ಬೆಂಗಳೂರು: ಚುರುಕುಗೊಂಡ ಡಬಲ್ ಮರ್ಡರ್​ ಪ್ರಕರಣದ ತನಿಖೆ; ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳ ರಚನೆ

| Updated By: Rakesh Nayak Manchi

Updated on: Dec 19, 2022 | 9:10 AM

ಬೆಂಗಳೂರಿನಲ್ಲಿ ಮನೆ ಕೆಲದವನ ಕೊಲೆ ಪ್ರಕರಣದಲ್ಲಿ ಈತನೇ ಆರೋಪಿ ಇರಬಹುದು ಎಂಬ ಪೊಲೀಸರು ಶಂಕಿಸಿದ್ದ ವ್ಯಕ್ತಿಯೇ ಶವವಾಗಿ ಪತ್ತೆಯಾಗಿರುವ ಹಿನ್ನೆಲೆ ಪ್ರಕರಣದ ತನಿಖೆ ಇನ್ನಷ್ಟು ಚುರುಕುಗೊಂಡಿದೆ.

ಬೆಂಗಳೂರು: ಚುರುಕುಗೊಂಡ ಡಬಲ್ ಮರ್ಡರ್​ ಪ್ರಕರಣದ ತನಿಖೆ; ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳ ರಚನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ನಡೆದ ಮನೆ ಕೆಲದವನ ಕೊಲೆ ಪ್ರಕರಣ (Murder Case)ದಲ್ಲಿ ಈತನೇ ಆರೋಪಿ ಇರಬಹುದು ಎಂಬ ಪೊಲೀಸರು ಶಂಕಿಸಿದ್ದ ವ್ಯಕ್ತಿಯೇ ಶವವಾಗಿ ಪತ್ತೆ (Security dead body found)ಯಾಗಿರುವ ಹಿನ್ನೆಲೆ ಪ್ರಕರಣದ ತನಿಖೆ ಇನ್ನಷ್ಟು ಚುರುಕುಗೊಂಡಿದ್ದು, ಆರೋಪಿಗಳನ್ನು ಬಂಧಿಸಲು ನಾಲ್ಕು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಸೆಕ್ಯೂರಿಟ್ ಗಾರ್ಡ್ ಮನೆ ಕೆಲಸದವನನ್ನು ಕೊಲೆ ಮಾಡಿ ಕಳ್ಳತನ ಮಾಡಿ ಪರಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ನಿನ್ನೆ ಸಂಜೆ ವೇಳೆಗೆ ನೀರಿನ ಸಂಪ್​ನಲ್ಲಿ ಸೆಕ್ಯೂರಿಟಿ ಗಾರ್ಡ್ ಬಹದ್ದೂರ್ ಮೃತದೇಹ ಪತ್ತೆಯಾದ ಹಿನ್ನೆಲೆ ಕೋರಮಂಗಲ ಪೊಲೀಸರು ಪ್ರಕರಣವನ್ನ ಇನ್ನಷ್ಟು ಚುರುಕುಗೊಳಿಸಿದ್ದಾರೆ.

ಪ್ರಕರಣದಲ್ಲಿ ಈತನೇ ಆರೋಪಿಯಾಗಿರಬಹುದು ಎಂದು ಶಂಕಿಸಿದ್ದ ವ್ಯಕ್ತಿಯೇ ಶವವಾಗಿ ಪತ್ತೆಯಾಗಿರುವ ಹಿನ್ನಲೆ ನಿಜವಾದ ಕೊಲೆ ಆರೋಪಿಗಳನ್ನು ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಸದ್ಯ ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದ್ದು, ಸುತ್ತಮುತ್ತಲಿನ ಸುಮಾರು 50 ಸಿಸಿಟಿವಿ ಪರಿಶೀಲನೆ ನಡೆಸಲಾಗಿದೆ. ನೆಟ್ ವರ್ಕ್ ಡಂಪ್, ಸಿಡಿಆರ್ ತೆಗೆದು ಆರೋಪಿಗಳ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ.

ಇದನ್ನೂ ಓದಿ: ಮನೆಗೆಲಸದವನನ್ನು ಕೊಂದು ಲೂಟಿ ಕೇಸ್​ಗೆ ಟ್ವಿಸ್ಟ್, ಶಂಕಿತ ವ್ಯಕ್ತಿಯೇ ಶವವಾಗಿ ಪತ್ತೆ: ಚುರುಕುಗೊಂಡ ಅವಳಿ ಕೊಲೆ ಕೇಸ್​ ತನಿಖೆ

ಮನೆಯವರು ಇಲ್ಲದಿರುವ ವಿಚಾರ ತಿಳಿದೇ ಕಳ್ಳತನ ಮಾಡಿರುವ ಬಗ್ಗೆ ಪೊಲೀಸರಲ್ಲಿ ಅನುಮಾನ ವ್ಯಕ್ತವಾಗಿದ್ದು, ಸುತ್ತಮುತ್ತಲಿನ ಎಲ್ಲಾ ಕನ್ಟ್ರಕ್ಷನ್ ಕಟ್ಟಡಗಳ ಕೆಲಸಗಾರರ ಬಗ್ಗೆಯು ಮಾಹಿತಿ ಕಲೆಹಾಕಲಾಗುತ್ತಿದೆ. ಯಾರಾದರು ನಿನ್ನೆ ಅಥಾವ ಮೊನ್ನೆ ಕೆಲಸ ಬಿಟ್ಟು ಊರಿಗೆ ಹೋದವರಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆಸುತ್ತಿದ್ದು, ಸುತ್ತ ಮುತ್ತಲಿನ ಸೆಕ್ಯೂರಿಟಿ ಗಾರ್ಡ್​​ಗಳ ಪೂರ್ವ ಪರ ವಿಚಾರಣೆಯೂ ನಡೆಯುತ್ತಿದೆ.

ಇದನ್ನೂ ಓದಿ: ಮಧ್ಯಪ್ರದೇಶ: ಸಂಬಳದ ಬಾಕಿ ಹಣ ₹9000 ಕೇಳಿದ್ದಕ್ಕೆ ದಲಿತ ವ್ಯಕ್ತಿಯ ಕೈ ಕತ್ತರಿಸಿದ ಮಾಲೀಕ

ಯಾರಾದರೂ ಕಲ್ಕತ್ತಾ ಅಥಾವ ನೇಪಾಳದಿಂದ ಕೆಲಸಕ್ಕೆ ಬಂದಿದ್ದಾರಾ? ಈತ್ತಿಚೀಗೆ ಯಾರಾದರೂ ಕೆಲಸ ಬಿಟ್ಟು ಹೋಗಿದ್ದಾರಾ ಎನ್ನುವ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ಸುತ್ತಮುತ್ತಲಿನ ಅಂಗಡಿಯಲ್ಲಿ ಕೆಲಸ ಮಾಡಿದವರು, ಕೆಲಸ ಬಿಟ್ಟು ಹೋದವರ ಬಗ್ಗೆ ಮಾಹಿತ ಕಲೆ ಹಾಕಿಕೊಳ್ಳಲಾಗುತ್ತಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:10 am, Mon, 19 December 22