ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ತಟ್ಟಿದ ಧರ್ಮ ದಂಗಲ್ ಬಿಸಿ: ​​ಹಿಂದೂ ವರ್ತಕರಿಂದಲೇ ವಸ್ತು ಖರೀದಿಸುವಂತೆ ವಿಹೆಚ್​​​ಪಿ​ ಪೋಸ್ಟರ್

ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ಧರ್ಮ ದಂಗಲ್ ಬಿಸಿ ತಟ್ಟಿದ್ದು, ​​ಹಿಂದೂ ವರ್ತಕರಿಂದಲೇ ವಸ್ತು ಖರೀದಿಸುವಂತೆ ವಿಶ್ವ ಹಿಂದೂ ಪರಿಷತ್ ಪೋಸ್ಟರ್​​ ಅಂಟಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಗಣೇಶೋತ್ಸವಕ್ಕೆ ತಟ್ಟಿದ ಧರ್ಮ ದಂಗಲ್ ಬಿಸಿ: ​​ಹಿಂದೂ ವರ್ತಕರಿಂದಲೇ ವಸ್ತು ಖರೀದಿಸುವಂತೆ ವಿಹೆಚ್​​​ಪಿ​ ಪೋಸ್ಟರ್
ವಿಶ್ವ ಹಿಂದೂ ಪರಿಷತ್ ಅಭಿಯಾನ
Follow us
TV9 Web
| Updated By: ವಿವೇಕ ಬಿರಾದಾರ

Updated on:Aug 28, 2022 | 4:18 PM

ಬೆಂಗಳೂರು: ಬೆಂಗಳೂರಿನಲ್ಲಿ (Bengaluru) ಗಣೇಶೋತ್ಸವಕ್ಕೆ (Ganesh Chaturthi) ಧರ್ಮ ದಂಗಲ್ ಬಿಸಿ ತಟ್ಟಿದ್ದು, ​​ಹಿಂದೂ ವರ್ತಕರಿಂದಲೇ ವಸ್ತು ಖರೀದಿಸುವಂತೆ ವಿಶ್ವ ಹಿಂದೂ ಪರಿಷತ್ (Vishwa Hindu Parishad) ಪೋಸ್ಟರ್​​ ಅಂಟಿಸುತ್ತಿದ್ದಾರೆ. ವಿಹೆಚ್​​​ಪಿ​ ಪೋಸ್ಟರ್​ಗೆ ವಿಶ್ವ ಸನಾತನ ಪರಿಷತ್ ಬೆಂಬಲ ನೀಡುತ್ತಿದೆ. ಗಣೇಶ ಚತುರ್ಥಿಗೆ ಬಟ್ಟೆ, ಹೂವು, ಹಣ್ಣು, ತರಕಾರಿಯನ್ನು ಹಿಂದೂಗಳ ಅಂಗಡಿಗಳಲ್ಲೇ ಖರೀದಿ ಮಾಡಿ ಎಂದು ಪೋಸ್ಟರ್​​ ಅಂಟಿಸುತ್ತಿದ್ದಾರೆ.

ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ಈ ಕುರಿತು ಮಾತನಾಡಿದ ವಿಶ್ವ ಸನಾತನ ಪರಿಷತ್​​​​​​​​ ಅಧ್ಯಕ್ಷ ಭಾಸ್ಕರನ್ ಹಬ್ಬಕ್ಕೆ ಏನೇ ಖರೀದಿಸಬೇಕೆಂದರೂ ಹಿಂದೂ ಅಂಗಡಿಗೆ ಹೋಗಿ ಎಂದು ಮನವಿ ಮಾಡಿದ್ದಾರೆ.

ಕರೆ ಕೊಟ್ಟ ಸಂಘಟನೆ ವಿರುದ್ಧ ಮುಸ್ಲಿಂ ಮುಖಂಡ ಕಿಡಿ: ಈ ವಿಚಾರವಾಗಿ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲೀದ್ ಕಿಡಿ ಕಾರಿದ್ದು, ಹಿಂದೂ ಸಂಘಟನೆಗಳ ಯಾವ ಅಭಿಯಾನ ಸಕ್ಸಸ್ ಆಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ. ಚಾಲಕರ ನಿಷೇಧ, ಹಲಾಲ್, ಮಾವಿನ ಹಣ್ಣು ಖರೀದಿ, ಕುರಿ ವ್ಯಾಪಾರ ಬಹಿಷ್ಕಾರ ಸೇರಿದಂತೆ ಹಿಂದೂ ಸಂಘಟನೆಗಳು ಹಲವು ಬ್ಯಾನ್ ಅಭಿಯಾನ ಮಾಡಿದ್ದವು. ಯಾವುದಾದರೂ ಒಂದಾದರೂ ಯಶಸ್ವಿಯಾಗಿದೆಯಾ?  ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಇರುವ ಶೇ‌.90 ರಷ್ಟು ಹಿಂದೂಗಳು ವಿಶಾಲ ಹೃದಯದವರು. ಬಾಕಿ ಶೇ 10 ರಷ್ಟು ಮತೀಯವಾದಿಗಳಿದ್ದಾರೆ, ಅದು ಎಲ್ಲ ಧರ್ಮಗಳಲ್ಲೂ ಇರ್ತಾರೆ. ಇದು ತಮ್ಮ ಚಲಾವಣೆಗೋಸ್ಕರ ಮಾಡುತ್ತಿರೋ ಅಭಿಯಾನ. ಒಂದು ವರ್ಷದಿಂದ ಎಷ್ಟು ಅಭಿಯಾನ ಮಾಡಿದರು? ಇವರ ಅಭಿಯಾನದಿಂದ ಏನೂ ಮಾಡೋಕೆ ಆಗೊಲ್ಲ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 3:47 pm, Sun, 28 August 22

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್