ಕೋಲಾರದ ಶಾಸಕರು ನಿನ್ನೆ ಸಭಾಪತಿಗಳ ಕಚೇರಿಯಲ್ಲಿ ಮಾಡಿದ್ದು ನಾಟಕವಲ್ಲದೆ ಮತ್ತೇನೂ ಅಲ್ಲ: ಕೆಹೆಚ್ ಮುನಿಯಪ್ಪ
ರಾಜೀನಾಮೆ ಸಲ್ಲಿಸುವ ನಾಟಕ ಮಾಡಿ, ಪಕ್ಷದ ವರಿಷ್ಠನ್ನು ಹೆದಿರಿಸಿ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿ ತಮ್ಮ ಕಾರ್ಯ ಸಾಧಿಸುವ ಪ್ರಯತ್ನ ಅವರು ಮಾಡಿದ್ದರು, ಆದರೆ ಅವರಲ್ಲಿ ಯಾರೊಬ್ಬರೂ ರಾಜೀನಾಮೆ ಕೊಡಲಾರರು ಎಂದು ಮುನಿಯಪ್ಪ ಹೇಳಿದರು.ಅ ಸಭೆಯಲ್ಲಿ ಪಕ್ಷದ ವರಿಷ್ಠರ ಮುಂದೆ ತಮ್ಮ ಬೇಡಿಕೆ ಇಡುತ್ತೇವೆ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಸಚಿವ ಹೇಳಿದರು.
ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು (Congress candidate for Kolar LS seat) ಫೈನಲ್ ಮಾಡುವುದು ಕಗ್ಗಂಟಾಗಿ ಬಿಟ್ಟಿದೆ. ನಿನ್ನೆ ವಿಧಾನ ಪರಿಷತ್ ಸಭಾಪತಿಯವರ ಕಚೇರಿಯಲ್ಲಿ ಮತ್ತು ಹೊರಗೆ ನಡೆದ ನಾಟಕೀಯ ವಿದ್ಯಮಾನಗಳನ್ನು ಕನ್ನಡಿಗರು ನೋಡಿದ್ದಾರೆ. ಇಂದು ಬೆಳಗ್ಗೆ ಡಿಕೆ ಶಿವಕುಮಾರ್ (DK Shivakumar) ಮತ್ತು ಸಿದ್ದರಾಮಯ್ಯ (Siddaramaiah) ನೀಡಿದ ಪ್ರತಿಕ್ರಿಯೆಗಳನ್ನು ಗಮನಿಸಿದರೆ ಎಲ್ಲ ಸರಿಹೋಗಿದೆ ಅಂತ ಅನಿಸಿತ್ತು. ಅದರೆ ಎರಡೂ ಬಣಗಳು–ಕೆಹೆಚ್ ಮುನಿಯಪ್ಪ (KH Muniyappa) ಮತ್ತು ಅವರ ವಿರೋಧಿ ಬಣ ತಮ್ಮತಮ್ಮ ನಿಲುವಿಗೆ ಬದ್ಧವಾಗಿವೆ. ಇದೇ ಹಿನ್ನೆಲೆಯಲ್ಲಿ ಕೋಲಾರ ಮತ್ತ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದು ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುನಿಯಪ್ಪ ನಿನ್ನೆ ಕೋಲಾರದ ಶಾಸಕರು ಮಾಡಿದ್ದು ಬರೀ ಡ್ರಾಮಾ ಅದರ ಹೊರತು ಮತ್ತೇನೂ ಅಲ್ಲ ಎಂದು ಕಟುವಾಗಿ ಟೀಕಿಸಿದರು. ರಾಜೀನಾಮೆ ಸಲ್ಲಿಸುವ ನಾಟಕ ಮಾಡಿ, ಪಕ್ಷದ ವರಿಷ್ಠನ್ನು ಹೆದಿರಿಸಿ ಬೆದರಿಸಿ ಬ್ಲ್ಯಾಕ್ ಮೇಲ್ ಮಾಡಿ ತಮ್ಮ ಕಾರ್ಯ ಸಾಧಿಸುವ ಪ್ರಯತ್ನ ಅವರು ಮಾಡಿದ್ದರು, ಆದರೆ ಅವರಲ್ಲಿ ಯಾರೊಬ್ಬರೂ ರಾಜೀನಾಮೆ ಕೊಡಲಾರರು ಎಂದು ಮುನಿಯಪ್ಪ ಹೇಳಿದರು.ಅ ಸಭೆಯಲ್ಲಿ ಪಕ್ಷದ ವರಿಷ್ಠರ ಮುಂದೆ ತಮ್ಮ ಬೇಡಿಕೆ ಇಡುತ್ತೇವೆ, ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿರುತ್ತೇವೆ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಜೀನಾಮೆ ಸಲ್ಲಿಸಲು ರೆಡಿಯಾಗಿರುವವರ ಬಗ್ಗೆ ಕಾಮೆಂಟ್ ಮಾಡಲ್ಲ; ಹೈಕಮಾಂಡ್ ತೀರ್ಪಿಗೆ ಬದ್ಧ: ಕೆಹೆಚ್ ಮುನಿಯಪ್ಪ