ಬೆಂಗಳೂರು: ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ನಗರದ ಹೆಬ್ಬಾಳ ಫ್ಲೈಓವರ್ಗೆ ಹೆಚ್ಚುವರಿ ರ‍್ಯಾಂಪ್ ಕಾಮಗಾರಿ (Hebbal flyover ramp work) ನಡೆಯುತ್ತಿರುವ ಹಿನ್ನೆಲೆ ಹೆಬ್ಬಾಳ ಪೊಲೀಸ್ ಠಾಣೆಯಿಂದ ಬೆಂಗಳೂರು ಸರ್ವಿಸ್ ರಸ್ತೆ ಬಂದ್ ಮಾಡಲಾಗಿದೆ. ಫ್ಲೈಓವರ್ ಕಾಮಗಾರಿ ಜುಲೈ 15ರವರೆಗೆ ನಡೆಯಲಿದ್ದು, ಹೆಬ್ಬಾಳ ಫ್ಲೈಓವರ್ ಸುತ್ತಮುತ್ತ ಜುಲೈ 15ರವರೆಗೆ ಟ್ರಾಫಿಕ್ ಜಾಮ್ ಬಿಸಿ.
ಈ ಕುರಿತಾಗಿ ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ಈ ಕಾಮಗಾರಿ 15ನೇ ಜುಲೈ 2023 ರವರೆಗೆ ನಡೆಯಲಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಅದಕ್ಕೆ ಅನುಗುಣವಾಗಿ ಯೋಜಿಸಲು ಸೂಚಿಸಿದ್ದು, ದಯಮಾಡಿ ಸಹಕರಿಸಿ ಎಂದಿದ್ದಾರೆ.
This work will continue until 15th July 2023. Commuters are advised to plan their travel accordingly. Kindly cooperate.
2/2 pic.twitter.com/b4LtbMj0WY
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) July 1, 2023
ಹೆಬ್ಬಾಳ ಮೇಲ್ಸೇತುವೆ ಹೆಚ್ಚುವರಿ ರ‍್ಯಾಂಪ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ನಗರದ ಕಡೆಗೆ ಹೋಗುವ ಸರ್ವೀಸ್ ರಸ್ತೆ ಬಂದ್ ಮಾಡಲಾಗಿದೆ. ಸಂಪೂರ್ಣ ಸರ್ವಿಸ್ ರಸ್ತೆ ಸಂಚಾರವನ್ನು ಮುಖ್ಯ ರಸ್ತೆಯೊಂದಿಗೆ ವಿಲೀನಗೊಳಿಸಲಾಗುತ್ತಿದೆ. ಹಾಗಾಗಿ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಬಿಸಿ ತಟ್ಟಲಿದೆ.
ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ದುಡ್ಡು ಯಾವಾಗ ಬರುತ್ತೆ ಎಂಬ ಪ್ರಶ್ನೆಗೆ ಸಿಎಂ ಏನ್ ಹೇಳಿದ್ರು ಗೊತ್ತಾ?
ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ಸುಗಮಗೊಳಿಸಲು ಹೆಚ್ಚುವರಿ ರ‍್ಯಾಂಪ್ ನಿರ್ಮಿಸುವ ಕಾರ್ಯ ಇದೀಗ ಆರಂಭವಾಗಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. 700 ಮೀ ಉದ್ದದ ಮೇಲ್ಸೇತುವೆಯನ್ನು 87 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯ ಇದು ಅಸ್ತಿತ್ವದಲ್ಲಿರುವ ಮೇಲ್ಸೇತುವೆಗೆ ಹೆಚ್ಚುವರಿಯಾಗಿ ನಿರ್ಮಿಸಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಈ ವಾರದ ಆರಂಭದಲ್ಲಿ ಎಸ್ಟೀಮ್ ಮಾಲ್‌ನಿಂದ ಪ್ರಾರಂಭಗೊಳಿಸಿದ್ದು, ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಕೊನೆಗೊಳಿಸಲಿದೆ. ಈ ಯೋಜನೆಯನ್ನು ಮೊದಲು 2015 ರಲ್ಲಿ ಯೋಜಿಸಲಾಗಿತ್ತು, ಆದರೆ ರಾಜಕೀಯ ಮತ್ತು ಇತರ ಕಾರಣಗಳಿಂದ ಯೋಜನೆಯು ವಿಳಂಬವಾಯಿತು.
ಇದನ್ನೂ ಓದಿ: Anna Bhagya: ಇಂದಿನಿಂದ ಅನ್ನಭಾಗ್ಯ ಜಾರಿ, ಅಕ್ಕಿ ಬದಲು ಖಾತೆಗೆ ಬೀಳಲಿದೆ ಹಣ
ಹೆಬ್ಬಾಳ ಮೇಲ್ಸೇತುವೆ ಬಳಿ ಕಾಮಗಾರಿ ಆರಂಭವಾಗಿದೆ ಎಂದು ಬೈತರಾಯನಪುರ ಶಾಸಕ ಹಾಗೂ ಕಂದಾಯ ಸಚಿವ ಕೃಷ್ಣ ಬೈರೇಗೌಡ ಖಚಿತಪಡಿಸಿದ್ದಾರೆ. ಹೆಬ್ಬಾಳ ಜಂಕ್ಷನ್ ನಗರದ ಪ್ರಮುಖ ಅಡಚಣೆಗಳಲ್ಲಿ ಒಂದಾಗಿದೆ ಮತ್ತು ಈ ಹೆಚ್ಚುವರಿ ರ‍್ಯಾಂಪ್ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ಬರುವ ಪ್ರಯಾಣಿಕರಿಗೆ ಸಹಾಯವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.