SSLC ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಮಾರಾಮಾರಿ: ಗಲಾಟೆಯಲ್ಲಿ ಮೂವರಿಗೆ ಚಾಕು ಇರಿತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 28, 2024 | 4:07 PM

ಬೆಂಗಳೂರಿನ ರಾಗಿಗುಡ್ಡ(Ragigudda) ಬಳಿ ನಿನ್ನೆ(ಮಾ.27) ಎಸ್ಎಸ್ಎಲ್​ಸಿ(SSLC) ಪರೀಕ್ಷೆ ವೇಳೆ ಅಪ್ರಾಪ್ತ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದು, ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿದ ಘಟನೆ ನಡೆದಿದೆ. ಈ ಕುರಿತು ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

SSLC ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಮಾರಾಮಾರಿ: ಗಲಾಟೆಯಲ್ಲಿ ಮೂವರಿಗೆ ಚಾಕು ಇರಿತ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಮಾ.28: ಎಸ್ಎಸ್ಎಲ್​ಸಿ(SSLC) ಪರೀಕ್ಷೆ ವೇಳೆ ಅಪ್ರಾಪ್ತ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ನಡೆದು, ಮೂವರು ವಿದ್ಯಾರ್ಥಿಗಳಿಗೆ ಚಾಕು ಇರಿದ ಘಟನೆ ಬೆಂಗಳೂರಿನ ರಾಗಿಗುಡ್ಡ(Ragigudda) ಬಳಿ ನಿನ್ನೆ(ಮಾ.27) ನಡೆದಿದೆ. ನಿನ್ನೆ ಎಸ್ಎಸ್ಎಲ್​ಸಿ ಪರೀಕ್ಷೆ ಬರೆಯಲು ಬಂದ ವೇಳೆ ಈ ದುರ್ಘಟನೆ ನಡೆದಿದ್ದು, ಬೇರೆ ಬೇರೆ ಏರಿಯಾದಿಂದ ವಿದ್ಯಾರ್ಥಿಗಳು ರಾಗಿಗುಡ್ಡದ ಪರಿಕ್ಷಾ ಕೇಂದ್ರವಾದ ಖಾಸಗಿ ಶಾಲೆಗೆ ಬಂದಿದ್ದರು. ಈ ವೇಳೆ ಕ್ಷುಲ್ಲಕ ವಿಚಾರಕ್ಕೆ ರಾಗಿಗುಡ್ಡ ಮತ್ತು ಸಾರಕ್ಕಿ ಏರಿಯಾ ವಿದ್ಯಾರ್ಥಿಗಳ ನಡುವೆ ಗಲಾಟೆ ಶುರುವಾಗಿದೆ. ಬಳಿಕ ಪರಿಕ್ಷೆ ಮುಗಿಸಿಕೊಂಡು ಹೋಗುವಾಗ ಮತ್ತೆ ಜಗಳವಾಗಿದ್ದು, ಗಲಾಟೆಯಲ್ಲಿ ಸಾರಕ್ಕಿಯ ಮೂವರು ವಿದ್ಯಾರ್ಥಿಗಳಿಗೆ ರಾಗಿ ಗುಡ್ಡದ ವಿದ್ಯಾರ್ಥಿಗಳು ಚಾಕು ಇರಿದಿದ್ದಾರೆ. ಈ ಕುರಿತು ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನೀರು ಸರಬರಾಜು ಟ್ಯಾಂಕರ್ ಸ್ಟ್ಯಾಂಡ್ ಕಾಲಿನ ಮೇಲೆ‌ ಬಿದ್ದು ಸಿಬ್ಬಂದಿಗೆ ಗಂಭೀರ ಗಾಯ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಮಕ್ತಾಪುರ ಗ್ರಾಮದಲ್ಲಿ ನೀರು ಸರಬರಾಜು ಟ್ಯಾಂಕರ್ ಸ್ಟ್ಯಾಂಡ್ ಕಾಲಿನ ಮೇಲೆ‌ ಬಿದ್ದು ನೀರು ಪೂರೈಕೆ ಮಾಡುವ ಸಿಬ್ಬಂದಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ಮನೆ ಮನೆಗೆ ನೀರು ಸರಬರಾಜು ಮಾಡುವಾಗ ಈ ಅವಘಡ ಸಂಭವಿಸಿದೆ. ಕೂಡಲೇ ಗಾಯಾಳು ದರ್ಶನ, ಶಹಾಪುರ ತಾಲೂಕಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಿನ್ನೆಲೆ ಇಂದು ಟ್ರ್ಯಾಕ್ಟರ್ ಟ್ಯಾಂಕರ್ ಮೂಲಕ ಮನೆ ಮನೆಗೆ ನೀರು ಸರಬರಾಜು ಮಾಡಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರಿಂದ ಇಂದು ಮನೆ ಮನೆಗೆ ನೀರು ಸರಬರಾಜು ಮಾಡಲು ಮುಂದಾದ ವೇಳೆ ಸ್ಟ್ಯಾಂಡ್ ಹಾಕುವಾಗ ದುರ್ಘಟನೆ ನಡೆದಿದೆ. ವಿಷಯ ತಿಳಿದು ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವನ್ನು ವಿಚಾರಿಸಿದ್ದಾರೆ.

ಇದನ್ನೂ ಓದಿ:ಬಾಗಲಕೋಟೆ: ರನ್ನಬೆಳಗಲಿ ಮಸೀದಿಯಲ್ಲಿ ಮಾರಾಮಾರಿ: ಡೋಲಿ, ಶವಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕೆ ಹಲ್ಲೆ

ಮಂಗಳೂರಿನ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ;ಕೊಟ್ಯಾಂತರ ರೂಪಾಯಿ ನಷ್ಟ

ಮಂಗಳೂರು: ಮಂಗಳೂರು ಹೊರವಲಯದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿನ ಫಿಶ್ ಆಯಿಲ್ ಕಾರ್ಖಾನೆಯ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. U.M.ಮೊಹಮ್ಮದ್ ಎಂಬವರಿಗೆ ಸೇರಿದ ಫ್ಯಾಕ್ಟರಿ ಇದಾಗಿದ್ದು, ಶಾರ್ಟ್​​ಸರ್ಕ್ಯೂಟ್​​ನಿಂದಾಗಿ ಫ್ಯಾಕ್ಟರಿಯಲ್ಲಿ ಈ ಅವಘಡ ಸಂಭವಿಸಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ‌ ನಂದಿಸಿದ್ದಾರೆ. ಇದರಿಂದ ಕೊಟ್ಯಂತರ ರೂಪಾಯಿ ನಷ್ಟವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:55 pm, Thu, 28 March 24