Bengaluru Power Cut: ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಪವರ್​ ಕಟ್; ಯಾವ ಯಾವ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ ಗೊತ್ತಾ?​

ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಯಾವ ಯಾವ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

Bengaluru Power Cut: ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಪವರ್​ ಕಟ್; ಯಾವ ಯಾವ ಏರಿಯಾಗಳಲ್ಲಿ ಕರೆಂಟ್ ಇರಲ್ಲಾ ಗೊತ್ತಾ?​
ವಿದ್ಯುತ್ ವ್ಯತ್ಯಯ
Edited By:

Updated on: Oct 12, 2021 | 12:39 PM

ಬೆಂಗಳೂರಿನಲ್ಲಿ ಹಲವು ಏರಿಯಾಗಳಲ್ಲಿ ಇಂದು (ಅಕ್ಟೋಬರ್ 12, ಮಂಗಳವಾರ) ಮತ್ತು ನಾಳೆ (ಅಕ್ಟೋಬರ್ 13, ಬುಧವಾರ) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (BESCOM) ತಿಳಿಸಿದೆ. ಇಂದು ಮತ್ತು ನಾಳೆ ಯಾವ ಯಾವ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಇಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ ಎಚ್ಎಸ್ಆರ್ ಲೇಔಟ್ ವಿಭಾಗದ ಇತರ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಬಿಕೆ ವೃತ್ತ, ಗೊಟ್ಟಿಗೆರೆ, ಪವಮಾನ ನಗರ, ಸುರಭಿ ನಗರ, ಹೊಸ ರಸ್ತೆ, ಕೋನಪ್ಪನ ಅಗ್ರಹಾರ ಮತ್ತು ಕ್ಲಬ್ ರೋಡ್ ಸರ್ಕಲ್​ಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಸಿಂಗಸಂದ್ರ, ಎಇಸಿಎಸ್ ಲೇಔಟ್, ಎಲೆಕ್ಟ್ರಾನಿಕ್ ಸಿಟಿ, ಮಡಿವಾಳ ಮಾರ್ಕೆಟ್ ಮತ್ತು ಉತರ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 1:30ರವರೆಗೆ ವಿದ್ಯುತ್ ಕಡಿತವಾಗಲಿದೆ. ಜತೆಗೆ ಕ್ಲಬ್ ರೋಡ್ ಸರ್ಕಲ್ ಮತ್ತು ಸುತ್ತಲಿನ ಏರಿಯಾ, ಹೆಚ್ಎಸ್ಆರ್ ಲೇಔಟ್, ಕಿಮ್ಸ್ ಕಾಲೇಜ್, ಓಲ್ಡ್ ಏರ್ಪೋರ್ಟ್ ರೋಡ್, ಸಿದ್ದಾಪುರ, ಉತ್ತರಹಳ್ಳಿ ಮತ್ತು ಸುತ್ತಲಿನ ಏರಿಯಾಗಳಲ್ಲಿ ಇಂದು ವಿದ್ಯುತ್ ಕಡಿತವಾಗಲಿದೆ. ಜತೆಗೆ ಆರ್​ಬಿಐ ಲೇಔಟ್, ಶ್ರೀನಿಧಿ ಲೇಔಟ್, ದೊಡ್ಮನೆ ಇಂಡಸ್ಟ್ರಿಯಲ್ ಏರಿಯಾ, ಜೆಪಿ ನಗರ 5ನೇ ಹಂತ, ಬಿಟಿಎಮ್ ಲೇಔಟ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10 ರಿಂದ 5:30ರವರೆಗೆ ವಿದ್ಯುತ್ ಕಡಿತವಾಗಲಿದೆ.

ಪಶ್ಚಿಮ ವಲಯದಲ್ಲಿ ಗೋವಿಂದರಾಜ್ ನಗರ, ಸುಬ್ಬಣ್ಣ ಗಾರ್ಡನ್​, ಜಿಕೆ ಡ್ಬ್ಲೂ ಲೇಔಟ್, ವಿನಾಯಕ ಲೇಔಟ್, ಅನುಭವ ನಗರ, ಮಾರುತಿ ನಗರ ಮತ್ತು ರಾಜಾಜಿನಗರ ವಿಭಾಗದ ಗಂಗೊಂಡನ ಹಳ್ಳಿಯಲ್ಲಿ ಬೆಳಿಗ್ಗೆ 10:30ರಿಂದ ಸಂಜೆ 5:30ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಇನ್ನು, ಕೆಂಗೇರಿ ವಿಭಾಗದ ಭೂಮಿಕಾ ಲೇಔಟ್, ಪಂತಗಿರಿ ಮತ್ತು ಕೃಷ್ಣಾ ಗಾರ್ಡನ್​ನಲ್ಲಿ ಇಂದು ಮಂಗಳವಾರ ಬೆಳಿಗ್ಗೆ 9 ರಿಂದ ಸಂಜೆ 5ರ ನಡೆವೆ ವಿದ್ಯುತ್ ಪೂರೈಕೆ ಇರುವುದಿಲ್ಲ.

ಪೂರ್ವ ವಲಯದಲ್ಲಿ, ಹೊಯ್ಸಳ ನಗರ, 11ನೇ ಕ್ರಾಸ್ ಮತ್ತು ಇಂದಿರಾ ನಗರ ವಿಭಾಗದ ಮೀನಾಕ್ಷಿ ದೇವಸ್ಥಾನ ರಸ್ತೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಇನ್ನು, ಶಿವಾಜಿನಗರ ವಿಭಾಗದ ರಾಯಲ್ ಎನ್ಸ್ಕ್ಲೇವ್ ಮತ್ತು ಪೋನಪ್ಪ ಲೇಔಟ್​ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ. ಅದೇ ರೀತಿ, ಭಾರತ್ ನಗರ ಮತ್ತು ಫಾತಿಮಾ ಲೇಔಟ್​ಗಳಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಮತ್ತು ದೂಪನಹಳ್ಳಿಯ ಕೆವು ಭಾಗಗಳಲ್ಲಿ ಮಧ್ಯಾಹ್ನ 2ರಿಂದ 5ರವರೆಗೆ ವಿದ್ಯುತ್ ಕಡಿತವಿರುತ್ತದೆ.

ನಾಳೆ ಬುಧವಾರ (ಅಕ್ಟೋಬರ್ 13) ರಾಜಾಜಿನಗರ, ಆರ್​ಆರ್​ ನಗರ ಮತ್ತು ಕೆಂಗೇರಿ ವಿಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ತುಮಕೂರು ವೃತ್ತದ ತುಮಕೂರು, ಮಧುಗಿರಿ, ಕುಣಿಗಲ್ ಮತ್ತು ತಿಪಟೂರು ವಿಭಾಗಗಳಲ್ಲಿ ವಿದ್ಯುತ್ ಕಡಿತವಾಗಲಿದೆ.

ಬುಧವಾರ ದಕ್ಷಿಣ ವೃತ್ತದ ಜಯನಗರ, ಕೋರಮಂಗಲ ಮತ್ತು ಎಚ್ಎಸ್ಆರ್ ಲೇಔಟ್ ವಿಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇನ್ನು, ರಾಮನಗರ ವೃತ್ತದ ರಾಮನಗರ, ಚಂದಾಪುರ, ಕನಕಪುರ ಮತ್ತು ಮಾಗಡಿ ವಿಭಾಗಗಳಲ್ಲಿ ಅಕ್ಟೋಬರ್ 13 ಅಂದರೆ ನಾಳೆ ವಿದ್ಯುತ್ ವ್ಯತ್ಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಇದನ್ನೂ ಓದಿ:

ಬೆಂಗಳೂರಿನಲ್ಲಿ ಮಳೆ ಅವಾಂತರ; ಏರ್ಪೋರ್ಟ್ ರೋಡ್​ನಲ್ಲಿ ಕೆಟ್ಟು ನಿಂತ 20ಕ್ಕೂ ಹೆಚ್ಚು ಕಾರುಗಳು

ತುಂತುರು ಮಳೆಗೆ ವಾರಾಂತ್ಯದಲ್ಲಿ ಬೆಂಗಳೂರು ಕೂಲ್ ಕೂಲ್; ಖುಷ್​ ಖುಷಿಯಾಗಿ ಓಡಾಡೋಣ ಅಂದ್ರೆ ಜಿಟಿ ಜಿಟಿ ಮಳೆ ಕಾಟ!

Published On - 9:41 am, Tue, 12 October 21