ಕೊನೆಗೂ ಸಂಚಾರ ಮುಕ್ತವಾದ ಸಿಎಂ ಬೊಮ್ಮಾಯಿ ಉದ್ಘಾಟಿಸಿದ್ದ ಕಾರ್ಡ್ ರಸ್ತೆ ಫ್ಲೈ ಓವರ್
ತರಾತುರಿಯಲ್ಲಿ ಉದ್ಘಾಟನೆ ಮಾಡಿ, ಕಾಮಗಾರಿ ಮುಗಿದಿಲ್ಲ ಅಂತ ಬಂದ್ ಮಾಡಲಾಗಿದ್ದ ಕಾರ್ಡ್ ರಸ್ತೆ ಫ್ಲೈ ಓವರ್ ಕೊನೆಗೂ ಸಂಚಾರ ಮುಕ್ತವಾಗಿದೆ.
ಬೆಂಗಳೂರು: ತರಾತುರಿಯಲ್ಲಿ ಉದ್ಘಾಟನೆ ಮಾಡಿ, ಕಾಮಗಾರಿ ಮುಗಿದಿಲ್ಲ ಅಂತ ಬಂದ್ ಮಾಡಲಾಗಿದ್ದ ಕಾರ್ಡ್ ರಸ್ತೆ ಫ್ಲೈ ಓವರ್ ಕೊನೆಗೂ ಸಂಚಾರ ಮುಕ್ತವಾಗಿದೆ. ಜ. 29ರಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಫ್ಲೈ ಓವರ್ ಉದ್ಘಾಟನೆ ಮಾಡಿದ್ದರು. ಆದರೆ ಮರುದಿನವೇ ಅಂದರೆ ಸೋಮವಾರ (30) ಕಾಮಗಾಗಿ ಮುಗಿದಿಲ್ಲ ಎಂದು ಬಂದ್ ಮಾಡಲಾಗಿತ್ತು. ಟಿವಿ9 ವರದಿ ಪ್ರಸಾರ ಬೆನ್ನಲ್ಲೆ ಇಂದು(ಫೆ.1) ಮಧ್ಯಾಹ್ನದ ಬಳಿಕ ಸಂಚಾರಕ್ಕೆ ಅಧಿಕಾರಿಗಳು ಅನುವು ಮಾಡಲಾಗಿದೆ. 760 ಮೀಟರ್ ಉದ್ದದ ಬಸವೇಶ್ವರ ನಗರ ಜಂಕ್ಷನ್ ಮೇಲ್ಸೇತುವೆ ಇದಾಗಿದ್ದು, ವೆಸ್ಟ್ ಆಫ್ ಕಾರ್ಡ್ ರಸ್ತೆ ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆ ಸಂಪರ್ಕಿಸುತ್ತದೆ. ಸುಮಾರು 76.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಸಾರ್ವಜನಿಕರು ಕಿಡಿ
ವೆಸ್ಟ್ ಆಫ್ ಕಾರ್ಡ್ ರಸ್ತೆ ಮೇಲ್ಸೇತುವೆ ಕಾಮಗಾರಿ ವರ್ಷಗಳಿಂದ ಕುಂಟುತ್ತಾ ಸಾಗುತ್ತಿದೆ. ವೆಸ್ಟ್ ಆಫ್ ಕಾರ್ಡ್ ರೋಡ್ ಅಂಡರ್ ಪಾಸ್ ಸಣ್ಣ ದುರಸ್ತಿಗಾಗಿ ಕಳೆದ 6 ತಿಂಗಳುಗಳಿಂದ ಬಂದ್ ಆಗಿತ್ತು. ಈಗ ಕಾಮಗಾರಿ ಪೂರ್ಣಗೊಳ್ಳದೆ ಪ್ರಚಾರಕ್ಕಾಗಿ ಉದ್ಘಾಟನೆ ಮಾಡಿದ್ದಾರೆ ಅಂತ ಸಾರ್ವಜನಿಕರು ಕಿಡಿ ಕಾರಿದ್ದರು.
ಇದನ್ನೂ ಓದಿ: Air Show 2023: ಯಲಹಂಕ ವಾಯುನೆಲೆ ಸುತ್ತ ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಕ್ರೇನ್ ಎತ್ತರ ತಗ್ಗಿಸಲು ಆದೇಶ
ಏನಿದು ಯೋಜನೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಿಗ್ನಲ್-ಮುಕ್ತ ರಸ್ತೆ ನಿರ್ಮಿಸುವ ಉದ್ದೇಶದಿಂದ ವೆಸ್ಟ್ ಆಫ್ ಕಾರ್ಡ್ ರೋಡ್ ರಸ್ತೆಗೆ ಫ್ಲೈ ಓವರ್‌ಗಳನ್ನು ನಿರ್ಮಿಸುವ ಯೋಜನೆ ರೂಪಿಸಿದೆ. ಮಂಜುನಾಥ ನಗರ ಮತ್ತು ಬಸವೇಶ್ವರ ನಗರ ವೃತದ ಬಳಿ ಫ್ಲೈ ಓವರ್ ನಿರ್ಮಿಸುವುದು ಯೋಜನೆಯಾಗಿದೆ. ವೆಸ್ಟ್ ಆಫ್ ಕಾರ್ಡ್ ರಸ್ತೆ ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆ ಸಂಪರ್ಕಿಸುತ್ತದೆ. ಈ ರಸ್ತೆಯು ಬಸವೇಶ್ವರ ನಗರ, ರಾಜಾಜಿನಗರ ಮತ್ತು ಬೆಂಗಳೂರು ಉತ್ತರ ಭಾಗದ ಪ್ರಮುಖ ವಾಣಿಜ್ಯ ಸ್ಥಳಗಳ ಮೂಲಕ ಹಾದುಹೋಗುತ್ತದೆ.
ಸ್ಯಾಂಕಿ ಕೆರೆ ಫ್ಲೈಓವರ್ ನಿರ್ಮಾಣಕ್ಕೆ ಪರ-ವಿರೋಧ ಅಭಿಪ್ರಾಯ
ಬೆಂಗಳೂರು: ಸ್ಯಾಂಕಿ ಕೆರೆ ಬಳಿ ಫುಲ್ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿರುವ ಹಿನ್ನೆಲೆ ಬಿಬಿಎಂಪಿ ಫ್ಲೈಓವರ್ ನಿರ್ಮಾಣಕ್ಕೆ ತೀರ್ಮಾನಿಸಿದೆ. ಆದ್ರೆ ಇದಕ್ಕೆ ಕೆಲ ಸಂಘಟನೆಗಳು ವಿರೋಧ ಮಾಡ್ತಿದ್ರೆ. ಸ್ಥಳೀಯರು ಫ್ಲೈಓವರ್ ಬೇಕು ಅಂತಿದ್ದಾರೆ. ಫ್ಲೈಓವರ್ ಬೇಕು ಬೇಡ ಎಂಬ ತಿಕ್ಕಾಟ ಜೋರಾಗಿ ನಡಿತಾಯಿದೆ. ಸ್ಯಾಂಕಿ ಕೆರೆಯ ಸೌಂಧರ್ಯ ಮೈ ಸೋಲದವರು ಯಾರು ಇಲ್ಲ. ಇಂತಹ ಕೆರೆ ಪಕ್ಕದಲ್ಲಿ ಟ್ರಾಫಿಕ್ ಕಿರಿಕಿರಿ ಇರೋ ಕಾರಣ ಬಿಬಿಎಂಪಿ ಇಲ್ಲೊಂದು ಫ್ಲೈಓವರ್ ನಿರ್ಮಾಣಕ್ಕೆ ತೀರ್ಮಾಣ ಮಾಡಿದೆ. ಆದ್ರೆ ಇಲ್ಲಿ ಫ್ಲೈಓವರ್ ನಿರ್ಮಾಣಕ್ಕೆ ಕೆಲವರು ವಿರೋಧ ಮಾಡಿದ್ರೆ ಇನ್ನೂ ಕೆವಲರು ಸ್ವಾಗತ ಮಾಡ್ತಿದ್ದಾರೆ.
ಬೆಂಗಳೂರಿನ ಸ್ಯಾಂಕಿ ರಸ್ತೆ ವಿಸ್ತರಣೆ ಮತ್ತು ಮೇಲ್ಸೇತುವೆ ಯೋಜನೆ ಇದೀಗಾ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಬಿಬಿಎಂಪಿ ಕಡೆಯಿಂದ ಸಾಕಷ್ಟು ಯೋಜನೆಗಳು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿದೆ. ಆದ್ರೆ ಎಲ್ಲೋ ಒಂದೆಡೆ ಇದು ನಮ್ಮ ಗಾರ್ಡನ್ ಸಿಟಿಯ ಹಸಿರನ್ನು ನಾಶಮಾಡಲು ಹೊರಟಿದೆ ಎಂಬ ಆರೋಪದಡಿ ಪ್ರಾಕಶ್ ಬೆಳವಾಡಿ ಸೇರಿದಂತೆ ಇತರೆ ಹೋರಾಟಗಾರರು ಈಗ ವಿರೋಧಿಸಲು ಮುಂದಾಗಿದ್ದಾರೆ. ಆದ್ರೆ ಫ್ಲೈಓವರ್ ಬೇಕು ಅಂತಾ ಸ್ಥಳೀಯರು ಹಾಗೂ ವಾಹನ ಸವಾರರು ಪಟ್ಟು ಹಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.