ಬೆಂಗಳೂರು: ಕೆಲ ದಿನಗಳ ಹಿಂದೆ ಯುವತಿಗೆ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಗೋವಿಂದರಾಜುನನ್ನ ಯುವತಿಯ ಸೋದರ ಮಾವ ಕರೆಯಿಸಿ ಮೆಸೇಜ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿ, ಬಳಿಕ ಆತನನ್ನು ಬ್ಯಾಡರಹಳ್ಳಿಯ ತೋಟಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ ಎಂದು ಗೋವಿಂದರಾಜು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಧರ್ಮಸ್ಥಳದ ಚಾರ್ಮಾಡಿ ಘಾಟ್ ಬಳಿ ರಸ್ತೆಯಿಂದ ಸುಮಾರು 400 ಮೀಟರ್ನಿಂದ ‘500 ಮೀಟರ್ ಆಳದಲ್ಲಿ ಗೋವಿಂದರಾಜು ಶವ ಪತ್ತೆಯಾಗಿದೆ.
ವೃತ್ತಿಯಲ್ಲಿ ಪೇಂಟರ್ ಆಗಿರುವ ಗೋವಿಂದರಾಜು ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಯುವತಿಯ ಹಿಂದೆ ಬಿದ್ದಿದ್ದನಂತೆ. ಹುಡುಗಿ ಕಾಲೇಜಿಗೆ ಹೊದಾಗ ಗೊವಿಂದರಾಜು ಯುವತಿಗೆ ಕರೆ ಮಾಡಿದ್ದಾನೆ. ಆದರೆ ಕಾಲೇಜಿಗೆ ಹೊಗುವಾಗ ಯುವತಿ ಮನೆಯಲ್ಲಿಯೇ ಮೊಬೈಲ್ ಬಿಟ್ಟು ಹೊಗಿದ್ದಾಳೆ. ನಂತರ ಮೆಸೇಜ್ ಮಾಡಿದ್ದಾನೆ. ಅದನ್ನ ಆಕೆಯ ಸೋದರ ಮಾವ ನೋಡಿದ್ದು, ತಾನು ಮದುವೆಯಾಗಬೇಕು ಅಂದುಕೊಂಡಿದ್ದ ಹುಡುಗಿಗೆ ಆತ ಕಳುಹಿಸಿದ ಮೆಸೆಜ್ ನೋಡಿ ಕೊಪಗೊಂಡಿದ್ದಾನೆ. ಬಳಿಕ ಯುವಕನನ್ನ ಮಾತಾಡೊ ನೆಪದಲ್ಲಿ ಕರೆಸಿ ಕೊಲೆ ಮಾಡಿದ್ದಾರೆ ಎಂದು ಗೊವಿಂದರಾಜ್ ಸಂಬಂಧಿ ಪ್ರಕಾಶ್ ಎಂಬುವವರು ಹೇಳಿದ್ದಾರೆ.
ನಾಪತ್ತೆಯಾಗಿದ್ದ ಗೊವಿಂದರಾಜ್ ಸಂಬಂಧಿಕರ ಮಾಹಿತಿ ಮೆರೆಗೆ ಯಶವಂತಪುರ ಪೋಲಿಸರು ಆರೋಪಿ ಅನಿಲ್ ಮತ್ತು ಭರತ್ನನ್ನು ವಶಕ್ಕೆ ಪಡೆದು ಮಾಹಿತಿ ಕಲೆ ಹಾಕಿದ್ದು, ಇಂದು ಯುವಕನ ಶವವನ್ನು ಚಾರ್ಮುಂಡಿಘಾಟ್ ನಲ್ಲಿ ಬಿಸಾಡಿರೊದಾಗಿ ಹೇಳಿದ್ದು, ಮಾಹಿತಿ ಆಧರಿಸಿ ಚಾರ್ಮುಡಿ ಘಾಟ್ಗೆ ತೆರಳಿದ ಖಾಕಿ ತಂಡ ಮೃತದೇಹವನ್ನ ಹುಡುಕಿದ್ದು, ಪ್ರಕರಣ ಆರೋಪಿ ಅನಿಲ್ ಸೇರಿದಂತೆ ಮೂವರನ್ನ ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿಗಳನ್ನು ಠಾಣೆಗೆ ಕರೆ ತರುತ್ತಿದ್ದಂತೆ ಸಂಬಂಧಿಕರು ಮನಸೊ ಇಚ್ಛೆ ಥಳಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:42 pm, Wed, 1 February 23