ್‌ನ ಕ್ಲಬ್‌ಹೌಸ್‌ನಲ್ಲಿ ಆಶ್ರಯ ನೀಡಲಾಗಿದೆ. 60ಕ್ಕೂ ಹೆಚ್ಚು ನಿವಾಸಿಗಳಿಗೆ ಕ್ಲಬ್‌ಹೌಸ್‌ನಲ್ಲಿ ಆಶ್ರಯ ವ್ಯವಸ್ಥೆ ಮಾಡಲಾಗಿದೆ. ಕ್ಲಬ್‌ಹೌಸ್‌ನಲ್ಲಿ ಫ್ಲ್ಯಾಟ್ ನಿವಾಸಿಗಳು ಸಭೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Bengaluru: ಬೆಂಗಳೂರಿನಲ್ಲಿ ಸಾಲು ಸಾಲು ಬೆಂಕಿ ದುರಂತ; ಅಪಾಯದಲ್ಲಿರುವ 13 ಸಾವಿರಕ್ಕೂ ಹೆಚ್ಚು ಕಟ್ಟಡಗಳ ಕತೆಯೇನು?

ಇದನ್ನೂ ಓದಿ: ಬೆಂಗಳೂರು: ಸಿಲಿಂಡರ್​ ಸ್ಫೋಟಿಸಿ ಭಾರಿ ಅಗ್ನಿ ಅವಘಡ; ಹೊತ್ತಿ ಉರಿದ ಫ್ಲ್ಯಾಟ್

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada