MEIL: ಕೋಲಾರದ ಕೆಸಿ ವ್ಯಾಲಿ ಯೋಜನೆ ಜಲಮೂಲಗಳನ್ನು ಪುನರುಜ್ಜೀವಗೊಳಿಸಿದೆ ಎಂದು ಮುಕ್ತಕಂಠದಿಂದ ಪ್ರಶಂಶಿಸಿದ ವಿಶ್ವಸಂಸ್ಥೆ!

UN General Assembly President: ಕೋಲಾರ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ MEIL ಕೈಗೆತ್ತಿಕೊಂಡಿರುವ ಕೆಸಿ ವ್ಯಾಲಿ ಯೋಜನೆಯು ಬರಪೀಡಿತ ಕೋಲಾರ ಭಾಗದಲ್ಲಿ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ವಸಂಸ್ಥೆ ಮುಕ್ತಕಂಠದಿಂದ ಪ್ರಶಂಸಿಸಿದೆ. ಇದು ತಮಗೆ ಹೆಮ್ಮೆಯ ಕ್ಷಣವಾಗಿದೆ ಎಂದು MEIL ಮುಖ್ಯಸ್ಥರು ಪ್ರತಿಕ್ರಿಯಿಸಿದ್ದಾರೆ.

MEIL: ಕೋಲಾರದ ಕೆಸಿ ವ್ಯಾಲಿ ಯೋಜನೆ ಜಲಮೂಲಗಳನ್ನು ಪುನರುಜ್ಜೀವಗೊಳಿಸಿದೆ ಎಂದು ಮುಕ್ತಕಂಠದಿಂದ ಪ್ರಶಂಶಿಸಿದ ವಿಶ್ವಸಂಸ್ಥೆ!
ಕೆಸಿ ವ್ಯಾಲಿ ಯೋಜನೆಯು ಜಲಮೂಲ ಪುನರುಜ್ಜೀವಗೊಳಿಸುವಲ್ಲಿ ಯಶಸ್ವಿಯಾಗಿದೆ- ಮುಕ್ತಕಂಠದಿಂದ ಪ್ರಶಂಶಿಸಿದ ವಿಶ್ವಸಂಸ್ಥೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 01, 2023 | 3:58 PM

ಕೋಲಾರ ಜಿಲ್ಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ (MEIL) ಕೈಗೆತ್ತಿಕೊಂಡಿರುವ ಕೆಸಿ ವ್ಯಾಲಿ ಯೋಜನೆಯು ಬರಪೀಡಿತ ಕೋಲಾರ ಭಾಗದಲ್ಲಿ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ವಿಶ್ವಸಂಸ್ಥೆ ಮುಕ್ತಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದೆ.

ರಾಜಧಾನಿ ಬೆಂಗಳೂರಿನಿಂದ ಉತ್ಪತ್ತಿಯಾಗುವ ಕೊಳಚೆ ನೀರು ಅಂತರ್ಜಲ ಬತ್ತಿ ಹೋಗಿರುವ ಕೋಲಾರ ಮತ್ತು ಆನೇಕಲ್ ತಾಲೂಕಿನ ಕೆರೆಗಳು ಮತ್ತು ಬೋರ್‌ವೆಲ್‌ಗಳಿಗೆ ಜೀವ ತುಂಬಲು ಹೇಗೆ ಸಹಾಯ ಮಾಡುತ್ತಿದೆ ಎಂಬುದಕ್ಕೆ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಕಾರ್ಯಗತಗೊಳಿಸಿರುವ ಕೆಸಿ ವ್ಯಾಲಿ ಯೋಜನೆಯೇ ಸಾಕ್ಷಿ ಎಂದು KC Valley project ಯೋಜನಾ ಭಾಗಗಳಿಗೆ ಭೇಟಿ ಕೊಟ್ಟಿದ್ದ ವಿಶ್ವಸಂಸ್ಥೆ ಮಹಾ ಸಭೆಯ ಅಧ್ಯಕ್ಷ ಸಿಸಾಬಕೊರೊಸಿ (CsabaKorosi) ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಭೇಟಿ ವೇಳೆ ತೆಗೆದಿರುವ ವಿಡಿಯೋವನ್ನು ಸಹ ಅವರು ವಿಶ್ವಸಂಸ್ಥೆಯ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಭಾರತಕ್ಕೆ ಮೊದಲ ದ್ವಿಪಕ್ಷೀಯ ಭೇಟಿಯ ಭಾಗವಾಗಿ, ಯುಎನ್ ಜನರಲ್ ಅಸೆಂಬ್ಲಿ ಅಧ್ಯಕ್ಷ ಸಿಸಾಬ ಕೊರೋಸಿ (UN General Assembly President Mr CsabaKorosi) ಅವರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ತಜ್ಞರೊಂದಿಗೆ ಕರ್ನಾಟಕದ ಕೆಸಿ ವ್ಯಾಲಿ ಯೋಜನೆಗೆ ಭೇಟಿ ನೀಡಿದರು. ಇದು ಕರ್ನಾಟಕದ ಪ್ರತಿಷ್ಠಿತ ದ್ವಿ-ಉದ್ದೇಶದ ಯೋಜನೆಯಾಗಿದ್ದು, ಬರಪೀಡಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 137 ಟ್ಯಾಂಕ್‌ಗಳಿಗೆ ಸಂಸ್ಕರಿಸಿದ ನೀರಿನಿಂದ ತುಂಬಿಸುತ್ತದೆ. ಇದು ಅಂತರ್ಜಲ ಮಟ್ಟವನ್ನು ಸುಧಾರಿಸುವುದು. ಸಿಸಾಬಕೊರೊಸಿ ಅವರು ಸ್ಥಳೀಯ ಗ್ರಾಮಸ್ಥರೊಂದಿಗೆ ಇದೇ ವೇಳೆ ಸಂವಾದ ನಡೆಸಿದರು ಮತ್ತು ಯೋಜನೆಯಿಂದ ಜನರು ಹೇಗೆ ಪ್ರಯೋಜನ ಪಡೆಯುತ್ತಾರೆ ಎಂಬುದನ್ನು ಅರಿತುಕೊಂಡರು. ಎಂಇಐಎಲ್ ಉಪಾಧ್ಯಕ್ಷ ಸುಧೀರ್ ಮೋಹನ್, ಎವಿಪಿ ಸುಭಾಷ್ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೊರೊಸಿ ಜೊತೆಗಿದ್ದರು. ಇದು ತಮಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಭೇಟಿಯ ವೇಳೆ MEIL ಮುಖ್ಯಸ್ಥರು (MEIL Vice president Mr Sudheer Mohan) ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕೋರಮಂಗಲ-ಚಲಘಟ್ಟ ಕಣಿವೆ (ಕೆಸಿ ವ್ಯಾಲಿ) ಲಿಫ್ಟ್ ನೀರಾವರಿ ಯೋಜನೆಯು ಬೆಂಗಳೂರಿನಿಂದ ಸಂಸ್ಕರಿಸಿದ ನೀರನ್ನು ನೆರೆಯ ಬರಪೀಡಿತ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಸಂಸ್ಕರಿತ ನೀರು ಪೂರೈಸುವ ಗುರಿಯೊಂದಿಗೆ ಕಲ್ಪಿಸಲಾಗಿದೆ. ಈ ಹಿಂದೆ ಕೋಲಾರ ಭಾಗಗಳಲ್ಲಿ ಅಂತರ್ಜಲ ಮಟ್ಟ ಬಹುತೇಕ 2 ಸಾವಿರ ಅಡಿ ಆಳಕ್ಕೆ ಕುಸಿದಿತ್ತು. ಇದೀಗ ಕೆಸಿ ವ್ಯಾಲಿ ಯೋಜನೆ ಬಂದ ನಂತರ ಇಲ್ಲಿ ಅಂತರ್ಜಲ ಮಟ್ಟ ಸುಧಾರಿಸಿದ್ದು, ಅಂತರ್ಜಲ ಸಂರಕ್ಷಕನಂತೆ ಕಾರ್ದಯಗತ್ವಾಗಿದೆ. ತತ್ಫಲವಾಗಿ ಈಗ 400-500 ಅಡಿ ಆಳದಲ್ಲಿ ನೀರು ಲಭಿಸುತ್ತದೆ!

ಕೋಲಾರದ ಕೆಸಿ ವ್ಯಾಲಿ ಯೋಜನೆ ಭಾಗಗಳಿಗೆ ವಿಶ್ವಸಂಸ್ಥೆ ಮುಖ್ಯಸ್ಥರು ಭೇಟಿ ನೀಡಿ ಮುಕ್ತಕಂಠದಿಂದ ಪ್ರಶಂಶಿಸಿರುವುದಕ್ಕೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಅವರು ಟ್ವೀಟ್​ ಮಾಡಿ, ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಕೆಸಿ ವ್ಯಾಲಿ ಯೋಜನೆ ತ್ಯಾಜ್ಯನೀರಿನ ಮರುಬಳಕೆಯಲ್ಲಷ್ಟೇ ಇತಿಹಾಸ ಸೃಷ್ಟಿಸಿರುವುದಲ್ಲ, ರೈತರ ಬದುಕಲ್ಲಿ ಬದಲಾವಣೆ ಮೂಡಿಸಿ ಜಾಗತಿಕ ನಾಯಕರ ಗಮನ ಸೆಳೆದಿದೆ ಎಂಬುದಕ್ಕೆ @UN_PGA ರ ಮಾತುಗಳು ಸಾಕ್ಷಿ. ಮುಖ್ಯಮಂತ್ರಿಯಾಗಿ ಯೋಜನೆ ಜಾರಿಮಾಡಿದ ನನಗಿದು ಪ್ರಶಸ್ತಿ, ಸನ್ಮಾನಗಳಿಗಿಂತಲೂ ದೊಡ್ಡದು ಎಂದಿದ್ದಾರೆ.

Published On - 3:50 pm, Wed, 1 February 23