ಬೆಂಗಳೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ವಿರುದ್ಧ ಮಾಡಿದ ಟ್ವೀಟ್ ಸತ್ಯವೇ ಆಗಿದೆ ಎಂದು ಐಪಿಎಸ್ ಅಧಿಕಾರಿ ಡಿ.ರೂಪ (IPS Officer D.Roopa) ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ರಾಜೀ ಸಂಧಾನಕ್ಕೆ ಹೋಗುವ ಅಗತ್ಯವೇನಿತ್ತು? ಐಎಎಸ್ ಅಧಿಕಾರಿ ಆಗಿ ರಾಜಕಾರಣಿಗಳ ಬಳಿ ಸಂಧಾನಕ್ಕೆ ಯಾಕೆ ಹೋಗಬೇಕು? ದೇಶದ ಇತಿಹಾಸದಲ್ಲಿ ಮೊದಲ ಬಾರಿ ರಾಜಕಾರಣಿ ಬಳಿ ಸಂಧಾನಕ್ಕೆ ಹೋಗಿದ್ದಾರೆ. ಸರ್ಕಾರಿ ನಿಯಮದಲ್ಲೇ ಇದು ಇರುವುದಿಲ್ಲ. ರಾಜಕಾರಣಿ ಬಳಿ IAS ಅಧಿಕಾರಿ ಹೋಗಿರುವುದು ಖೇದ ಅನಿಸುತ್ತಿದೆ ಎಂದ ಹೇಳಿ ರೋಹಿಣಿ ಸಿಂಧೂರಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಮೈಸೂರಿನ ಪಾರಂಪರಿಕ ತಾಣದಲ್ಲಿ ಸ್ವಿಮ್ಮಿಂಗ್ ಪೂಲ್ ನಿರ್ಮಾಣ ಮಾಡಿದ್ದು, ಆ ಮೂಲಕ ಸಾರ್ವಜನಿಕರ ತೆರಿಗೆ ಹಣ ದುರ್ಬಳಕೆ ಮಾಡಿದ್ದಾರೆ. ಇಂತಹ ಅನೇಕ ಆರೋಪಗಳು ರೋಹಿಣಿ ಸಿಂಧೂರಿ ವಿರುದ್ಧ ಇದೆ. ಈ ಎಲ್ಲದರ ಬಗ್ಗೆ ಸಂಬಂಧಪಟ್ಟವರು ತನಿಖೆ ನಡೆಸಬೇಕು. ಇದರಲ್ಲಿ ನನ್ನ ಯಾವುದೇ ವೈಯಕ್ತಿಕ ವಿಚಾರ ಇಲ್ಲ ಎಂದು ರೂಪ ಹೇಳಿದ್ದಾರೆ.
ನಾನು ಅವರಿಗೆ ತುಂಬಾ ಸಹಾಯ ಮಾಡಿಕೊಟ್ಟಿದ್ದೇವೆ. ಡಿ.ಕೆ ರವಿಯವರ ವಿಚಾರದಲ್ಲಿಯು ಸಹ ನಾನು ಮಾತನಾಡಿದ್ದೆ. ಅವರು ಅವತ್ತೆ ಕಟ್ ಮಾಡಬೇಕಿತ್ತು. ಅವರು ಅವತ್ತೇ ಎಡವಿದ್ರು, ಅವತ್ತು ಹೇಳಿದ್ದೆ ಇವತ್ತು ಹೇಳಿದ್ದೀನಿ. ಇದೀಗ ಯಾಕೆ ಈ ವಿಚಾರ? ಆ ಫೋಟೋಗಳನ್ನು ಈಗ ಯಾಕೆ ಹಾಕಿದ್ದೀರ ಅಂತ ಕೇಳಬೇಡಿ. ನಾನು ಅದನ್ನು ಸರ್ಕಾರಕ್ಕೆ ಕೊಡುತ್ತೇನೆ. ಇಂತಹ ಫೋಟೋಗಳನ್ನು ಓರ್ವ ಐಎಎಸ್ ಅಧಿಕಾರಿ ಪುರುಷ ಅಧಿಕಾರಿಗೆ ಕಳಿಸುತ್ತಾರೆ ಅಂದರೆ ಏನು ಅರ್ಥ ಎಂದು ಪ್ರಶ್ನಿಸಿದರು. ಫೋಟೋ ಒನ್ ಟು ಒನ್ ಕಳಿಸಿದ್ದಾರೆ ಅಂದರೆ ಏನು ಅರ್ಥ? ಇದರ ಮೊಟೀವ್ ಏನು? ಅದಕ್ಕೆ ಎಂಎಲ್ಎ ಬಳಿಯಲ್ಲಿ ಸಂಧಾನಕ್ಕೆ ಹೋದ್ರ? ಏನನ್ನು ಮುಚ್ಚಿ ಇಡುತ್ತಿದ್ದಾರೆ ಇವರು. ನನಗೆ ಗೊತ್ತಾಯ್ತು ಈಗ ಹೀಗಾಗಿ ನಾನು ಈಗ ಕೊಟ್ಟಿದ್ದೇನೆ ಎಂದರು.
ಇದನ್ನೂ ಓದಿ: IAS vs IPS Fight: ರೋಹಿಣಿ ಸಿಂಧೂರಿ ವಿರುದ್ಧ ಡಿ.ರೂಪಾ 19 ಆರೋಪಗಳ ಪಟ್ಟಿ, ಡಿ.ಕೆ.ರವಿ ಹೆಸರು ಉಲ್ಲೇಖ
ಸಂಧಾನ ಅಂತ ಮೀಡಿಯಾದಲ್ಲಿ ಬಂತು, ಈಗ ಯಾವ ಐಎಎಸ್ ಅಧಿಕಾರಿ ಸಂಧಾನಕ್ಕೆ ಅವಕಾಶ ಇದೆ. ಸರ್ಕಾರದ ಮಟ್ಟದಲ್ಲಿ ಪೇಪರ್ ಇರುವಾಗ ಯಾಕೆ ಸಂಧಾನಕ್ಕೆ ಹೋಗಬೇಕು. ಏನು ತಪ್ಪು ಮಾಡಿದ್ದಾರೆ? ಭಾರತದ ಇತಿಹಾಸದಲ್ಲಿ ಒಬ್ಬ ಐಎಎಸ್ ಅಧಿಕಾರಿ ಸಂಧಾನಕ್ಕೆ ಹೋಗಿರುವುದು ಮೊದಲ ಬಾರಿ ಹೋಗಿದ್ದು ಮತ್ತು ಕೇಳಿದ್ದು. ನಮ್ಮ ಮನೆಯವರು ಮೌನೀಶ್ ಮೌದ್ಗಿಲ್ ಅವರಿಗೆ ಸಾಕಷ್ಟು ಡ್ರಾಪ್ಟ್ ರೆಡಿ ಮಾಡಿ ಕೊಟ್ಟಿದ್ದಾರೆ. ಶಿಲ್ಪಾ ನಾಗ್ ಜೊತೆ ಜಗಳ ಮಾಡಿಕೊಂಡರು. ಅನೇಕ ಬೇರೆ ಘಟನೆಗಳು ಆಕೆ ಬಗ್ಗೆ ತಿಳಿದಿದ್ದರಿಂದ ಬರೆದಿದ್ದೇನೆ. ಇವರು ಕೆಲವು ಕಳಿಸಬಾರದ ಫೋಟೋ ಕಳಿಸಿದ್ದು ಹೇಳಿದ್ದೇನೆ. ಅದು ಈಗ ಕೇಳಬೇಡಿ, ಅದು ಸರ್ಕಾರದ ಮಟ್ಟದಲ್ಲಿ ತನಿಖೆಯಲ್ಲಿದೆ. ಇಂತಹ ಫೋಟೋಗಳನ್ನ ಒಬ್ಬ ಐಎಎಸ್ ಅಧಿಕಾರಿ ಎಲ್ಲರಿಗೂ ಮಾದರಿಯಾಗಬೇಕಾದವರು ಪುರುಷ ಅಧಿಕಾರಿಗೆ ಯಾಕೆ ಕಳಿಸಬೇಕು ಎಂದು ಪ್ರಶ್ನಿಸಿದರು.
ಒಂದು ತಿಂಗಳ ಹಿಂದೆ ನನಗೆ ಫೋಟೋ ಸಿಕ್ಕಿದೆ. ಸರ್ಕಾರಕ್ಕೆ ತನಿಖೆಗೆ ಕೊಟ್ಟಿದ್ದೇನೆ. ಇದು ಪ್ರೈವೇಟ್ ವಿಚಾರ ಅಂತ ಬರಲ್ಲ. ಸರ್ವಿಸ್ ರೂಲ್ ಪ್ರಕಾರ ಇಂಟಿಗ್ರಿಟಿ ಇರಬೇಕು. ಅನೇಕ ವಿಚಾರಗಳು ಗಂಭೀರವಾಗಿವೆ. ಕೊವೀಡ್ ಸಮಯದಲ್ಲಿ ಜನ ಸಾಯುತ್ತಿದ್ದರೂ ಸಾರ್ವಜನಿಕರ ಹಣ ಬಳಸಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸುತ್ತಾರೆ. ಆಕೆಗೆ ಮಾನವೀಯತೆ ಇದೆಯೇ? ಪ್ರಾಥಮಿಕ ತನಿಖೆ ನಡೆದು ಆರೇಳು ತಿಂಗಳು ಆಯ್ತು, ಇನ್ನೂ ಡಿಇ ಆಗಿಲ್ಲ. ಅವರು ಸಿಂಪತಿ ತಗೊಂಡೆ ಅವರ ಮೇಲೆ ಯಾವುದೇ ಕ್ರಮ ಆಗದಂತೆ ನೋಡಿ ಕೋಳ್ಳುತ್ತಾರೆ. ಇದರಲ್ಲಿ ಪರ್ಸನಲ್ ಏನು ಇಲ್ಲ. ಫೋಟೋವನ್ನು ಒನ್ ಟು ಒನ್ ಪುರುಷ ಅಧಿಕಾರಿಗಳಿಗೆ ಯಾಕೆ ಕಳಿಸಿದರು? ಕೆಲವರಿಗೆ ವಾಯ್ಸ್ ಇರುತ್ತದೆ, ನನ್ನಂತವರು ಮಾತಾಡ್ತಾರೆ. ಯಾರು ತಪ್ಪು ಮಾಡುತ್ತಾರೋ ಅವರು ಉತ್ತರಿಸಬೇಕು ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ