ಬೆಂಗಳೂರು ಸೇರಿ ಈ ಜಿಲ್ಲೆಗಳ ಪ್ರಯಾಣಿಕರಿಗೆ ಸಿಹಿ ಸುದ್ದಿ; KSRTCಯ ಮೊದಲ ಇಲೆಕ್ಟ್ರಿಕ್ ಬಸ್​​ಗೆ ಚಾಲನೆ

| Updated By: Rakesh Nayak Manchi

Updated on: Dec 31, 2022 | 5:19 PM

ಸಾರಿಗೆ ಸಚಿವ ಶ್ರೀರಾಮುಲು ಅವರು KSRTCಯ ಮೊದಲ ಇಲೆಕ್ಟ್ರಿಕ್ ಬಸ್​ ಸೇವೆಗೆ ಚಾಲನೆ ನೀಡಿದರು. ಬೆಂಗಳೂರು ಸೇರಿದಂತೆ ಕೆಲವೊಂದು ಜಿಲ್ಲೆಗಳ ಪ್ರಯಾಣಿಕರಿಗೆ ಇದು ಅನುಕೂಲಕರವಾಗಲಿದೆ.

ಬೆಂಗಳೂರು ಸೇರಿ ಈ ಜಿಲ್ಲೆಗಳ ಪ್ರಯಾಣಿಕರಿಗೆ ಸಿಹಿ ಸುದ್ದಿ; KSRTCಯ ಮೊದಲ ಇಲೆಕ್ಟ್ರಿಕ್ ಬಸ್​​ಗೆ ಚಾಲನೆ
KSRTCಯ ಮೊದಲ ಇಲೆಕ್ಟ್ರಿಕ್ ಬಸ್​​ಗೆ ಚಾಲನೆ
Follow us on

ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ಕೆಎಸ್​​ಆರ್​ಟಿಸಿ (KSRTC)ಯ ಮೊದಲ ಎಲೆಕ್ಟ್ರಿಕ್ ಬಸ್ (Electric Bus)​​ಗೆ ಚಾಲನೆ ನೀಡಲಾಯಿತು. MEIL ಹಾಗೂ KSRTC ಜಂಟಿಯಾಗಿ ಇಂದಿನಿಂದ ರಸ್ತೆಗಿಳಿದಿರುವ ಪರಿಸರ ಸ್ನೇಹಿ ಬಸ್​​ಗೆ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು (B.Sriramulu) ಅವರು ಚಾಲನೆ ನೀಡಿದರು. ಇದು ಬೆಂಗಳೂರು ಮತ್ತು ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿ ನಡುವೆ ಪ್ರಯಾಣಿಸುವ ಕರ್ನಾಟಕದ ಜನರಿಗೆ ಒಂದು ಸಿಹಿ ಸುದ್ದಿಯಾಗಿದೆ. ಈ ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು ಹೆಸರಿಡಲಾಗಿದ್ದು, KSRTC EV ಪವರ್ ಪ್ಲಸ್ (KSRTC EV Power Pluse) ಹಲವು ವಿಶೇಷತೆಗಳನ್ನು ಹೊಂದಿದೆ. ಅವುಗಳು ಈ ಕೆಳಗಿನಂತಿವೆ.

ಎರಡೂವರೆ ತಾಸು ಚಾರ್ಜ್ ಮಾಡಿದರೆ 300 km ಕ್ರಮಿಸುವಷ್ಟು ಸಾಮರ್ಥ್ಯ ಈ ಬಸ್ ಹೊಂದಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಾಗಿದ್ದು, ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರಿ ಚಾರ್ಜ್ ಆಗುವ ರಿ ಜನರೇಷನ್ ಆಗುವ ಸಿಸ್ಟಮ್ ಈ ಬಸ್​​ನಲ್ಲಿ ಇರುವ ವಿಶೇಷಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: ಸಿನಿಮಾಗಳಲ್ಲಿ ಅನವಶ್ಯಕವಾಗಿ ಕೇಸರಿ ಬಟ್ಟೆ ಬಳಕೆ ಯಾಕೆ? ಇದು ನೆಹರೂ ಲೆಗಸಿ ಸೃಷ್ಟಿ ಮಾಡಿದ ನರೇಟಿವ್ ಎಂದ ಬಿ ಎಲ್​ ಸಂತೋಷ್

ಪ್ರಯಾಣದ ವೇಳೆ ಮೊಬೈಲ್ ಚಾರ್ಜ್ ಖಾಲಿಯಾದರೆ ತಲೆಬಿಸಿ ಮಾಡುವ ಪ್ರಮೇಯವೇ ಇಲ್ಲ. ಏಕೆಂದರೆ, ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್ ಇದೆ. ಅಷ್ಟೇ ಅಲ್ಲದೆ ಮನರಂಜನೆಗಾಗಿ ಎರಡು ಟಿವಿ ಅಳವಡಿಕೆ ಮಾಡಲಾಗಿದೆ. ಇದಲ್ಲದೆ, ಈ ಪರಿಸರ ಸ್ನೇಹಿ ಬಸ್ ಸಂಪೂರ್ಣವಾಗಿ ಸೆನ್ಸಾರ್ ಹಿಡಿತದಲ್ಲಿ ಇರಲಿದೆ. ಒಟ್ಟಾರೆ ಬಸ್​​ನಲ್ಲಿ 43 + 2 ಸೀಟ್​​ಗಳು ಇರಲಿದೆ. ಫ್ರಂಟ್ ಲಾಗ್ ಮತ್ತು ಬ್ಯಾಕ್ ಲಾಗ್ ಕ್ಯಾಮೆರಾ ವ್ಯವಸ್ಥೆ ಇರಲಿದೆ. ಡ್ರೈವರ್ ಎಂಡ್ ಸಂಪೂರ್ಣವಾಗಿ ಡಿಜಿಟಲೈಸ್ಡ್ ಸಿಸ್ಟಮ್ ಹೊಂದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ