ಸಾಂದಿಪಿನಿ ಶಾಲೆ ಮುಖ್ಯಸ್ಥ ಲೋಕೇಶ್ ತಾಳಿಕಟ್ಟೆ ನಕಲಿ NOC ನೀಡಿ CBSE ಶಾಲೆ ನಡೆಸುತ್ತಿದ್ದಾರಾ? ವಿಧಾನಸೌಧ ಪೊಲೀಸರಿಂದ ತೀವ್ರ ವಿಚಾರಣೆ

ಅಕ್ರಮವಾಗಿ CBSE ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿದ್ದ ಆರೋಪದಡಿ ಸಾಂದಿಪಿನಿ ಶಾಲೆಯ ಮುಖ್ಯಸ್ಥ ಲೋಕೇಶ್ ತಾಳಿಕಟ್ಟೆ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ.

ಸಾಂದಿಪಿನಿ ಶಾಲೆ ಮುಖ್ಯಸ್ಥ ಲೋಕೇಶ್ ತಾಳಿಕಟ್ಟೆ ನಕಲಿ NOC ನೀಡಿ  CBSE ಶಾಲೆ ನಡೆಸುತ್ತಿದ್ದಾರಾ? ವಿಧಾನಸೌಧ ಪೊಲೀಸರಿಂದ ತೀವ್ರ ವಿಚಾರಣೆ
ಲೋಕೇಶ್ ತಾಳಿಕಟ್ಟೆ
Follow us
TV9 Web
| Updated By: ಆಯೇಷಾ ಬಾನು

Updated on:Feb 01, 2023 | 2:06 PM

ಬೆಂಗಳೂರು: ನಕಲಿ NOC ಪತ್ರ ನೀಡಿ ಅಕ್ರಮವಾಗಿ CBSE ಪಠ್ಯಕ್ರಮದಲ್ಲಿ ಶಾಲೆ ನಡೆಸುತ್ತಿದ್ದ ಆರೋಪದಡಿ ಸಾಂದಿಪಿನಿ ಶಾಲೆಯ ಮುಖ್ಯಸ್ಥ ಲೋಕೇಶ್ ತಾಳಿಕಟ್ಟೆ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ವಿಧಾನಸೌಧ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಲೋಕೇಶ್​ ಅವರಿಗೆ ವಿಚಾರಣೆಗೆ ಕರೆದಿದ್ದಾರೆ. ಸದ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿದ ಲೋಕೇಶ್ ಅವರು ವಿಚಾರಣೆ ಎದುರಿಸುತ್ತಿದ್ದಾರೆ.

Lokesh Talikatte

ರಾಜ್ಯ ಸರ್ಕಾರದಿಂದ ಯಾವುದೇ ನಿರಾಕ್ಷೇಪಣಾ ಪತ್ರವನ್ನು ಪಡೆಯದೆ ನಕಲಿ ಪ್ರಮಾಣ ಪತ್ರವನ್ನು ಸೃಷ್ಟಿಸಿ ಅನಧಿಕೃತವಾಗಿ ಸಿಬಿಎಸ್​ಇ ಶಾಲೆಯನ್ನು ನಡೆಸುತ್ತಿದ್ದ ಆರೋಪ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ರುಪ್ಸಾ) ಅಧ್ಯಕ್ಷ ಲೋಕೇಶ್‌ ತಾಳಿಕಟ್ಟೆ ಅವರ ವಿರುದ್ಧ ಕೇಳಿ ಬಂದಿದೆ.

Published On - 1:34 pm, Wed, 1 February 23