Air Show 2023: ಯಲಹಂಕ ವಾಯುನೆಲೆ ಸುತ್ತ ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಕ್ರೇನ್​ ಎತ್ತರ ತಗ್ಗಿಸಲು ಆದೇಶ

ಯಲಹಂಕ ವಲಯ ವ್ಯಾಪ್ತಿಯ ವಾಯುಸೇನಾ ನೆಲೆಯಲ್ಲಿ ಏರೋ ಶೋ ಹಿನೆಲೆಯಲ್ಲಿ ವಾಯುಸೇನಾ ನೆಲೆಯಿಂದ 5 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್‌ಗಳ ಎತ್ತರವನ್ನು ತಗ್ಗಿಸಲು ಹಾಗೂ ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಬಿಬಿಎಂಪಿ ಆದೇಶಿಸಿದೆ.

Air Show 2023: ಯಲಹಂಕ  ವಾಯುನೆಲೆ ಸುತ್ತ ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಕ್ರೇನ್​ ಎತ್ತರ ತಗ್ಗಿಸಲು ಆದೇಶ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 31, 2023 | 7:08 PM

ಬೆಂಗಳೂರು: ಇದೇ ಫೆಬ್ರವರಿ 13ರಿಂದ ಫೆಬ್ರವರಿ 17ರ ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ​ಶೋ-2023 (Air Show Bangalore 2023) ನಡೆಯಲಿದೆ. ಇದಕ್ಕಾಗಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿವೆ. ಇನ್ನು ಯಲಹಂಕ ವಾಯುನೆಲೆ ಸುತ್ತಮುತ್ತ ಕಟ್ಟಡಗಳ ಮೇಲೆ ಕ್ರೇನ್​ ಎತ್ತರ ತಗ್ಗಿಸಲು ಆದೇಶಿಸಲಾಗಿದೆ. ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಕ್ರೇನ್​ ಎತ್ತರ ತಗ್ಗಿಸಲು ಬಿಬಿಎಂಪಿ ಯೋಜನೆಯ ಜಂಟಿ ನಿರ್ದೇಶಕರು(ಉತ್ತರ) ಇಂದು(ಜನವರಿ 31) ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Meat Ban: ಯಲಹಂಕ ವಲಯದಲ್ಲಿ ಜನವರಿ 30 ರಿಂದ ಮಾಂಸ ಮಾರಾಟ ನಿಷೇಧ

ಯಲಹಂಕ ವಲಯ ವ್ಯಾಪ್ತಿಯ ವಾಯುಸೇನಾ ನೆಲೆಯಲ್ಲಿ ಏರೋ ಶೋ ಹಿನೆಲೆಯಲ್ಲಿ ವಾಯುಸೇನಾ ನೆಲೆಯಿಂದ 5 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್‌ಗಳ ಎತ್ತರವನ್ನು ತಗ್ಗಿಸಲು ಹಾಗೂ ಕ್ರೇನ್ ಚಟುವಟಿಕೆಯನ್ನು ಸ್ಥಗಿತಗೊಳಿಸಲು ಆದೇಶ ಪ್ರತಿಯಲ್ಲಿ ಸೂಚಿಸಲಾಗಿದೆ. ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಎರ್‌ಕ್ರಾಫ್ಟ್ ರೂಲ್ಸ್ 1937ರ ರೂಲ್ 91 ಕಾನೂನು ಅನ್ವಯ ಕ್ರಮಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಯೋಜನೆಯ ಜಂಟಿ ನಿರ್ದೇಶಕರು(ಉತ್ತರ) ಆದೇಶದಲ್ಲಿ ತಿಳಿಸಿದ್ದಾರೆ.

ಮಾಂಸ ಮಾರಾಟ ನಿಷೇಧ

ಯಲಹಂಕ ವಲಯದಲ್ಲಿ (Yelahanka Zone) ಜನವರಿ 30 ರಿಂದ ಫೆಬ್ರುವರಿ 20 ರವರೆಗೆ ಮಾಂಸ (Meat) ಮಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಮಾಂಸ ಮಾರಾಟದ ಉದ್ದಿಮೆಗಳನ್ನೊಳಗೊಂಡು ಎಲ್ಲ ತರಹದ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ (Ban). ಹೋಟೆಲ್ ಹಾಗೂ ಡಾಬಾಗಳಲ್ಲಿಯೂ ಸಹ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧ ಮಾಡಲಾಗಿದೆ. ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಎರ್‌ಕ್ರಾಫ್ಟ್​​ ರೂಲ್ಸ್ 1937ರ ರೂಲ್ 91 ರೀತ್ಯ ಬಿಬಿಎಂಪಿಯಿಂದ ಈ ಆದೇಶ ಹೊರಡಿಸಲಾಗಿದೆ.

Published On - 7:05 pm, Tue, 31 January 23