ಮೈಸೂರು ಅತ್ಯಾಚಾರ ಪ್ರಕರಣ; ಆರೋಪಿಯ ತಾಯಿ ಕಣ್ಣೀರು

ಮನೆಯಲ್ಲೆ ಮಗ ಮಲಗಿದ್ದ. ಮಲಗಿದ್ದ ಮಗನನ್ನ ನಿನ್ನೆ ಮುಂಜಾನೆ ಏಕಾಏಕಿ ಪೊಲೀಸರು ಮನೆಗೆ ನುಗ್ಗಿ ವಶಕ್ಕೆ ಪಡೆದಿದ್ದಾರೆ. ಪೊಲೀಸರ ಬಳಿ ಅಂಗಲಾಚಿ ಕೇಳಿದರೂ ಬಿಡಲಿಲ್ಲ.

ಮೈಸೂರು ಅತ್ಯಾಚಾರ ಪ್ರಕರಣ; ಆರೋಪಿಯ ತಾಯಿ ಕಣ್ಣೀರು
ಕಣ್ಣೀರು ಹಾಕಿದ ಆರೋಪಿಯ ತಾಯಿ
Follow us
TV9 Web
| Updated By: sandhya thejappa

Updated on:Aug 29, 2021 | 11:25 AM

ಮೈಸೂರು: ಜಿಲ್ಲೆಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊರ್ವನ ತಾಯಿ ಕಣ್ಣೀರು ಹಾಕಿದ್ದಾರೆ. ತಮಿಳುನಾಡಿನ ತಾಳವಾಡಿ ತಾಲೂಕಿನ ಸೂಸೈಪುರಂ ಗ್ರಾಮದಲ್ಲಿ ಕಣ್ಣೀರು ಹಾಕಿರುವ ಆರೋಪಿಯ ತಾಯಿ, ಮಗನನ್ನ ಏಕೆ ಕರೆದುಕೊಂಡು ಹೋದರು ಎಂಬುದು ಗೊತ್ತಿಲ್ಲ. ನಿನ್ನೆ (ಆಗಸ್ಟ್ 28) ಮುಂಜಾನೆ ಪೊಲೀಸರು ವಶಕ್ಕೆ ಪಡೆದು ಕರೆದೊಯ್ದರು. ಏಕೆ ಮಗನನ್ನು ಕರೆದುಕೊಂಡು ಹೋಗುತ್ತೀರಾ ಅಂತ ಕೇಳಿದ್ದರೂ ಹೇಳಲಿಲ್ಲ ಅಂತ ಹೇಳಿದ್ದಾರೆ.

ಮನೆಯಲ್ಲೆ ಮಗ ಮಲಗಿದ್ದ. ಮಲಗಿದ್ದ ಮಗನನ್ನ ನಿನ್ನೆ ಮುಂಜಾನೆ ಏಕಾಏಕಿ ಪೊಲೀಸರು ಮನೆಗೆ ನುಗ್ಗಿ ವಶಕ್ಕೆ ಪಡೆದಿದ್ದಾರೆ. ಪೊಲೀಸರ ಬಳಿ ಅಂಗಲಾಚಿ ಕೇಳಿದರೂ ಬಿಡಲಿಲ್ಲ. ಕೂಲಿ ಕೆಲಸ ಮಾಡಿಕೊಂಡು ಇಡೀ ಕುಟುಂಬವನ್ನು ನಿರ್ವಹಣೆ ಮಾಡುತ್ತಿದ್ದ ಎಂದು ಆರೋಪಿ ತಾಯಿ ಕಣ್ಣೀರು ಹಾಕಿದ್ದಾರೆ.

ಜೈಲಿಗೆ ಹೋಗಿ ಬಂದರು ಬುದ್ದಿ ಕಲಿತಿರಲಿಲ್ಲ ವಿಚಾರಣೆ ವೇಳೆ ಆರೋಪಿಗಳ ಕ್ರಿಮಿನಲ್ ಹಿನ್ನೆಲೆ ಬಯಲಾಗಿದೆ. ಓರ್ವ 6 ತಿಂಗಳ ಹಿಂದೆಯಷ್ಟೇ ಪೊಲೀಸರ ಅತಿಥಿಯಾಗಿದ್ದ. ಮೈಸೂರಿನ ನಜರ್ಬಾದ್ ಠಾಣೆ ಪೊಲೀಸರು ಆತನನ್ನು ಬಂಧಿಸಿದ್ದರು. ಶ್ರೀಗಂಧದ ಮರ ಕದ್ದು ಸಿಕ್ಕಿ ಬಿದ್ದಿದ್ದ ಓರ್ವ ಆರೋಪಿ ಜೈಲಿಗೆ ಹೋಗಿ ಬಂದಿದ್ದ. ಜನವರಿ 9ರಂದು ಆರೋಪಿಯನ್ನ ಜೈಲಿಗೆ ಕಳುಹಿಸಲಾಗಿತ್ತು. ಜೈಲಿನಿಂದ ಹೊರ ಬಂದ ಬಳಿಕ ಈ ಕೃತ್ಯದಲ್ಲಿ ಭಾಗಿಯಾಗಿದ್ದಾನೆ.

ಅತ್ಯಾಚಾರ ಪ್ರಕರಣದಲ್ಲಿ ಒಟ್ಟು 6 ಆರೋಪಿಗಳು ಎಂದು ಹೇಳಲಾಗುತ್ತಿತ್ತು. ಆದರೆ 7 ಜನರು ಕೃತ್ಯ ಎಸಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತರ ವಿಚಾರಣೆಯ ವೇಳೆ ಇನ್ನೋರ್ವ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಐವರು ಪೊಲೀಸರು ವಶದಲ್ಲಿದ್ದು, ಪರಾರಿಯಾಗಿರುವ ಇಬ್ಬರಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ

ಸಾಮೂಹಿಕ ಅತ್ಯಾಚಾರದಲ್ಲಿ ಇದ್ದಿದ್ದು 6 ಜನ ಮಾತ್ರ ಅಲ್ಲ; ಪೊಲೀಸರ ಮುಂದೆ ಬಾಯ್ಬಿಟ್ಟ ಆರೋಪಿಗಳು

ಬಾಗಲಕೋಟೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ನಾಲ್ವರು ಸೋದರರ ಕೊಲೆ; ವಿಜಯಪುರದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; ಪ್ರಕರಣ ದಾಖಲು

(mother of the accused who was raped in Mysore has been wept at tamilnadu)

Published On - 11:19 am, Sun, 29 August 21

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್