ಮೈಸೂರು: ಅರೆ ಬೆತ್ತಲೆ ಫೋಟೋ ಕಳಿಸಿ ಯುವಕರನ್ನು ಬುಟ್ಟಿಗೆ ಬೀಳಿಸಿ ಹಣ ಪೀಕುತ್ತಿದ್ದ ಖತರ್ನಾಕ್ ಮಹಿಳೆ ಅರೆಸ್ಟ್

ಸವಿತಾ ಆಲಿಯಾಸ್ ಮಂಜುಳ ಯಾದವ್ ಮೈಸೂರಿನಲ್ಲಿ ವಾಸವಾಗಿದ್ದು ವಾಟ್ಸ್ ಅಫ್ ಚಾಟ್ ಮಾಡಿ ತನ್ನ ಅರೆ ನಗ್ನ ಫೋಟೋಗಳನ್ನ ಸೆಂಡ್ ಮಾಡಿ ಪುರುಷರು, ಯುವಕರನ್ನು ತನ್ನ ಮಾಯಾ ಜಾಲಕ್ಕೆ ಸಿಲುಕುವಂತೆ ಮಾಡುತ್ತಿದ್ದಳು.

ಮೈಸೂರು: ಅರೆ ಬೆತ್ತಲೆ ಫೋಟೋ ಕಳಿಸಿ ಯುವಕರನ್ನು ಬುಟ್ಟಿಗೆ ಬೀಳಿಸಿ ಹಣ ಪೀಕುತ್ತಿದ್ದ ಖತರ್ನಾಕ್ ಮಹಿಳೆ ಅರೆಸ್ಟ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Dec 18, 2022 | 3:12 PM

ಮೈಸೂರು: ಬೆತ್ತಲೆ ಫೋಟೋ ಕಳುಹಿಸಿ ಯುವಕ, ಪುರುಷರನ್ನ ಬುಟ್ಟಿಗೆ ಬೀಳಿಸಿ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮೂಲತಃ ಪಿರಿಯಾಪಟ್ಟಣ ತಾಲೂಕಿನ ಸವಿತಾ ಆಲಿಯಾಸ್ ಮಂಜುಳ ಯಾದವ್ ಮೈಸೂರಿನಲ್ಲಿ ವಾಸವಾಗಿದ್ದು ವಾಟ್ಸ್ ಅಫ್ ಚಾಟ್ ಮಾಡಿ ತನ್ನ ಅರೆ ನಗ್ನ ಫೋಟೋಗಳನ್ನ ಸೆಂಡ್ ಮಾಡಿ ಪುರುಷರು, ಯುವಕರನ್ನು ತನ್ನ ಮಾಯಾ ಜಾಲಕ್ಕೆ ಸಿಲುಕುವಂತೆ ಮಾಡುತ್ತಿದ್ದಳು.

ಈಕೆ ಅಮಾಯಕರನ್ನು ಯಾಮಾರಿಸಿ ಲಕ್ಷ ಲಕ್ಷ ಹಣ ಕೀಳುತ್ತಿದ್ದಳು. ಇದೇ ರೀತಿ ಮೈಸೂರಿನಲ್ಲಿ ಪರಿಚಯಸ್ಥ ದಂಪತಿಗೆ ಯಾಮಾರಿಸಿ ಲಕ್ಷ ಹಣ ಪೀಕಿದ್ದಾಳೆ. ಬಳಿಕ ಕೊಟ್ಟ ಹಣವನ್ನು ಕೇಳುವುದಕ್ಕೆ ಬಂದ ದಂಪತಿ ಮೇಲೆ ಹಲ್ಲೆ ಮಾಡಲು ಹೋಗಿದ್ದಾಳೆ. ಇನ್ನೂ ಸಾಲ ಕೇಳಲು ಹೋದರೆ ಬೆತ್ತಲೆ ಫೋಟೋ ಕಳುಹಿಸಿ ಬ್ಲಾಕ್ ಮೇಲ್ ಮಾಡಿದ್ದಾರೆ. ಅಲ್ಲದೆ ವಿಜಯನಗರ 2ನೇ ಹಂತದ ವಾಟರ್ ಟ್ಯಾಂಕ್ ಬಳಿಯ ಅಭಿಷೇಕ್ ರಸ್ತೆಯಲ್ಲಿರುವ ಸ್ಪಾ ಹೆಸರಲ್ಲಿ ವೈಶ್ಯವಾಟಿಕೆ ದಂಧೆ ನಡೆಸಿರುವ ಆರೋಪ ಕೂಡ ಈಕೆ ಮೇಲೆ ಕೇಳಿ ಬಂದಿದೆ. ಸದ್ಯ ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸವಿತಾಳನ್ನ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಬಿರಿಯಾನಿ ಮಾಡೋಕೆ ಕುಕ್ಕರ್ ಕೊಂಡೊಯ್ಯುತ್ತಿದ್ದನೆಂದು ಭಾವಿಸಿದ್ರಾ ನೀವು: ಡಿಕೆಶಿಗೆ ಸಿ.ಟಿ.ರವಿ ಪ್ರಶ್ನೆ

ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳು ಅರೆಸ್ಟ್

ನೆಲಮಂಗಲದ ಮಾಗಡಿ ರಸ್ತೆಯಲ್ಲಿನ‌ ಚಿಕ್ಕಗೊಲ್ಲರಹಟ್ಟಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಾದನಾಯಕನಹಳ್ಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಹಾಗೂ ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. ಗಿರೀಶ್ ಹಾಗೂ ಸುಮಾ ಬಂಧಿತ ಆರೋಪಿಗಳು. ಕೆಂಪಣ್ಣ ಎನ್ನುವವರ ಮನೆ ಬಾಡಿಗೆಗೆ ಪಡೆದು ವೇಶ್ಯಾವಟಿಕೆ ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:50 pm, Sun, 18 December 22