ಬೆಂಗಳೂರು: ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು ಪ್ರಕರಣ; ಮೃತದೇಹ ಇಟ್ಟು ಸ್ಥಳೀಯರಿಂದ ಪ್ರತಿಭಟನೆ
ನಿನ್ನೆ(ಜ.30)ಅನ್ನಪೂರ್ಣೇಶ್ವರಿ ನಗರದ ಎಂಎನ್ಸಿ ಅಕಾಡೆಮಿಯಲ್ಲಿ ಸ್ವಿಮ್ಮಿಂಗ್ ಮಾಡಲು ತೆರಳಿದ್ದ ಇಬ್ಬರು ಬಾಲಕರು ಸಾವನ್ನಪ್ಪಿದ್ದು, ಬಾಲಕರ ಮೃತದೇಹ ಇಟ್ಟುಕೊಂಡು ಇಂದು ಸ್ಥಳೀಯರು, ಸಂಬಂಧಿಕ್ಕರು ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು: ಅನ್ನಪೂರ್ಣೇಶ್ವರಿ ನಗರದ ಎಂಎನ್ಸಿ ಅಕಾಡೆಮಿಯಲ್ಲಿ ನಿನ್ನೆ(ಜ.30) ಜಯಂತ್(13), ಮೋಹನ್(13) ಎಂಬ ಇಬ್ಬರು ಬಾಲಕರು ಸ್ವಿಮ್ಮಿಂಗ್ ಪೂಲ್ನಲ್ಲಿ ಮುಳುಗಿ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆ ಬಾಲಕರ ಮೃತದೇಹ ಇಟ್ಟು ಇಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇವಲ ಸೆಕ್ಯೂರಿಟಿ ಗಾರ್ಡ್ಗಳನ್ನ ಮಾತ್ರ ಬಂಧನ ಮಾಡಲಾಗಿದ್ದು, ಪೊಲೀಸರು ಆರೋಪಿಗಳ ಪರವಾಗಿದ್ದಾರೆ. ಇದರ ವಿರುದ್ಧ ಹೋರಾಡಿದ್ರೆ ಪೊಲೀಸರು ನಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಕೋಣನಕುಂಟೆ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್ ನಮ್ಮ ಲಿಮಿಟ್ಸ್ಗೆ ಮೃತದೇಹ ತರದಂತೆ ತಡೆಯುತ್ತಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ವಿಮ್ಮಿಂಗ್ ಪೂಲ್ ಬಳಿ ಮೃತದೇಹವಿಟ್ಟು ಪ್ರತಿಭಟನೆಗೆ ಮುಂದಾಗಿದ್ದ ಕುಟುಂಬಸ್ಥರನ್ನ ಜರಗನಹಳ್ಳಿ ರಸ್ತೆ ಬಳಿ ಆ್ಯಂಬುಲೆನ್ಸ್ ತಡೆದ ಇನ್ಸ್ ಪೆಕ್ಟರ್ ಶಿವಕುಮಾರ್ ಪ್ರತಿಭಟನಾ ನಿರತರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನಾನಿರೋದೆ ಹೊಡಿಯೋದಕ್ಕೆ, ಪರಿಸ್ಥಿತಿ ನಿಯಂತ್ರಿಸೋದಕ್ಕೆ ಎಂದು ಆವಾಜ್ ಹಾಕಿದ್ದಾರೆ. ಯಾವುದೇ ಕಾರಣಕ್ಕೂ ಸ್ವಿಮ್ಮಿಂಗ್ ಪೂಲ್ ಬಳಿ ಬರದಂತೆ ಅಡ್ಡಹಾಕಿದ ಪೊಲೀಸರು ನ್ಯೂ ಸೆನ್ಸ್ ಕ್ರಿಯೆಟ್ ಮಾಡಬೇಡಿ ಎಂದು ಧಮ್ಕಿ ಹಾಕಿದ್ದಾರೆ. ಸದ್ಯ ಬಾಲಕರ ನಿವಾಸದ ಬಳಿ ಮೃತದೇಹ ಇರಿಸಲಾಗಿದೆ.
ಸ್ವಂತ ಮನೆಯಲ್ಲೆ ಮನೆ ಮಾಲಿಕ ನೇಣು ಬಿಗಿದು ಆತ್ಮಹತ್ಯೆ
ನೆಲಮಂಗಲ: ಸ್ವಂತ ಮನೆಯಲ್ಲಿಯೇ ಮನೆ ಮಾಲಿಕ ಶ್ರೀಧರ್ (49) ಎಂಬಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕು ವಡೇರಹಳ್ಳಿಯಲ್ಲಿ ನಡೆದಿದೆ. ಮೃತ ಶ್ರೀಧರ ಗುತ್ತಿಗೆ ಆಧಾರದ ಮೆಲೆ ಕೆಲಸ ಮಾಡುತ್ತಿದ್ದು, ನಿರ್ಮಾಣ ಹಂತದ ಮನೆಯ ಸೀಲಿನಲ್ಲಿದ್ದ ಹುಕ್ಕಿಗೆ ನೇಣಿಗೆ ಶರಣಾಗಿದ್ದಾನೆ. ಕಟ್ಟಡ ಕೊನೆ ಹಂತದಲ್ಲಿದ್ದರು ಯಾವುದೇ ದೃಷ್ಟಿ ಬೊಂಬೆ ಕಟ್ಟಿಲ್ಲವಾಗಿತ್ತು,ಇದರಿಂದಾನೆ ಕಾಣದ ಶಕ್ತಿ ಪ್ರಭಾವ ಮನೆಯ ಮೇಲೆ ಬಿದ್ದು ಈ ಘಟನೆ ನಡೆದಿದೆ ಎಂದು ಮನೆಯವರ ಶಂಕೆ ವ್ಯಕ್ತಪಡಿಸಿದ್ದಾರೆ. ಸಾವಿಗೆ ಕಾರಣ ಏನು ಎಂಬುದು ಪೊಲೀಸರ ತನಿಖೆ ನಂತರವಷ್ಟೆ ತಿಳಿಯಬೇಕಿದೆ. ಇನ್ನು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ