ಬೆಂಗಳೂರು, ಆಗಸ್ಟ್ 04: ನಗರದಲ್ಲಿ ಸಂಚಾರ ದಟ್ಟಣೆಯನ್ನು (Bengaluru Traffic) ನಿಯಂತ್ರಿಸುವ ನಿಟ್ಟಿನಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸರು (Bengaluru Traffic Police) ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ವಾಹನ ಸವಾರರಿಗೆ, ಪಾದಾಚಾರಿಗಳಿಗೆ ಸಂಚಾರಿ ನಿಯಮಗಳನ್ನು ತಿಳಿಸುತ್ತಿದ್ದಾರೆ. ಜೊತೆಗೆ ಹೊಸ ಹೊಸ ಉಪಕ್ರಮಗಳನ್ನು ಜಾರಿಗೊಳಿಸುತ್ತಿದ್ದಾರೆ. ಇದೀಗ ನಗರದ ಒಳಗೆ ಭಾರಿ ಸರಕು ವಾಹನ (Heavy goods vehicle) ಸಂಚಾರ ಸಮಯದಲ್ಲಿ ಕೊಂಚ ಬದಲಾವಣೆ ಮಾಡಿದ್ದಾರೆ.
ಬೆಂಗಳೂರು ನಗರ ಸಂಚಾರ ಪೊಲೀಸ್ ಹೊರಡಿಸಿರುವ ಅಧಿಕೃತ ಹೇಳಿಕೆಯ ಪ್ರಕಾರ, ಭಾರಿ ಸರಕು ವಾಹನಗಳನ್ನು ವಾರದ ಎಲ್ಲ ದಿನಗಳಲ್ಲಿ ನಿರ್ದಿಷ್ಟ ಸಮಯದಲ್ಲಿ ನಿರ್ಬಂಧಿಸಲಾಗಿದೆ. ನಗರದಲ್ಲಿ ಸುಮಗಮ ಸಂಚಾರಕ್ಕೆ ನಿರ್ಬಂಧ ಅಗತ್ಯ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ 10ರವರೆಗೆ ಭಾರಿ ಸರಕು ವಾಹನಗಳು ಬೆಂಗಳೂರು ಮಹಾನಗರದ ಒಳಗಿನ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಆದರೆ, ಎಲ್ಲ ಶನಿವಾರಗಳಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30ರವರೆಗೆ ಹಾಗೂ ಸಂಜೆ 4:30 ರಿಂದ ರಾತ್ರಿ 9ಗಂಟೆಯವರೆಗೆ ನಿಷೇಧಿಸಿ ಮಾರ್ಪಾಡು ಮಾಡಲಾಗಿದೆ. ಈ ಹೊಸ ನಿಯಮ ಈಗಾಗಲೇ ಜಾರಿಯಾಗಿದೆ. ಇನ್ನುಳಿದಂತೆ ವಾರದ ಆರು ದಿನಗಳಲ್ಲಿ ಮೊದಲಿನಂತೆಯೇ ಮುಂದುವರೆಯಲಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಸಿದ್ಧವಾಗಲಿವೆ 17 ಸಿಗ್ನಲ್ ಮುಕ್ತ ಕಾರಿಡಾರ್‌ಗಳು
“ಸಂಚಾರ ಸಲಹೆ “/”Traffic advisory ” pic.twitter.com/baYsCbHmxO
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 2, 2024
ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಮಾಡುವ ಉದ್ದೇಶದೊಂದಿಗೆ ಭಾರಿ ವಾಹನಗಳಿಗೆ ನಗರ ಪ್ರವೇಶಕ್ಕೆ ಸಮಯ ನಿರ್ಬಂಧ ಹೇರಿದ ಕುರಿತು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿ ವಿಡಿಯೋ ಸಂದೇಶ ರವಾನಿಸಿದ್ದಾರೆ. “ಈ ಹೊಸ ನಿಯಮ ಶನಿವಾರಕ್ಕೆ ಮಾತ್ರ ಅನ್ವಯಿಸುವಂತೆ ಮಾತ್ರ ಜಾರಿ ಮಾಡಲಾಗಿದೆ. ಈ ನಿಯಮ ಆಗಸ್ಟ್ 3 ಶನಿವಾರದಿಂದಲೇ ಆರಂಭವಾಗಿದೆ” ಎಂದು ತಿಳಿಸಿದ್ದಾರೆ.
ಬಿಎಂಆರ್ಸಿಎಲ್ ಮತ್ತು ಬೆಸ್ಕಾಂ ಕಾಮಗಾರಿಗಖಯ ನಡೆಯುತ್ತಿರುವುದರಿಂದ ಬೆಂಗಳೂರಿನ ಹೊರವರ್ತುವಲ ರಸ್ತೆಯಲ್ಲಿ ಇನ್ನೂ 10 ದಿನ ಸಂಚಾರ ವ್ಯತ್ಯಯವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:43 am, Sun, 4 August 24