AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಸುಗಳಿಂದ ಟ್ರಾಫಿಕ್​​ ಜಾಮ್​​ ಆಗಿದ್ದಕ್ಕೆ ಅವುಗಳ ಮಾಲೀಕನ ಮೇಲೆ FIR!: ಏರ್​ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ

ಬೆಂಗಳೂರಿನ ರಿಂಗ್ ರಸ್ತೆಯಲ್ಲಿ ಹಸುಗಳಿಂದ ಸಂಚಾರಕ್ಕೆ ಅಡಚಣೆ ಉಂಟಾದ ಕಾರಣ ಅವುಗಳ ಮಾಲೀಕನ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆಯಡಿ ಎಫ್‌ಐಆರ್ (FIR) ದಾಖಲಾಗಿರುವ ಅಪರೂಪದ ಘಟನೆ ಹೆಚ್‌ಎಎಲ್ ಏರ್‌ಪೋರ್ಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಘಟನೆ ನಡೆದಿರುವ ದಿನ ರಿಂಗ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ HAL ಏರ್ಪೋರ್ಟ್​​ ಸಂಚಾರ ಪೊಲೀಸ್‌ ಠಾಣೆಯ ಸಿಬ್ಬಂದಿ ಈ ಸಂಬಂಧ ದೂರು ನೀಡಿದ್ದರು.

ಹಸುಗಳಿಂದ ಟ್ರಾಫಿಕ್​​ ಜಾಮ್​​ ಆಗಿದ್ದಕ್ಕೆ ಅವುಗಳ ಮಾಲೀಕನ ಮೇಲೆ FIR!: ಏರ್​ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ
ಹಸುಗಳ ಮಾಲೀಕನ ಮೇಲೆ FIR! Image Credit source: Tv9 Kannada
ಪ್ರದೀಪ್​ ಚಿಕ್ಕಾಟಿ
| Edited By: |

Updated on: Aug 11, 2026 | 4:38 PM

Share

ಮುಖ್ಯಾಂಶಗಳು

  • ಹಸುಗಳಿಂದ ಟ್ರಾಫಿಕ್​​ ಜಾಮ್​​; ಮಾಲೀಕನಿಗೆ ಶಾಕ್​​
  • ಏರ್​ಪೋರ್ಟ್ ಸಂಚಾರ ಠಾಣೆಯಲ್ಲಿ FIR ದಾಖಲು
  • ಘಟನೆ ಸಂಬಂಧ ದೂರು ನೀಡಿದ್ದ ಪೊಲೀಸ್​​ ಸಿಬ್ಬಂದಿ

ಬೆಂಗಳೂರು, ಆಗಸ್ಟ್​​ 11: ಬೆಂಗಳೂರು (Bengaluru) ಎಂದಾಕ್ಷಣ ಮೊದಲಿಗೆ ನೆನಪಾಗೋದೇ ನಗರದಲ್ಲಿನ ಟ್ರಾಫಿಕ್ (Traffic)​​ ಸಮಸ್ಯೆ. ವಾಹನದಟ್ಟಣೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ, ಜಿಬಿಎಯಿಂದ ಸಾಕಷ್ಟು ಕ್ರಮಗಳ ಹೊರತಾಗಿಯೂ ಸಂಚಾರ ಸಮಸ್ಯೆಗಳು ಮಾತ್ರ ಬಗೆಹರಿದಿಲ್ಲ. ಈ ನಡುವೆ ಸಾರ್ವಜನಿಕರು ಹುಬ್ಬೇರಿಸುವಂತಹ ಘಟನೆಯೊಂದು ಬೆಂಗಳೂರಲ್ಲಿ ನಡೆದಿದೆ. ಹಸುಗಳಿಂದ ಟ್ರಾಫಿಕ್​​ ಜಾಮ್​​ ಉಂಟಾಗಿರುವ ಕಾರಣಕ್ಕೆ ಅವುಗಳ ಮಾಲೀಕನ ವಿರುದ್ಧ ಏರ್​ಪೋರ್ಟ್ ಸಂಚಾರ ಠಾಣೆಯಲ್ಲಿ ಪ್ರಕರಣ (ಎಫ್​​ಐಆರ್​)​ ದಾಖಲಾಗಿದೆ.

ಏನಿದು ಪ್ರಕರಣ?

ಆಗಸ್ಟ್​​ 10ರ ಬೆಳಿಗ್ಗೆ ಕಳಾಮಂದಿರ ಹತ್ತಿರದ ರಿಂಗ್ ರಸ್ತೆಯಲ್ಲಿ ಸುಮರು 9 ರಿಂದ 10 ಹಸುಗಳು ರಸ್ತೆಯಲ್ಲಿ ಓಡಾಡಿಕೊಂಡಿದ್ದವು. ಈ ಕಾರಣದಿಂದ ರಸ್ತೆಯಲ್ಲಿ ಸಂಚರಿಸುವ ಇತರೆ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಹೀಗಾಗಿ ಈ ರೀತಿಯ ಘಟನೆಗಳು ಆಗದಂತೆ ಮುನ್ನೆಚ್ಚರಿಕೆ ವಹಿಸದ ಕಾರಣ ಮಾರತ್ತಹಳ್ಳಿಯ ಅಶ್ವಥನಗರ ನಿವಾಸಿಯಾಗಿರುವ ಹಸುಗಳ ಮಾಲೀಕ ಸಂತೋಷ್​​ ಎಂಬವರಿಗೆ ಪೊಲೀಸರು ಶಾಕ್​​ ಕೊಟ್ಟಿದ್ದಾರೆ. ಹಸುಗಳನ್ನು ರಸ್ತೆಯಲ್ಲಿ ಬಿಟ್ಟು ಇತರೆ ಸಾರ್ವಜನಿಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗಲು ಕಾರಣರಾಗಿದ್ದಾರೆ ಎಂದು ಅವರ ವಿರುದ್ಧ ಎಫ್​​ಐಆರ್​​ ದಾಖಲಿಸಲಾಗಿದೆ.

ಇದನ್ನೂ ಓದಿ: ಕಂಠೀರವ ಸ್ಟುಡಿಯೋ ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣು ಕುಸಿತ: ಇಬ್ಬರು ಕಾರ್ಮಿಕರ ಸಾವು

ದೂರು ನೀಡಿದ್ದ ಪೊಲೀಸ್​​ ಸಿಬ್ಬಂದಿ

ಘಟನೆ ನಡೆದಿರುವ ದಿನ ರಿಂಗ್ ರಸ್ತೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ HAL ಏರ್ಪೋರ್ಟ್​​ ಸಂಚಾರ ಪೊಲೀಸ್‌ ಠಾಣೆಯ ಸಿಬ್ಬಂದಿ ನಾಗೇಂದ್ರ ಎಂಬವರು ಈ ಸಂಬಂಧ ದೂರು ದಾಖಲಿಸಿದ್ದರು. ಅದರನ್ವಯ ಹಸುಗಳ ಮಾಲೀಕ ಸಂತೋಷ್​​ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023, (U/S 285) ಅಡಿ ಸಂಚಾರಕ್ಕೆ ಅಡಚಣೆ ಉಂಟು ಮಾಡಿದಕ್ಕೆ ಕೇಸ್ ದಾಖಲು ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us