ಮನೆಗೆಲಸದವನನ್ನು ಕೊಂದು ಲೂಟಿ ಕೇಸ್​ಗೆ ಟ್ವಿಸ್ಟ್, ಶಂಕಿತ ವ್ಯಕ್ತಿಯೇ ಶವವಾಗಿ ಪತ್ತೆ: ಚುರುಕುಗೊಂಡ ಅವಳಿ ಕೊಲೆ ಕೇಸ್​ ತನಿಖೆ

ಮನೆಗೆಲಸದವನನ್ನು ಕೊಂದು ಲೂಟಿ ಕೇಸ್​ಗೆ ಟ್ವಿಸ್ಟ್ ಸಿಕ್ಕಿದ್ದು, ಮನೆಯ ಸಂಪಿನಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ.

ಮನೆಗೆಲಸದವನನ್ನು ಕೊಂದು ಲೂಟಿ ಕೇಸ್​ಗೆ ಟ್ವಿಸ್ಟ್, ಶಂಕಿತ ವ್ಯಕ್ತಿಯೇ ಶವವಾಗಿ ಪತ್ತೆ: ಚುರುಕುಗೊಂಡ ಅವಳಿ ಕೊಲೆ ಕೇಸ್​ ತನಿಖೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 18, 2022 | 8:15 PM

ಬೆಂಗಳೂರು: ಮನೆಗೆಲಸದವನನ್ನು ಬರ್ಬರವಾಗಿ ಹತ್ಯೆ (murder) ಮಾಡಿ ಮನೆ ಲೂಟಿ (robbery) ಮಾಡಿ ಹಂತಕರು ಪರಾರಿಯಾಗಿರುವಂತಹ ಘಟನೆ ನಗರದ ಕೋರಮಂಗಲದ 6ನೇ ಬ್ಲಾಕ್​ನಲ್ಲಿ ನಡೆದಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಬಿಲ್ಡರ್​ ಮನೆಯಲ್ಲಿ ಅವಳಿ ಕೊಲೆ ಬೆಳಕಿಗೆ ಬಂದಿದೆ. ಬಿಲ್ಡರ್​ ಮನೆಯ ಸಂಪ್​ನಲ್ಲಿ ಸೆಕ್ಯೂರಿಟಿ ಗಾರ್ಡ್ ಮೃತದೇಹ ಪತ್ತೆಯಾಗಿದೆ.  ರಾಜಗೋಪಾಲರೆಡ್ಡಿ ಕುಟುಂಬದವರು ಬೇರೆಡೆ ತೆರಳಿದ್ದಾಗ ಕೃತ್ಯ ಮಾಡಲಾಗಿದೆ ಎನ್ನಲಾಗುತ್ತಿದೆ. ರಾಜಗೋಪಾಲರೆಡ್ಡಿ ಮನೆಗೆಲಸದಾತ ಕರಿಯಪ್ಪ ಈ ಮುಂಚೆ ಹತ್ಯೆಯಾಗಿತ್ತು. ಅಡುಗೆ ಕೆಲಸದವರು ಮನೆಗೆ ಬಂದಾಗ ಕೊಲೆ ವಿಚಾರ ಬೆಳಕಿಗೆ ಬಂದಿತ್ತು. ಇದೀಗ ಸಂಪ್​ನಲ್ಲಿ ಸೆಕ್ಯೂರಿಟಿ ಗಾರ್ಡ್​ ದಿಲ್ ಬಹದ್ದೂರ್​ ಶವ ಪತ್ತೆಯಾಗಿದೆ. ಕಳೆದ 2 ವರ್ಷದಿಂದ ದಿಲ್ ಬಹದ್ದೂರ್ ಸೆಕ್ಯೂರಿಟಿ ಗಾರ್ಡ್ ಆಗಿದ್ದ.​ ಕರಿಯಪ್ಪನನ್ನು ಕೊಂದು ದಿಲ್ ಬಹದ್ದೂರ್​ ಪರಾರಿ ಶಂಕೆ ವ್ಯಕ್ತವಾಗಿತ್ತು. ಪೊಲೀಸರ ಪರಿಶೀಲನೆ ವೇಳೆ ಸಂಪ್​ನಲ್ಲಿ ದಿಲ್ ಬಹದ್ದೂರ್​ ಶವ ಪತ್ತೆಯಾಗಿದೆ. ಕೋರಮಂಗಲ ಠಾಣೆ ಪೊಲೀಸರಿಂದ ಜೋಡಿ ಕೊಲೆ ಪ್ರಕರಣದ ತನಿಖೆ ನಡೆಯುತ್ತಿದೆ.

2. ಅನ್ನ ಹಾಕಿದ ಕಂಪನಿಗೆ ಕನ್ನ ಹಾಕಿದ ಭೂಪ

ಬೆಂಗಳೂರು: ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ಒಳ್ಳೆಯವನಂತೆ ನಟಿಸಿ ಕಳ್ಳತನ ಮಾಡಿದ ನೌಕರ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ವಿನಯ್ ಎಂಬಾತ ಓಗೋ (VOGO Bike) ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಬೈಕ್​ನ ಜಿಪಿಎಸ್ ಸಿಸ್ಟಂ ಸೇರಿ ಕಂಪನಿ ವ್ಯವಸ್ಥೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದ ಈತ 8 ತಿಂಗಳ ಹಿಂದೆ ಕೆಲಸ ಬಿಟ್ಟು ಮನೆಯಲ್ಲೇ ನೆಲೆಸಿದ್ದನು. ಇದೇ ವೇಳೆ ಐಷಾರಾಮಿ ಜೀವನಕ್ಕಾಗಿ ತನಗೆ ಅನ್ನ ಕೊಟ್ಟ ಕಂಪನಿಯ ಮೇಲೆ ಕಣ್ಣು ಹಾಕಿದ್ದಾನೆ.

ಓಗೋ ಕಂಪನಿಯ ಆಕ್ಟಿವಾಗಳನ್ನು ಕಳ್ಳತನ ಮಾಡಲು ತುಮಕೂರಿನ ಗೆಳೆಯ ನಂದನ್ ಸಂಪರ್ಕಿಸಿದ್ದಾನೆ. ಅದರಂತೆ ಇಬ್ಬರು ಜೊತೆಗೂಡಿ ಪ್ಲಾನ್ ರೂಪಿಸಿ ಓಗೋ ಕಂಪನಿ ಪಾರ್ಕಿಂಗ್ ಸ್ಥಳಗಳನ್ನ ಗುರುತಿಸಿ ಬೈಕ್​ನಲ್ಲಿದ್ದ ಜಿಪಿಎಸ್ ಸಿಸ್ಟಮ್ ಡಿಸ್ ಕನೆಕ್ಟ್ ಮಾಡುತ್ತಿದ್ದರು.

ಇದನ್ನೂ ಓದಿ: ಮೈಸೂರು: ಅರೆ ಬೆತ್ತಲೆ ಫೋಟೋ ಕಳಿಸಿ ಯುವಕರನ್ನು ಬುಟ್ಟಿಗೆ ಬೀಳಿಸಿ ಹಣ ಪೀಕುತ್ತಿದ್ದ ಖತರ್ನಾಕ್ ಮಹಿಳೆ ಅರೆಸ್ಟ್

3. ಗೌರಿಬಿದನೂರು ನಗರಸಭೆ ಅಧ್ಯಕ್ಷೆಯ ಪತಿ ಲೋಕಾಯುಕ್ತ ಬಲೆಗೆ

ಚಿಕ್ಕಬಳ್ಳಾಪುರ: ಗೌರಿಬಿದನೂರು ನಗರಸಭೆ ಅಧ್ಯಕ್ಷೆಯ ಪತಿ ಮತ್ತು ಇಬ್ಬರು ನಗರಸಭಾ ಸದಸ್ಯರನ್ನು ಬಂಧಿಸಿರುವಂತಹ ಘಟನೆ ಬೆಂಗಳೂರು ಹೊರವಲಯ ರಾಜಾನುಕುಂಟೆ ರೆಸಾರ್ಟ್​ನಲ್ಲಿ ನಡೆದಿದೆ. ಜಿಲ್ಲೆಯ ಗೌರಿಬಿದನೂರು ನಗರಸಭೆ ಅಧ್ಯಕ್ಷೆ ರೂಪಾ ಪತಿ ಅನಂತರಾಜು, ನಗರಸಭಾ ಸದಸ್ಯರಾದ ಮಂಜುನಾಥ್, ಗೋಪಿ ಬಂಧಿತರು. 20 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಹಣ ಸಮೇತ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಲೇಔಟ್​​ ಅನುಮೋದನೆಗಾಗಿ ಬಡಾವಣೆ ಮಾಲೀಕರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್​ಪಿ ಪ್ರವೀಣ್​ ನೇತೃತ್ವದಲ್ಲಿ ಬಂಧನ ಮಾಡಲಾಗಿದೆ.

ಇದನ್ನೂ ಓದಿ; ಹೊಸಪೇಟೆ: ಕಾಲುವೆಯಲ್ಲಿ ಈಜಲು ಹೋಗಿದ್ದ 6 ವಿದ್ಯಾರ್ಥಿಗಳ ಪೈಕಿ ಮೂವರು ನೀರುಪಾಲು

4. ಕೆರೆಯಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾವು

ಚಿತ್ರದುರ್ಗ: ಕೆರೆಯಲ್ಲಿ ಮುಳುಗಿ (drown) ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವಂತಹ (death) ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ದುರ್ಗಮ್ಮ(25), ಮಗ ಅಜ್ಜಯ್ಯ(6), ಪುತ್ರಿ ಸೇವಂತಿ(4) ಮೃತರು. ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯ ನಿವಾಸಿಗಳು. ಬೋಸೇದೇವರಹಟ್ಟಿ ಜಾತ್ರೆಗೆಂದು ಸಂಬಂಧಿಕರ ಮನೆಗೆ ಪತಿ ಮಹಾಂತೇಶ ಕರೆತಂದಿದ್ದರು. ಈ ವೇಳೆ ಗಂಗಾ ಪೂಜೆಗೆಂದು ನಾಯಕನಹಟ್ಟಿ ಹಿರೇಕೆರೆಗೆ ಮಹಾಂತೇಶ ಕರೆದುಕೊಂಡು ಹೋಗಿದ್ದಾರೆ. ಪತ್ನಿ ಮತ್ತು ಮಕ್ಕಳನ್ನು ಕೆರೆ ನೀರಿಗೆ ತಳ್ಳಿ ಪತಿಯೇ ಕೊಂದಿರುವ ಶಂಕೆ ವ್ಯಕ್ತವಾಗಿದೆ. ಪತಿ ಮಹಾಂತೇಶನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹಿರೇಕೆರೆಯಲ್ಲಿ ಶವಗಳಿಗಾಗಿ ಅಗ್ನಿಶಾಮಕ ದಳ ಶೋಧ ಆರಂಭಿಸಿದೆ. ನಾಯಕನಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:08 pm, Sun, 18 December 22

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್