ಬಾಗಲಕೋಟೆ: ರನ್ನಬೆಳಗಲಿ ಮಸೀದಿಯಲ್ಲಿ ಮಾರಾಮಾರಿ: ಡೋಲಿ, ಶವಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕೆ ಹಲ್ಲೆ

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಗ್ರಾಮದಲ್ಲೊಂದು ಅಮಾನವೀಯ ಘಟನೆ ಕಂಡುಬಂದಿದೆ. ವೃದ್ಧನ ಶವ ಸಾಗಿಸಲು ಡೋಲಿ ಮತ್ತು ಶವಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕೆ ಮೃತ ಪುತ್ರನ ಮೇಲೆ ಹಲ್ಲೆ ಮಾಡಿದ್ದಾರೆ. ನೀವು ಮುಸ್ಲಿಂ ಸಮಾಜದ ಯಾವುದೇ ಧಾರ್ಮಿಕ ಕಾರ್ಯಕ್ಕೆ ಬರುವುದಿಲ್ಲ. ಸಮಾಜಕ್ಕೆ ಸಹಕಾರ ನೀಡುವುದಿಲ್ಲ ಎಂದು ಶವ ಸಾಗಿಸಲು ಡೋಲಿ ಮತ್ತು ಶವಸಂಸ್ಕಾರಕ್ಕೆ ಸ್ಮಶಾನದಲ್ಲಿ ಜಾಗ ನೀಡಿಲ್ಲ.

ಬಾಗಲಕೋಟೆ: ರನ್ನಬೆಳಗಲಿ ಮಸೀದಿಯಲ್ಲಿ ಮಾರಾಮಾರಿ: ಡೋಲಿ, ಶವಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕೆ ಹಲ್ಲೆ
ಮಸೀದಿಯಲ್ಲಿ ಮಾರಾಮಾರಿ, ಮೃತ ವ್ಯಕ್ತಿ
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ಗಂಗಾಧರ​ ಬ. ಸಾಬೋಜಿ

Updated on:Feb 24, 2024 | 5:24 PM

ಬಾಗಲಕೋಟೆ, ಫೆಬ್ರವರಿ 24: ವೃದ್ಧನ ಶವ ಸಾಗಿಸಲು ಡೋಲಿ (ಶವ ಸಾಗಿಸುವ ಪೆಟ್ಟಿಗೆ) ಮತ್ತು ಶವಸಂಸ್ಕಾರಕ್ಕೆ ಜಾಗ ಕೇಳಿದ್ದಕ್ಕೆ ಮೃತ ಪುತ್ರನ ಮೇಲೆ ಹಲ್ಲೆ (attack) ಮಾಡಿರುವಂತಹ ಘಟನೆ ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನಬೆಳಗಲಿಯಲ್ಲಿ ನಡೆದಿದೆ. ಹುಸೇನಸಾಬ್ ಹುದ್ದಾರ (90) ವಯೋಸಹಜ ಸಾವನ್ನಪ್ಪಿರುವ ವೃದ್ದ. ಶವ ಸಾಗಿಸಲು ಡೋಲಿ ಕೇಳಲು ಮಸೀದಿಗೆ ಪುತ್ರ ವಜೀರ್ ಹೋಗಿದ್ದಾರೆ. ಡೋಲಿ ಕೊಡಲ್ಲ, ಶವಸಂಸ್ಕಾರಕ್ಕೆ ಜಾಗಕೊಡಲ್ಲವೆಂದು ಮುಖಂಡರು ಹೇಳಿದ್ದಾರೆ. ಸಮುದಾಯದ ಯಾವುದೇ ಧಾರ್ಮಿಕ ಕಾರ್ಯಕ್ಕೆ ನೀವು ಬರುವುದಿಲ್ಲ. ನಿಮಗ್ಯಾಕೆ ಡೋಲಿ, ಸ್ಮಶಾನದಲ್ಲಿ ಜಾಗ ಕೊಡಬೇಕೆಂದು ನಿರಾಕರಣೆ ಮಾಡಿದ್ದಾರೆ.

ಈ ವೇಳೆ ವೃದ್ಧನ ಪುತ್ರ ವಜೀರ್​ನನ್ನು ವಿರೋಧಿ ಬಣದ ಮುಸ್ಲಿಮರು ಥಳಿಸಿದ್ದಾರೆ. ಮಹಾಲಿಂಗಪುರದ ಖಾಸಗಿ ಮದರಸಾದ ಮ್ಯಾನೇಜರ್ ನಜೀರ್ ಮೇಲೆ ಲಾಲಾಭಕ್ಷಿ ತೇರದಾಳ ಮತ್ತಿತರರು ಹಲ್ಲೆ ನಡೆಸಿದ್ದಾರೆ. ಹೀಗಾಗಿ ಹುಸೇನ್​ ಕುಟುಂಬಸ್ಥರು ಮನೆಯಲ್ಲೇ ಶವವಿಟ್ಟುಕೊಂಡು ಕೂತಿದ್ದಾರೆ. ಇಷ್ಟೆಲ್ಲಾ ಗಲಾಟೆಯಾದರೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಬಂದಿಲ್ಲ.

ಇದನ್ನೂ ಓದಿ: ಮಸೀದಿಯಲ್ಲಿ ಮಹಿಳೆ ನಮಾಜ್ ಮಾಡಿದ್ದ ಆರೋಪ: ಇಡೀ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ

ಬರಿ ಕೆಲಸಕ್ಕೆ ಹೋದರೆ ಸಾಲದು ಸಮುದಾಯದ ಕಾರ್ಯದಲ್ಲೂ ಸಕ್ರೀಯರಾಗಿರಬೇಕೆಂದು ಹಿರಿಯರು ವಾದ ಮಾಡಿದ್ದಾರೆ. ನಾನು ಮುಖ್ಯವಾದ ಯಾವುದೇ ಧಾರ್ಮಿಕ ಕಾರ್ಯ ಇದ್ದಾಗ ಹಾಜರಾಗಿದ್ದೇನೆ ಎಂದು ವಜೀರ್​ ಕೂಡ ವಾದ ಮಾಡಿದ್ದಾರೆ.

ಟಿವಿ9 ವರದಿ ಫಲಶೃತಿ: ಶವಸಂಸ್ಕಾರಕ್ಕೆ ಹಿರಿಯರು ಒಪ್ಪಿಗೆ

ಟಿವಿ9 ವರದಿ ಫಲಶೃತಿ ಹಿನ್ನೆಲೆ ಸ್ಥಳಕ್ಕೆ ಮುಧೋಳ‌ ಪೊಲೀಸರು ಭೇಟಿ ನೀಡಿದ್ದಾರೆ. ಟಿವಿ9 ವರದಿ‌ ಗಮನಿಸಿದ ಬಾಗಲಕೋಟೆ ಎಸ್​ಪಿ ಅಮರನಾಥರೆಡ್ಡಿ ಕೂಡಲೇ ಮುಧೋಳ ಪೊಲೀಸರಿಗೆ ಸ್ಥಳಕ್ಕೆ ತೆರಳಲು ಸೂಚನೆ ನೀಡಿದ್ದಾರೆ. ಸೂಚನೆ ಮೇರೆಗೆ ರನ್ನಬೆಳಗಲಿ ಗ್ರಾಮಕ್ಕೆ ತೆರಳಿದ ಮುಧೋಳ ಪೊಲೀಸರು ಮುಸ್ಲಿಂ ಹಿರಿಯರ ಜೊತೆ ಮಾತನಾಡಿದ್ದು, ಮನವೊಲಿಕೆ ಜೊತೆಗೆ ಅಡ್ಡಿಪಡಿಸದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ದಯಾಮರಣಕ್ಕಾಗಿ ಪೊಲೀಸರ ಪತ್ರ: ಪ್ರಚಾರಕ್ಕಾಗಿ ಮಾಡಿರಬೇಕು, ನಗಬೇಕು ಅಷ್ಟೇ; ಹೆಚ್​ಕೆ ಪಾಟೀಲ್

ಸದ್ಯ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಹಿರಿಯರು ಒಪ್ಪಿಗೆ ಕೊಟ್ಟಿದ್ದಾರೆ. ಮೃತನ ಮನೆ ಹಾಗೂ ಸ್ಮಶಾನದ ಕಡೆ ಮುಧೋಳ‌ ಪೊಲೀಸರು ಭದ್ರತೆ ನೀಡಿದ್ದಾರೆ. ಈ ಮೊದಲು ಡೋಲಿ‌ ಕೊಡದ ಹಿನ್ನೆಲೆ ಮಹಾಲಿಂಗಪುರ ಪಟ್ಟಣಕ್ಕೆ‌ ಹೋಗಿ ಡೋಲಿ‌ ತರಲಾಗಿತ್ತು. ಊರ ಡೋಲಿ‌ ಕೇಳದೆ ಪರಸ್ಥಳದಿಂದ ತಂದ ಡೋಲಿಯಲ್ಲೇ ಶವ ಸಾಗಿಸಲು ಸಿದ್ದತೆ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:04 pm, Sat, 24 February 24

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ