
ಬೆಂಗಳೂರು, ಜ.16: ಬೆಂಗಳೂರಿನಲ್ಲಿ (Bengaluru IT salary) ಕೆಲಸಕ್ಕೆ ಸೇರಿ 5 ವರ್ಷ ಅನುಭವ ಇದ್ರೂ ಸರಿಯಾದ ಸಂಬಳ ಸಿಗುವುದಿಲ್ಲ. ಅಂತದ್ರಲ್ಲಿ 1 ವರ್ಷ ಅನುಭವ ಇರುವವರಿಗೆ ಲಕ್ಷ ಸಂಬಳ ಸಿಗುತ್ತದೆ ಎಂದ್ರೆ ನಂಬುದು ಹೇಗೆ? ಆದರೆ ಈ ಪೋಸ್ಟ್ ನೋಡಿದ ಮೇಲೆ ನಂಬಲೇಬೇಕು. ಹೌದು ಇದೀಗ ಇಲ್ಲೊಂದು ವೈರಲ್ ಆಗಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಎಂಜಿನಿಯರ್ (ಎಸ್‌ಡಿಇ) ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದ್ದಾರೆ. ಇದರಲ್ಲಿ ಸಂಬಳದ ಬಗ್ಗೆ ತಿಳಿಸಿದ್ದಾರೆ. ಕಂಪನಿಯೊಂದು ಒಂದು ವರ್ಷ ಅನುಭವ ಇರುವವರಿಗೆ 1 ಲಕ್ಷ ಸಂಬಳ ನೀಡಲು ಮುಂದಾಗಿದೆ. ಈ ಬಗ್ಗೆಯೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಪೋಸ್ಟ್ನ್ನು ಎಕ್ಸ್ನಲ್ಲಿ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಭಾರತದ ತಂತ್ರಜ್ಞಾನ ಉದ್ಯಮ ತಮ್ಮ ಉದ್ಯೋಗಿಗಳಿಗೆ ಹೇಗೆ ಹೆಚ್ಚಿನ ಆದಾಯವನ್ನು ನೀಡುತ್ತಿದೆ ಎಂಬುದನ್ನು ಇದು ತಿಳಿಸುತ್ತದೆ. ಈ ಬಗ್ಗೆ ನೆಟ್ಟಿಗರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡಿದ್ದಾರೆ.
ಈ ಪೋಸ್ಟ್ನ ಸ್ಕ್ರೀನ್‌ಶಾಟ್ ಅನ್ನು ಎಂಜಿನಾರ್ಡ್ ಎಂಬ ಬಳಕೆದಾರರು ಪೋಸ್ಟ್ ಮಾಡಿದ್ದು, ಈ ಸಂಬಳದ ಬಗ್ಗೆ ಟೀಕೆಗಳು ಕೂಡ ಬಂದಿದೆ. ಒಂದು ಕಡೆ ಕೆಲಸದಿಂದ ವಜಾಗಳು ನಡೆಯುತ್ತಿವೆ ಮತ್ತು ಇನ್ನೊಂದು ಕಡೆ ಕಂಪನಿಗಳು 1 ವರ್ಷದ ಅನುಭವಕ್ಕೆ ಇಷ್ಟೊಂದು ಸಂಬಳ ನೀಡುತ್ತಿದೆ ಎಂದು ಕಮೆಂಟ್ ಮಾಡಿತ್ತಿದ್ದಾರೆ. ವಾರ್ಷಿಕ 25 ಲಕ್ಷ ರೂ. (ಎಲ್‌ಪಿಎ) ಸಂಬಳ, 20 ಲಕ್ಷ ರೂ. ಮೌಲ್ಯದ ESOP (ಉದ್ಯೋಗಿ ಷೇರು ಮಾಲೀಕತ್ವ ಯೋಜನೆ , ಸೈನ್-ಆನ್ ಬೋನಸ್ ಜತೆಗೆ ಪದೋನ್ನತಿ, ಜಿಮ್ನ ಖರ್ಚು, ಮನೆಯಿಂದ ಕೆಲಸ ಮಾಡಲು 21,000 ರೂ. ಭತ್ಯೆ, ಪ್ರತಿ ಮೂರು ವರ್ಷಗಳಿಗೊಮ್ಮೆ ಬದಲಿ ಸ್ಮಾರ್ಟ್‌ಫೋನ್, ಝೊಮ್ಯಾಟೊದಿಂದ ದಿನಕ್ಕೆ 600 ರೂ. ಮೌಲ್ಯದ ಕ್ರೆಡಿಟ್, ಮೊಬೈಲ್ ಫೋನ್ ಮತ್ತು ವೈಫೈ ಬಿಲ್ ಪಾವತಿಯನ್ನು ಈ ಕಂಪನಿಯೇ ಮಾಡುತ್ತಿದೆ ಎಂದು ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಕದ್ದ ಗಡಿಯಾರದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ ಮಾಲೀಕನ ಕೈಗೆ ಸಿಕ್ಕಿಬಿದ್ದ ಮನೆಗೆಲಸದಾಕೆ
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
At one side layoffs are happening and other side companies are offering such high salaries for 1 year experience
And the fun part is that same company would be paying lesser to 5-8yrs experience employee already working with them.
Salary structure is completely broken in tech. pic.twitter.com/5k5Rivwb3H
— EngiNerd. (@mainbhiengineer) January 14, 2026
ಈ ಎಲ್ಲ ಸೌಲಭ್ಯಗಳು ಸೇರಿ ಮೊದಲ ವರ್ಷಕ್ಕೆ ಒಬ್ಬ ಉದ್ಯೋಗಿಗೆ 35 ಲಕ್ಷ ರೂ. ವ್ಯಯ ಮಾಡುತ್ತದೆ. ಕೇವಲ ಒಂದು ವರ್ಷದ ಅನುಭವ ಹೊಂದಿರುವ ಎಂಜಿನಿಯರ್‌ಗೆ ಇಷ್ಟೊಂದು ಸೌಲಭ್ಯವೇ ಎಂದು ಹಲವು ಜನಗಳು ಅಚ್ಚರಿಗೊಂಡಿದ್ದಾರೆ. ಅದೇ ಕಂಪನಿಯಲ್ಲಿ ಕೆಲಸ ಮಾಡುವ ಇತರ ಉದ್ಯೋಗಿಗಳಿಗೆ ಇದಕ್ಕಿಂತ ಕಡಿಮೆ ಸಂಬಳ ಇರಬಹುದು ಎಂದು ಒಬ್ಬರು ಹೇಳಿದ್ದಾರೆ. 1 ವರ್ಷ ಅನುಭವ ಇರುವ ವ್ಗಕ್ತಿಗಿಂತ 5-8 ವರ್ಷಗಳ ಅನುಭವ ಹೊಂದಿರುವ ಉದ್ಯೋಗಿಗಳಿಗೆ ಕಡಿಮೆ ವೇತನವನ್ನು ನೀಡುತ್ತದೆ. ಇದು ಐಟಿ ಕಂಪನಿಗಳ ರೂಲ್ಸ್ ಎಂದು ಮತ್ತೊಬ್ಬರು ಹೇಳಿದ್ದಾರೆ. ನಿಷ್ಠೆ, ಉಳಿಸಿಕೊಳ್ಳುವಿಕೆ ಮತ್ತು ಅನ್ಯಾಯದ ವೇತನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿದೆ. ಇನ್ನೊಬ್ಬರು ಸರಳವಾಗಿ ಹೇಳಬೇಕೆಂದರೆ ಮುಗ್ಧರಾಗಿರಬೇಡಿ ಮತ್ತು ನಿಮ್ಮನ್ನು ಕಂಪನಿಗೆ ನಿಷ್ಠರಾಗಿ ಇರಬೇಕು. ಕೆಲಸವನ್ನು ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಿ ಎಂದು ಮತ್ತೊಬ್ಬರು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ