Srirangapatna Bypass: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯ ಶ್ರೀರಂಗಪಟ್ಟಣ ಬೈಪಾಸ್ ಸಂಚಾರಕ್ಕೆ ಮುಕ್ತ
ಬೆಂಗಳೂರು ಹಾಗೂ ಮೈಸೂರು ಎಕ್ಸ್ಪ್ರೆಸ್ವೇನಲ್ಲಿರುವ 7 ಕಿ.ಮೀ ಉದ್ದದ ಶ್ರೀರಂಗಪಟ್ಟಣ ಬೈಪಾಸ್ ರಸ್ತೆ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿನ 7 ಕಿಮೀ ಉದ್ದದ ಶ್ರೀರಂಗಪಟ್ಟಣ ಬೈಪಾಸ್ ರಸ್ತೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಇದರೊಂದಿಗೆ ದಶ ಪಥಗಳ ಎಕ್ಸ್‌ಪ್ರೆಸ್‌ವೇಯ ಬಹುನಿರೀಕ್ಷಿತ ಎಲ್ಲಾ ಗ್ರೀನ್‌ಫೀಲ್ಡ್ ವಿಭಾಗಗಳು ಪೂರ್ಣಗೊಂಡಂತಾಗಿದೆ.
ಬೆಂಗಳೂರು ಹಾಗೂ ಮೈಸೂರು ಎಕ್ಸ್ಪ್ರೆಸ್ವೇನಲ್ಲಿರುವ 7 ಕಿ.ಮೀ ಉದ್ದದ ಶ್ರೀರಂಗಪಟ್ಟಣ ಬೈಪಾಸ್ ರಸ್ತೆ ಪೂರ್ಣಗೊಂಡಿದ್ದು, ಸಂಚಾರಕ್ಕೆ ಮುಕ್ತವಾಗಿದೆ. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿನ 7 ಕಿಮೀ ಉದ್ದದ ಶ್ರೀರಂಗಪಟ್ಟಣ ಬೈಪಾಸ್ ರಸ್ತೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಇದರೊಂದಿಗೆ ದಶ ಪಥಗಳ ಎಕ್ಸ್‌ಪ್ರೆಸ್‌ವೇಯ ಬಹುನಿರೀಕ್ಷಿತ ಎಲ್ಲಾ ಗ್ರೀನ್‌ಫೀಲ್ಡ್ ವಿಭಾಗಗಳು ಪೂರ್ಣಗೊಂಡಂತಾಗಿದೆ. ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿನ ಮಂಡ್ಯ ಬೈಪಾಸ್ ಸಂಚಾರಕ್ಕೆ ಮುಕ್ತವಾದ ಕೆಲವೇ ದಿನಗಳ ನಂತರ ಶ್ರೀರಂಗಪಟ್ಟಣ ಬೈಪಾಸ್ ರಸ್ತೆಯಲ್ಲಿ ಕೂಡ ಸಂಚಾರ ಮಾಡಬಹುದಾಗಿದೆ.
ಬೆಂಗಳೂರು-ಮೈಸೂರು ನಡುವೆ ಬರುವ ಮಂಡ್ಯ ಬೈಪಾಸ್ ರಸ್ತೆಯನ್ನು ಕೂಡ ಕೆಲವು ದಿನಗಳ ಹಿಂದೆ ತೆರೆಯಲಾಗಿದ್ದು, ಇದು ಪ್ರಯಾಣಿಕರಿಗೆ ಮುಕ್ತವಾಗಿದೆ. ಸಂಸದ ಪ್ರತಾಪ್ ಸಿಂಹ ಈ ಏಳು ಕಿಲೋಮೀಟರ್ ವಿಸ್ತಾರದ ಡ್ರೋನ್ ದೃಶ್ಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮತ್ತಷ್ಟು ಓದಿ: ಮೈಸೂರು ಎಕ್ಸ್‌ಪ್ರೆಸ್ ವೇ ಕಾಮಗಾರಿ ಪರಿಶೀಲನೆಗೆ ದಶಪಥ ಹೆದ್ದಾರಿಯಲ್ಲೆ ಹೆಲಿಕಾಪ್ಟರ್ ಇಳಿಸಲಿದ್ದಾರೆ ಸಾರಿಗೆ ಸಚಿವ ನಿತಿನ್ ಗಡ್ಕರಿ
ಅಧಿಕಾರಿಗಳು ಈಗಾಗಲೇ 7 ಕಿಮೀ ಉದ್ದದ ಬಿಡದಿ ಬೈಪಾಸ್ ಗ್ರೀನ್‌ಫೀಲ್ಡ್ ವಿಭಾಗವನ್ನು, 22 ಕಿಮೀ ಉದ್ದದ ರಾಮನಗರ ಮತ್ತು ಚನ್ನಪಟ್ಟಣ ಬೈಪಾಸ್ ಮಾಡುವ ಮತ್ತು 7 ಕಿಮೀ ಉದ್ದದ ಮದ್ದೂರು ಬೈಪಾಸ್‌ಗಳನ್ನು ಈಗಾಗಲೇ ಸಂಚಾರ ಮುಕ್ತಗೊಳಿಸಿದ್ದಾರೆ. ಜನವರಿ 25 ರಂದು 10 ಕಿಮೀ ಉದ್ದದ ಮಂಡ್ಯ ಬೈಪಾಸ್ ಅನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.
ಶ್ರೀರಂಗಪಟ್ಟಣ ಬೈಪಾಸ್ Srirangapatna Bypass.#MysuruBengaluruExpressway pic.twitter.com/XaJ9AnhmSK
— Pratap Simha (@mepratap) January 28, 2023
ಈ ಹೊಸ ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್‌ವೇಯಿಂದಾಗಿ ಎರಡು ನಗರಗಳ ನಡುವಿನ ಪ್ರಯಾಣದ ಸಮಯವು ಮೂರು ಗಂಟೆಗಳಿಂದ ಸುಮಾರು 90 ನಿಮಿಷಗಳಿಗೆ ಇಳಿಯುವ ನಿರೀಕ್ಷೆಯಿದೆ. 119 ಕಿಮೀ ಉದ್ದದ ಎಕ್ಸ್‌ಪ್ರೆಸ್‌ವೇ ಬೆಂಗಳೂರಿನ ಹೊರವಲಯದಲ್ಲಿರುವ ನೈಸ್ ರಸ್ತೆಯ ಬಳಿ ಪ್ರಾರಂಭವಾಗಿ ಮೈಸೂರಿನ ಔಟರ್ ರಿಂಗ್ ರೋಡ್‌ನಲ್ಲಿ ಕೊನೆಗೊಳ್ಳುತ್ತದೆ.
ಎಕ್ಸ್‌ಪ್ರೆಸ್‌ವೇ ಬೆಂಗಳೂರಿನ ಕೆಂಗೇರಿಯಿಂದ ಮೈಸೂರಿಗೆ ಆರಂಭವಾಗುತ್ತದೆ ಮತ್ತು ಪ್ರಸ್ತುತ 3.5 ಗಂಟೆಗಳ ಪ್ರಯಾಣವನ್ನು ಕೇವಲ 1.5 ಗಂಟೆಗೆ ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಎಕ್ಸ್‌ಪ್ರೆಸ್‌ವೇಯ ಒಟ್ಟು ವೆಚ್ಚ 8,453 ಕೋಟಿ ರೂ. ಆಗಿದ್ದು, ಎಕ್ಸ್‌ಪ್ರೆಸ್‌ವೇಯಿಂದ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ನಿರ್ಬಂಧಿಸಲಾಗುವುದು ಮತ್ತು ನಾಲ್ಕು ಚಕ್ರದ ವಾಹನಗಳು ಮತ್ತು ಭಾರೀ ವಾಹನಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶವಿದೆ. ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಸಮಾನಾಂತರ ಸರ್ವೀಸ್ ರಸ್ತೆಯನ್ನೂ ನಿರ್ಮಿಸಲಾಗಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ