ಬೆಂಗಳೂರು: ಕದ್ದ ಗಡಿಯಾರದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್ ಹಾಕಿ ಮಾಲೀಕನ ಕೈಗೆ ಸಿಕ್ಕಿಬಿದ್ದ ಮನೆಗೆಲಸದಾಕೆ
ಬೆಂಗಳೂರಿನಲ್ಲಿ ಮನೆ ಕೆಲಸದಾಕೆ ಸೌಮ್ಯ ಮಾಲೀಕರ ಬ್ರಾಂಡ್ ವಾಚ್ ಮತ್ತು ಚಿನ್ನಾಭರಣ ಕದ್ದು, ಕದ್ದ ವಾಚ್ ಧರಿಸಿ ವಾಟ್ಸಾಪ್ ಸ್ಟೇಟಸ್‌ನಲ್ಲಿ ಫೋಟೋ ಹಾಕಿದಳು. ಇದನ್ನೇ ಆಧಾರವಾಗಿಟ್ಟುಕೊಂಡು ಮಾಲೀಕರು ಪೊಲೀಸರಿಗೆ ದೂರು ನೀಡಿದಾಗ ಆಕೆ ಸಿಕ್ಕಿಬಿದ್ದಿದ್ದಾಳೆ. ಸುಮಾರು 4.5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 20,000 ಮೌಲ್ಯದ ವಾಚ್ ವಶಪಡಿಸಿಕೊಳ್ಳಲಾಗಿದೆ.

ಬೆಂಗಳೂರು ಜ.16: ಮನೆಯ ಯಜಮಾನನ ಬ್ರಾಂಡ್ ವಾಚ್ ಕದ್ದು, ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡ ಮನೆ ಕೆಲಸದಾಕೆ, ಇದೀಗ ಯಜಮಾನನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ಬೆಂಗಳೂರಿನ ಸರ್ಜಾಪುರದಲ್ಲಿ (Bengaluru Maid Caught) ನಡೆದಿದೆ. ಬ್ರಾಂಡ್ ವಾಚ್ ಧರಿಸಿದ ಫೋಟೋವನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡಿರುವುದೇ, ಆಕೆ ಸಿಕ್ಕಿ ಬೀಳಲು ಕಾರಣವಾಗಿದೆ. ಪೊಲೀಸರು ಈ ಫೋಟೋವನ್ನು ಇಟ್ಟುಕೊಂಡು ಮನೆ ಕೆಲಸದಾಕೆಯನ್ನು ಪತ್ತೆ ಮಾಡಿದ್ದಾರೆ. ಆರೋಪಿಯನ್ನು ದೊಡ್ಡಕನ್ನನಹಳ್ಳಿ ನಿವಾಸಿ ಸೌಮ್ಯ (26) ಎಂದು ಗುರುತಿಸಲಾಗಿದೆ.
ಸರ್ಜಾಪುರ ರಸ್ತೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುವ ಖಾಸಗಿ ಕಂಪನಿಯೊಂದರ ಹಿರಿಯ ಉತ್ಪನ್ನ ವ್ಯವಸ್ಥಾಪಕ ಆಗಿರುವ ರೋಹಿತ್ (39)ಅವರು ಜನವರಿ 5 ರಂದು ಈ ಬಗ್ಗೆ ದೂರು ನೀಡಿದ್ದಾರೆ. ಡಿಸೆಂಬರ್ 8, 2025 ರಂದು ಅವರ ಮನೆಯಿಂದ 42 ಗ್ರಾಂ ಚಿನ್ನದ ಮಂಗಳಸೂತ್ರ, ಒಂದು ಜೊತೆ ಕಿವಿಯೋಲೆಗಳು ಮತ್ತು ಮೈಕೆಲ್ ಕೋರ್ಸ್ ಬ್ರಾಂಡ್ ಗಡಿಯಾರ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ರೋಹಿತ್ ಅವರು ಸೌಮ್ಯ ಅನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಆಕೆ ಇಲ್ಲ ನಾನು ಕದ್ದಿಲ್ಲ. ಈ ಬಗ್ಗೆ ನನಗೆ ಏನು ಗೊತ್ತಿಲ್ಲ, ನಾನು ಯಾವುದನ್ನು ಕದ್ದಿಲ್ಲ ಎಂದು ಹೇಳಿದ್ದಾಳೆ. ನಂತರ ಕೆಲಸಕ್ಕೆ ಬರುವುದನ್ನು ನಿಲ್ಲಿಸಿದಳು. ಡಿಸೆಂಬರ್ 28 ರಂದು, ರೋಹಿತ್ ಆಕಸ್ಮಿಕವಾಗಿ ವಾಟ್ಸಾಪ್ ಪರಿಶೀಲಿಸುತ್ತಿದ್ದಾಗ, ಸೌಮ್ಯಾ ತನ್ನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಬ್ರಾಂಡ್ ವಾಚ್ ಧರಿಸಿದ ಫೋಟೋ ಹಾಕಿಕೊಂಡಿದ್ದಾಳೆ.
ಇದನ್ನೂ ಓದಿ: ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೊಳಗಾದ ವ್ಯಕ್ತಿ ಆತ್ಮಹತ್ಯೆ, ಕಾರಣ ಏನು ಗೊತ್ತಾ?
ರೋಹಿತ್ ಈ ಫೋಟೋದ ಬಗ್ಗೆ ತನ್ನ ಕುಟುಂಬದವರನ್ನು ಕೇಳಿದ್ದಾರೆ. ಈ ವೇಳೆ ಮನೆಯವರು ಹೌದು ಇದು ನಮ್ಮ ವಾಚ್ ಎಂದು ಹೇಳಿದ್ದಾರೆ. ನಂತರ ತನ್ನ ಮನೆಯಿಂದ ಕದ್ದ ಅದೇ ಗಡಿಯಾರ ಎಂದು ತಿಳಿದು. ಸೌಮ್ಯಾ ಹಾಕಿದ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್‌ಶಾಟ್ ತೆಗೆದು ಪೊಲೀಸರಿಗೆ ದೂರು ನೀಡಿದ್ದಾರೆ. ಜನವರಿ 8 ರಂದು ಸೌಮ್ಯಾಳನ್ನು ಬಂಧಿಸಲಾಯಿತು. ವಿಚಾರಣೆಯ ನಿಜ ಒಪ್ಪಿಕೊಂಡಿದ್ದಾಳೆ. ಕದ್ದ 4.5 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 20,000 ರೂ. ಮೌಲ್ಯದ ಗಡಿಯಾರವನ್ನು ವಶಪಡಿಸಿಕೊಳ್ಳಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Fri, 16 January 26
