AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಇ-ಖಾತಾ ಅಕ್ರಮ: ಸಹಾಯಕ ಆಯುಕ್ತ ಸೇರಿ 31 ಮಂದಿ ವಿರುದ್ಧ ಎಫ್ಐಆರ್ ದಾಖಲು!

ಬೆಂಗಳೂರಿನ ಇ-ಖಾತಾ ಅಕ್ರಮ ಪ್ರಕರಣದಲ್ಲಿ ಸಹಾಯಕ ಆಯುಕ್ತ ಬಸವರಾಜ್ ಮಾಘಿ ಸೇರಿದಂತೆ 31 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕೆ.ಆರ್. ಪುರಂ ಮತ್ತು ಹೊರಮಾವು ವ್ಯಾಪ್ತಿಯ 98 ಅನರ್ಹ ಆಸ್ತಿಗಳಿಗೆ ನಿಯಮಬಾಹಿರವಾಗಿ ಇ-ಖಾತಾ ಮಂಜೂರು ಮಾಡಿದ ಆರೋಪ ಕೇಳಿಬಂದಿದೆ. ಬ್ಯಾಂಕ್‌ಗಳಿಗೆ ಸೀಮಿತವಾಗಿದ್ದ ವಿಶೇಷ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡಿರುವ ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ಇ-ಖಾತಾ ಅಕ್ರಮ: ಸಹಾಯಕ ಆಯುಕ್ತ ಸೇರಿ 31 ಮಂದಿ ವಿರುದ್ಧ ಎಫ್ಐಆರ್ ದಾಖಲು!
ಸಾಂದರ್ಭಿಕ ಚಿತ್ರImage Credit source: KEPR
ಭಾವನಾ ಹೆಗಡೆ
|

Updated on: Nov 14, 2026 | 10:02 AM

Share

ಮುಖ್ಯಾಂಶಗಳು

  • ಬೆಂಗಳೂರಿನ ಇ-ಖಾತಾ ಅಕ್ರಮ ಪ್ರಕರಣದಲ್ಲಿ ಸಹಾಯಕ ಆಯುಕ್ತ ಸೇರಿ 31 ಮಂದಿ ವಿರುದ್ಧ FIR ದಾಖಲು.
  • ಕೆ.ಆರ್. ಪುರಂ, ಹೊರಮಾವು ವ್ಯಾಪ್ತಿಯ 98 ಅನರ್ಹ ಆಸ್ತಿಗಳಿಗೆ ಇ-ಖಾತಾ ಮಂಜೂರು ಆರೋಪ.
  • ಬ್ಯಾಂಕ್‌ಗಳಿಗೆ ಸೀಮಿತ ಸೌಲಭ್ಯ ದುರುಪಯೋಗಪಡಿಸಿಕೊಂಡು ಖಾಸಗಿ ಆಸ್ತಿಗಳಿಗೆ ಖಾತಾ ವಿತರಣೆ ಆರೋಪ.

ಬೆಂಗಳೂರು, ನವೆಂಬರ್ 14: ಬೆಂಗಳೂರಿನಲ್ಲಿ ಇ-ಖಾತಾ ಅಕ್ರಮ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ನಿಯಮಬಾಹಿರವಾಗಿ ಇ-ಖಾತಾ ವಿತರಿಸಿದ ಆರೋಪದ ಮೇಲೆ ಸಹಾಯಕ ಆಯುಕ್ತ ಬಸವರಾಜ್ ಎನ್. ಮಾಘಿ ಸೇರಿದಂತೆ ಒಟ್ಟು 31 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಜಿಬಿಎ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ನೀಡಿದ ದೂರಿನ ಆಧಾರದ ಮೇಲೆ ಹಲಸೂರು ಗೇಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬ್ಯಾಂಕ್‌ಗಳಿಗೆ ಮಾತ್ರ ಸೀಮಿತವಾಗಿದ್ದ ವಿಶೇಷ ಸೌಲಭ್ಯವನ್ನು ದುರುಪಯೋಗಪಡಿಸಿಕೊಂಡು ಅನರ್ಹ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬ್ಯಾಂಕ್‌ಗಳ ಹೆಸರಿನಲ್ಲಿ ಇ-ಖಾತಾ ಅಕ್ರಮ?

ಸಾಮಾನ್ಯವಾಗಿ SARFAESI ಕಾಯ್ದೆಯಡಿ ಬ್ಯಾಂಕ್‌ಗಳು ಸಾಲ ಮರುಪಾವತಿಯಾಗದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡು ಹರಾಜು ಹಾಕುವ ಪ್ರಕ್ರಿಯೆಯಲ್ಲಿ ಇ-ಖಾತಾ ಪಡೆಯಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಈ ಸೌಲಭ್ಯವನ್ನು ಕೆಲವು ಅಧಿಕಾರಿಗಳು ಕಟ್ಟಡ ನಿರ್ಮಾಣಕಾರರು ಮತ್ತು ಖಾಸಗಿ ಅರ್ಜಿದಾರರೊಂದಿಗೆ ಸೇರಿಕೊಂಡು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ.

ನಿಯಮದ ಪ್ರಕಾರ ಸಲ್ಲಿಸಬೇಕಾದ SARFAESI ಆದೇಶ ಅಥವಾ ಮಾರಾಟ ಪ್ರಮಾಣಪತ್ರದ ಬದಲಿಗೆ ಸಾಮಾನ್ಯ ಮಾರಾಟ ಪತ್ರ, ಜಂಟಿ ಅಭಿವೃದ್ಧಿ ಒಪ್ಪಂದ ಸೇರಿದಂತೆ ಇತರೆ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇವುಗಳ ಆಧಾರದ ಮೇಲೆ ಅರ್ಹತೆ ಇಲ್ಲದ ನಿವೇಶನ ಹಾಗೂ ಕಟ್ಟಡಗಳಿಗೆ ಇ-ಖಾತಾ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

98 ಅನರ್ಹ ಆಸ್ತಿಗಳಿಗೆ ಇ-ಖಾತಾ ಮಂಜೂರು ಆರೋಪ!

ಕೆ.ಆರ್. ಪುರಂ ವಿಭಾಗದ ಸಹಾಯಕ ಆಯುಕ್ತ ಹಾಗೂ ಪ್ರಭಾರ ಕಂದಾಯ ಅಧಿಕಾರಿ ಬಸವರಾಜ್ ಮಾಘಿ ವಿರುದ್ಧ ಪ್ರಮುಖ ಆರೋಪ ಕೇಳಿಬಂದಿದೆ. ಜನವರಿ 29ರಿಂದ ಜೂನ್ 19, 2026ರವರೆಗೆ ಅವರ ಲಾಗಿನ್ ಮೂಲಕ ಹೊರಮಾವು ಮತ್ತು ಕೆ.ಆರ್. ಪುರಂ ಪ್ರದೇಶಗಳಲ್ಲಿ 98 ಅನರ್ಹ ಆಸ್ತಿಗಳಿಗೆ ಇ-ಖಾತಾ ನೀಡಲಾಗಿದೆ ಎನ್ನಲಾಗಿದೆ. ಈ ಅಕ್ರಮದಲ್ಲಿ ಒಟ್ಟು 31 ಮಂದಿಯ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.

ಈ ಪ್ರಕರಣದಲ್ಲಿ ಕ್ರಿಮಿನಲ್ ಸಂಚು, ವಂಚನೆ, ನಕಲಿ ದಾಖಲೆ ಸೃಷ್ಟಿ ಹಾಗೂ ಅವುಗಳನ್ನು ನೈಜ ದಾಖಲೆಗಳಂತೆ ಬಳಕೆ ಮಾಡಿದ ಆರೋಪಗಳ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ಕೆಂಗೇರಿ ವಿಭಾಗದ ಸಹಾಯಕ ಆಯುಕ್ತೆ ಲೋಕಮಾತಾ ಡಿ.ಎಸ್. ಮತ್ತು ಬಸವರಾಜ್ ಮಾಘಿ ಅವರನ್ನು ಅಮಾನತುಗೊಳಿಸಲು ಶಿಫಾರಸು ಮಾಡಲಾಗಿತ್ತು. ಇದೀಗ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಇ-ಖಾತಾ ಅಕ್ರಮದಲ್ಲಿ ಇನ್ನೂ ಯಾರ‍್ಯಾರ ಕೈವಾಡವಿದೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
ಮೋದಿ ಬೆಂಗಾವಲು ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ: ಮೈಸೂರಿನಲ್ಲೇ ಬಾಕಿ
ಮೋದಿ ಬೆಂಗಾವಲು ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ: ಮೈಸೂರಿನಲ್ಲೇ ಬಾಕಿ
ಕ್ಯಾಪ್ಟನ್ ಆದರೂ ಜಗದೀಶ್​​ಗೆ ಕಡಿಮೆ ಆಗಿಲ್ಲ ಭಯ; ಎಲಿಮಿನೇಷನ್ ಆತಂಕ
ಕ್ಯಾಪ್ಟನ್ ಆದರೂ ಜಗದೀಶ್​​ಗೆ ಕಡಿಮೆ ಆಗಿಲ್ಲ ಭಯ; ಎಲಿಮಿನೇಷನ್ ಆತಂಕ
ಇಂದು ಈ ರಾಶಿಯವರು ಮರೆತ ಹಣ ವಾಪಸ್ ಸಿಗುವ ಸಾಧ್ಯತೆ
ಇಂದು ಈ ರಾಶಿಯವರು ಮರೆತ ಹಣ ವಾಪಸ್ ಸಿಗುವ ಸಾಧ್ಯತೆ
ವೇದಿಕೆಯಲ್ಲೇ ಅಸ್ವಸ್ಥಗೊಂಡ ಮಹಿಳಾ ಕಾರ್ಯಕರ್ತೆ: ನೆರವಿಗೆ ಧಾವಿಸಿದ ಮೋದಿ
ವೇದಿಕೆಯಲ್ಲೇ ಅಸ್ವಸ್ಥಗೊಂಡ ಮಹಿಳಾ ಕಾರ್ಯಕರ್ತೆ: ನೆರವಿಗೆ ಧಾವಿಸಿದ ಮೋದಿ
ರಾಜ್ಯಪಾಲೆ ಡಾ. ಸುಧಾ ಯಾದವ್ ತ್ಯಾಗವನ್ನು ಕೊಂಡಾಡಿದ ಪ್ರಧಾನಿ ಮೋದಿ
ರಾಜ್ಯಪಾಲೆ ಡಾ. ಸುಧಾ ಯಾದವ್ ತ್ಯಾಗವನ್ನು ಕೊಂಡಾಡಿದ ಪ್ರಧಾನಿ ಮೋದಿ
ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ
ಬಿಗ್ ಬಾಸ್ ಕನ್ನಡ: ಸ್ವಾಭಿಮಾನ ಬಿಟ್ಟು ನಾನು ಆಟ ಆಡಲ್ಲ; ಶಪಥ ಮಾಡಿದ ಗಾನವಿ
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ಮೇಕೆದಾಟು ಯೋಜನೆಗೆ ಪ್ರಧಾನಿ ಮೋದಿ ಅನುಮತಿ ಕೋರಿದ ಸಿಎಂ ಡಿಕೆಶಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ 'ಟಿಲ್ಟೆಡ್ ಎಲ್‌ಇಡಿ ತಾರಾಲಯ' ಉದ್ಘಾಟಿಸಿದ ಪ್ರಧಾನಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ವಿಶ್ವದ ಮೊದಲ ಟಿಲ್ಟೆಡ್ ಎಲ್​ಇಡಿ ತಾರಾಲಯ 'ಕಾಸ್ಮೋಸ್' ಉದ್ಘಾಟಿಸಿದ ಮೋದಿ
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್
ಪ್ರಧಾನಿ ಮೋದಿ ಎದುರು ಸಾಲು ಸಾಲು ಬೇಡಿಕೆಯಿಟ್ಟ ಸಿಎಂ ಡಿ.ಕೆ. ಶಿವಕುಮಾರ್