ಬೆಂಗಳೂರು ಅ.08: ಆನೆಕಲ್ ತಾಲೂಕಿನ ಅತ್ತಿಬೆಲೆಯಲ್ಲಿನ (Attibele) ಪಟಾಕಿ ಗೋಡೌನ್ (Firecrackers Godown) ಅಗ್ನಿ ದುರಂತ (Explosion) ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ, ಅಗ್ನಿಶಾಮಕ ಡಿಜಿ ಕಮಲ್ ಪಂತ್ ಅವರ ಚರ್ಚಿಸಿ ಮಾಹಿತಿ ಪಡೆದುಕೊಂಡರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅತ್ತಿಬೆಲೆಯಲ್ಲಿನ ಪಟಾಕಿ ಗೋಡೌನ್ ಅಗ್ನಿ ದುರಂತ ದುರದೃಷ್ಟಕರ. ಪ್ರಕರಣವನ್ನು ಸಿಐಡಿಗೆ ನೀಡಲಾಗುವುದು. ಮೃತರ ಕುಟಂಬಸ್ಥರಿಗೆ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು.
ಶನಿವಾರ ಮಧ್ಯಾಹ್ನ 3.15ರಿಂದ 3.30ರ ನಡುವೆ ಘಟನೆ ನಡೆದಿದೆ. ತಮಿಳುನಾಡಿನಿಂದ ಟ್ರಕ್ನಲ್ಲಿ ಪಟಾಕಿಯನ್ನು ತರಲಾಗಿದೆ. ಅಗ್ನಿ ದುರಂತಕ್ಕೆ ಕಾರಣ ಏನೂ ಅಂತ ತಿಳಿದುಬಂದಿಲ್ಲ. ವಿದ್ಯುತ್ ತಂತಿ ಅಥವಾ ಯುಪಿಎಸ್ನಿಂದ ಘಟನೆ ನಡೆದಿರುವ ಮಾಹಿತಿ ದೊರೆತಿದೆ. ಅಧಿಕಾರಿಗಳಿಂದ ಮಾಹಿತಿ ಪಡೆಯುತ್ತೇನೆ. ಗೋಡೌನ್ನಲ್ಲಿ ಸುರಕ್ಷತಾ ಕ್ರಮ ಇಲ್ಲದಿರುವ ಬಗ್ಗೆ ಮಾಹಿತಿ ದೊರೆತಿದೆ ಎಂದರು.
ಇದನ್ನೂ ಓದಿ: ರಾಜ್ಯಾದ್ಯಂತ ಇರುವ ಪಟಾಕಿ ಅಂಗಡಿ ಪರಿಶೀಲನೆಗೆ ಡಿಕೆ ಶಿವಕುಮಾರ್ ಸೂಚನೆ
ಅಲ್ಲಿ ಕೆಲಸ ಮಾಡುತ್ತಿದ್ದವರು ಎಲ್ಲರೂ ವಿಧ್ಯಾರ್ಥಿಗಳು. ರಜೆ ಸಮಯದಲ್ಲಿ ದುಡಿಮೆಗೆ ಇಲ್ಲಿಗೆ ಬಂದಿದ್ದಾರೆ.
ಘಟನೆ ನಡೆದಿರುವುದು ದುಃಖಕರ ಸಂಗತಿ. ಪ್ರಕರಣ ಸಂಬಂಧ ಪಟಾಕಿ ಮಾಲೀಕ ರಾಮಸ್ವಾಮಿ ರೆಡ್ಡಿ, ಪುತ್ರ ನವೀನ್ ಮತ್ತು ಕಟ್ಟಡದ ಮಾಲೀಕ ಅನಿಲ್ನನ್ನು ಪೊಲೀಸರು ಬಂಧಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಗೋಡೌನ್ನಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಪಟಾಕಿ ಮಾರಾಟ ಮಾಡಲು ಹಾಗೂ ಸಂಗ್ರಹಿಸಲು ಎರಡಕ್ಕೂ ಲೈಸೆನ್ಸ್ ಇದೆಯಾ? ಎಂಬುವುದನ್ನು ಪರಿಶೀಲಿಸಬೇಕಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ, ಭೈರತಿ ಸುರೇಶ್ ಮತ್ತು ಶಾಸಕ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವರು ಸಾಥ್ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:03 pm, Sun, 8 October 23