BESCOM WhatsApp Helpline: ಬೆಸ್ಕಾಂ ಸಂಪರ್ಕಕ್ಕಾಗಿ ಬಂದಿದೆ WhatsApp, 8 ಜಿಲ್ಲೆಗಳಿಗೆ ಅನ್ವಯವಾಗುವ ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ ನೋಡಿ

BESCOM WhatsApp: ಬೆಸ್ಕಾಂ ತನ್ನ ಅಧೀನದ ಎಂಟು ಜಿಲ್ಲೆಗಳಿಗೆ ಮೀಸಲಾದ ವಾಟ್ಸಾಪ್ ಗ್ರಾಹಕ ಸೇವಾ ಸಂಖ್ಯೆಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಗ್ರಾಹಕರು ತಮ್ಮ ವಿದ್ಯುತ್ ಸಂಬಂಧಿತ ದೂರುಗಳನ್ನು ಫೋಟೋ, ವೀಡಿಯೊ ಮತ್ತು ಪಠ್ಯವನ್ನು ಬಳಸಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬಹುದು!

BESCOM WhatsApp Helpline: ಬೆಸ್ಕಾಂ ಸಂಪರ್ಕಕ್ಕಾಗಿ ಬಂದಿದೆ WhatsApp, 8 ಜಿಲ್ಲೆಗಳಿಗೆ ಅನ್ವಯವಾಗುವ ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ ನೋಡಿ
ಬೆಸ್ಕಾಂ ಸಂಪರ್ಕಕ್ಕಾಗಿ ಬಂದಿದೆ WhatsApp, 8 ಜಿಲ್ಲೆಗಳಿಗೆ ಅನ್ವಯವಾಗುವ ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ ನೋಡಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Nov 22, 2022 | 5:32 PM

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ -BESCOM) ತನ್ನ ಅಧೀನದ ಎಂಟು ಜಿಲ್ಲೆಗಳಿಗೆ ಮೀಸಲಾದ ವಾಟ್ಸಾಪ್ ಗ್ರಾಹಕ ಸೇವಾ ಸಂಖ್ಯೆಗಳನ್ನು (BESCOM WhatsApp Helpline) ಬಿಡುಗಡೆ ಮಾಡಿದೆ. ಅದರಲ್ಲಿ ಗ್ರಾಹಕರು ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ತಾವು ಅನುಭವಿಸುತ್ತಿರುವ ಸಮಸ್ಯೆ/ ತಮ್ಮ ದೂರುದುಮ್ಮಾನಗಳ ಬಗ್ಗೆ ಫೋಟೋ, ವೀಡಿಯೊ ಮತ್ತು ಪಠ್ಯವನ್ನು ಬಳಸಿಕೊಂಡು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬಹುದು! ವಿದ್ಯುತ್ ಗ್ರಾಹಕರು (Power consumers) ತಮ್ಮ ಜಿಲ್ಲೆಯ ಆಯಾ WhatsApp ಸಹಾಯವಾಣಿ/ಕಸ್ಟಮರ್ ಕೇರ್ ಸಂಖ್ಯೆಗೆ ತಮ್ಮ ವಿದ್ಯುತ್ ಸಮಸ್ಯೆಗಳ ಕುರಿತು ಚಿತ್ರವನ್ನು ಕಳುಹಿಸಬಹುದು, ವೀಡಿಯೊವನ್ನು ಹಂಚಿಕೊಳ್ಳಬಹುದು ಅಥವಾ ಸಂದೇಶವನ್ನು ಕಳುಹಿಸಬಹುದು.

ಗ್ರಾಹಕರ ಕುಂದುಕೊರತೆಗಳನ್ನು (grievances) ಶೀಘ್ರವಾಗಿ ಪರಿಹರಿಸಲು ಇದು ಸೂಕ್ತ ವೇದಿಕೆಯಾಗಿದೆ. ಹಾಗಾಗಿ, ನೀವು ಯಾವುದೇ ವಿದ್ಯುತ್ ಅವಘಡಗಳನ್ನು ಎದುರಿಸಿದಾಗ, ನಿಮ್ಮ ಸ್ಥಳವನ್ನು ಆಧರಿಸಿ ಕೆಳಗಿನ ಸಂಪರ್ಕ ಸಂಖ್ಯೆಗಳಿಗೆ WhatsApp ಮಾಡಿ ಮತ್ತು ನಿಮ್ಮ ವಿದ್ಯುತ್ ಸಮಸ್ಯೆಗಳಿಗೆ ತ್ವರಿತ ಸ್ಪಂದನೆ/ಪ್ರತಿಕ್ರಿಯೆಯನ್ನು ಪಡೆಯಿರಿ ಎಂದು ಬೆಸ್ಕಾಂ ತಿಳಿಸಿದೆ.

8 ಬೆಸ್ಕಾಂ ಜಿಲ್ಲೆಗಳಿಗೆ ಮೀಸಲಾದ ಸಂಖ್ಯೆಗಳು ಇಲ್ಲಿವೆ:

1. Bengaluru Urban- 82778 84011, 82778 84012, 82778 84013, 82778 84014,

2. Kolar- 82778 84015,

3. Chikkaballapura- 82778 84016,

4. Bengaluru Rural- 82778 84017,

5. Ramanagara- 82778 84019,

6. Tumakuru- 82778 84018,

7. Chitradurga- 82778 84020,

8. Davanagere- 82778 84021

ಈ ಮಧ್ಯೆ, ಮತ್ತೊಂದು ಸುದ್ದಿಯ ಪ್ರಕಾರ ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ನಲ್ಲಿ ದುಪ್ಪಟ್ಟು ಮೊತ್ತವನ್ನು ನೋಡುವ ಪ್ರಸಂಗಗಳೂ ನಡೆಯುತ್ತಿದ್ದವು. ಆದರೆ ಇದೀಗ ವಿದ್ಯುತ್ ಬಿಲ್‌ಗಳ ಆನ್‌ಲೈನ್ ಪಾವತಿಯಲ್ಲಿನ ದೋಷವನ್ನು ವಿದ್ಯುತ್ ಸರಬರಾಜು ಸಂಸ್ಥೆ ಸರಿಪಡಿಸಿದೆ. ಬೆಸ್ಕಾಂ ತನ್ನ ಗ್ರಾಹಕರು ತಮ್ಮ ವಿದ್ಯುತ್ ಬಿಲ್‌ಗಳನ್ನು ಆನ್‌ಲೈನ್‌ನಲ್ಲಿ ಪಾವತಿಸುವುದನ್ನು ತಪ್ಪಿಸುವಂತೆ ಈ ಹಿಂದೆ ಕೇಳಿಕೊಂಡಿತ್ತಾದರೂ, ಇದೀಗ ಸಮಸ್ಯೆಯನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದೆ.

“ಪ್ರಿಯ ಗ್ರಾಹಕರೇ, ನವೆಂಬರ್ 1, 2022 ರಂದು ರಚಿಸಲಾದ ಬೆಸ್ಕಾಂ ಬಿಲ್‌ಗಳ ಆನ್‌ಲೈನ್ ಪಾವತಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗಿದೆ.” ಎಂದು ಬೆಸ್ಕಾಂ ಎಂಡಿ ಮಹಾಂತೇಶ ಬಿಳಗಿ ಟ್ವೀಟ್ ಮಾಡಿದ್ದಾರೆ.

ಬೆಸ್ಕಾಂ ಎಂಟು ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗಾಗಿ ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಮಿಷನ್ ಲಿಮಿಟೆಡ್ -ಕೆಪಿಟಿಸಿಎಲ್ (Karnataka Power Transmission Commission Limited -KPTCL) ಅಧೀನದಲ್ಲಿದ್ದ ವಿದ್ಯುತ್ ವಿತರಣೆ ಜವಾಬ್ದಾರಿಯನ್ನು ತನ್ನ ಅಧೀನಕ್ಕೆ ತೆಗೆದುಕೊಂಡು, 1 ಜೂನ್ 2002 ರಿಂದ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.