ಬೆಂಗಳೂರು, (ಜನವರಿ 14): ಮಕರ ಸಂಕ್ರಾಂತಿಯದಂದು ಇಂದು (ಜನವರಿ 14) ಸಂಜೆ 5:14 ರಿಂದ 5:17ರ ವರೆಗೆ ಬೆಂಗಳೂರಿನ ಗವಿಗಂಗಾಧರೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶಿಸಬೇಕಿತ್ತು. ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು. ಆದರೆ ಮೋಡ ಕವಿದ ವಾತಾವರಣದಿಂದ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶ ಸಾಧ್ಯವಾಗಲಿಲ್ಲ. ಈ ರೀತಿ ಆಗುತ್ತಿರುವುದು ಇದು ಮೊದಲಲ್ಲ. ಈ ಹಿಂದೆಯೂ ಎರಡೂ ಬಾರಿ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿರಲಿಲ್ಲ. ಇದೀಗ ಇತಿಹಾಸದಲ್ಲೇ 3ನೇ ಬಾರಿಗೆ ಗವಿ ಗಂಗಾಧರೇಶ್ವರನ ಮೇಲೆ ಸೂರ್ಯ ರಶ್ಮಿ ಸ್ಪರ್ಶ ಬಿದ್ದಿಲ್ಲ. ಹೀಗಾಗಿ ಸಹಜವಾಗಿ ಭಕ್ತರಿಗೆ ನಿರಾಸೆಯಾಗಿದ್ದು, ಮುಂದೆ ಏನಾದರೂ ಗಂಡಾಂತರ ಕಾದಿದ್ಯಾ ಎನ್ನುವ ಚರ್ಚೆಗಳು ಸಹ ನಡೆದಿವೆ.
ಯಾಕಂದ್ರೆ ಹಿಂದೆ ಅಷ್ಟಾಗಿ ಸೂರ್ಯರಶ್ಮಿ ಬೀಳದಿದ್ದಕ್ಕೆ ಕೋವಿಡ್ ಬಂದು ಸಾವು ನೋವುಗಳು ಸಂಭವಿಸಿತ್ತು. ಇದರಿಂದ ಈ ಬಾರಿಯೂ ಸಹ ಸೂರ್ಯ ಸ್ಪರ್ಶವಾಗದಿದ್ದರಿಂದ ಮುಂದೆ ಗಂಡಾಂತರ ಕಾದಿದೆಯಾ ಎನ್ನುವ ಆತಂಕ ಭಕ್ತರಲ್ಲಿ ಮನೆ ಮಾಡಿದ್ದು, ಇದೀಗ ಇದಕ್ಕೆ ದೇವಸ್ಥಾನದ ಅರ್ಚಕರು ಪ್ರಕ್ರಿಯಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಗವಿಗಂಗಾಧರೇಶ್ವರ ದೇಗುಲದ ಅರ್ಚಕ ಸೋಮಸುಂದರ್ ದೀಕ್ಷಿತ್ ಪ್ರತಿಕ್ರಿಯಿಸಿದ್ದು, ಗಂಗಾಂಧರೇಶ್ವರ ಸ್ವಾಮಿಗೆ ಸೂರ್ಯ ಪೂಜೆಯಾಗಿದೆ. ಆದ್ರೆ ಪ್ರಕೃತಿ ಕಾರಣದಿಂದ ನಮಗೆ ಗೋಚರವಾಗಿಲ್ಲ. ಆದ್ರೆ ಗಂಗಾಂಧರಸ್ವಾಮೀ ಎಲ್ಲರಿಗೂ ದರ್ಶನ ನೀಡುತ್ತಾನೆ. ಖಂಡಿತವಾಗಲೂ ಸೂರ್ಯ ರಶ್ಮಿ ಶಿವಲಿಂಗಕ್ಕೆ ಸ್ಪರ್ಶಿಸಿದೆ. ಎಷ್ಟು ನಿಮಿಷಗಳ ಕಾಲ ಸೂರ್ಯ ರಶ್ಮಿ ಸ್ಪರ್ಶಿಸಿದೆ ಎಂದು ಗೊತ್ತಾಗಿಲ್ಲ. ಮೋಡ ಕವಿದ ವಾತಾವಾರಣ ಹಿನ್ನೆಲೆಯಲ್ಲಿ ಸೂರ್ಯ ರಶ್ಮಿ ಕಂಡುಬಂದಿಲ್ಲ. ಪ್ರಸಕ್ತ ವರ್ಷ ಜನರಿಗೆ ಯಾವುದೇ ರೀತಿಯ ತೊಂದರೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.
ಓಂಕಾರ ತತ್ವದಲ್ಲಿ ಸಾಕಷ್ಟು ವಿಶೇಷತೆಗಳಿವೆ . ನಾಭಿಯಿಂದ ಬಂದ ತತ್ವವೇ ಓಂ ನಮಶಿವಾಯ. ಸೂರ್ಯ ಭಗವಂತನ ಅನುಮತಿ ಪಡೆದೂ ಉತ್ತರಾಯಣ ಪ್ರವೇಶ ಮಾಡುತ್ತಾನೆ. ಯಜ್ಞ ಯಾಗ, ದೇವತಾ ದರ್ಶನ ಎಲ್ಲಾ ದಕ್ಷಿಣಾಯಣ ಕಾಲದಲ್ಲಿ ಮಾಡುತ್ತೇವೆ. ಈಶ್ವರನ ದರ್ಶನ ಮಾಡಿ ಉತ್ತರಾಯಣ ಪ್ರವೇಶ ಸೂರ್ಯ ಮಾಡುತ್ತಾನೆ. ಪ್ರಕೃತಿ ವಿಕೋಪದಿಂದ ಸೂರ್ಯ ರಶ್ಮಿ ನಮಗೆ ಕಾಣಿಸಿಲ್ಲ. ನಾಳೆಯಿಂದ ಪರಮೇಶ್ವರ ಎಲ್ಲರಿಗೂ ಅನುಗ್ರಹ ಮಾಡುತ್ತಾನೆ. ಖಂಡಿತ ಸೂರ್ಯ ಪ್ರವೇಶ ಮಾಡಿ ಹೋಗಿದ್ದಾನೆ . ಈಶ್ವರನಿಗೆ ಸೂರ್ಯ ಪೂಜೆ ಮಾಡಿದ್ದಾನೆ ಅನ್ನೋದು ನಮಗೆ ಗೊತ್ತಿದೆ . ಈಶ್ವರನ ಅನುಗ್ರಹ ನಾಳೆಯಿಂದ ಎಲ್ಲರಿಗೂ ಸಿಗುತ್ತೆ . ಸ್ವಾಮಿ ಇವತ್ತು ದರ್ಶನ ಕೊಟ್ಟಿಲ್ಲ ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ