Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಿಯಲ್ಲಿ ಹಿಂಬದಿ ಚಕ್ರ ಸಡಿಲಗೊಂಡಿರುವುದನ್ನ ನೋಡಿದ KSRTC ಬಸ್ ಚಾಲಕ, ಮುಂದೇನು ಮಾಡಿದರು ನೋಡಿ!

ಬಸ್ ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಕಿತ್ತೋಗಿರೋ ಚಕ್ರದೊಂದಿಗೆ ಚಲಿಸುತ್ತಿದ್ದ ಬಸ್ ಅನ್ನು ನಿಲ್ಲಿಸಿ ಅಪಾಯ ತಪ್ಪಿಸಿದ್ದಾರೆ ಚಾಲಕ ಅರುಣ್ ಮತ್ತು ನಿರ್ವಾಹಕ ಶರಣಪ್ಪ.

ಕನ್ನಡಿಯಲ್ಲಿ ಹಿಂಬದಿ ಚಕ್ರ ಸಡಿಲಗೊಂಡಿರುವುದನ್ನ ನೋಡಿದ KSRTC ಬಸ್ ಚಾಲಕ, ಮುಂದೇನು ಮಾಡಿದರು ನೋಡಿ!
ಚಳ್ಳಕೆರೆ: ಸಡಿಲಗೊಂಡ ಕೆಎಸ್​ಆರ್​ಟಿಸಿ ಬಸ್ಸಿನ ಹಿಂಬದಿ ಚಕ್ರ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Dec 26, 2022 | 4:46 PM

ಚಿತ್ರದುರ್ಗ: ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದೆ. ಚಿತ್ರದುರ್ಗ (Chitradurga) ಜಿಲ್ಲೆ ಚಳ್ಳಕೆರೆ ತಾಲೂಕಿನ ಅಲ್ಲಾಪುರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಕೆಎಸ್​ಆರ್​ಟಿಸಿ (KSRTC) ಬಸ್ (Bus)ನ ಹಿಂಬದಿಯ ಎಡ ವ್ಹೀಲ್ ಸಂಪೂರ್ಣ ಸಡಿಲಗೊಂಡು ಇನ್ನೇನು ಬಸ್ಸಿಂದ ಸಡಿಲಗೊಳ್ಳಬೇಕು (dismantle) ಸರಿಯಾಗಿ ಅದೇ ವೇಳೆ ಅಚಾನಕ್ಕಾಗಿ ಬಸ್ಸಿನ ಚಾಲಕ ಅರುಣ್ ಅವರು ತಮ್ಮ ಎಡ ಬದಿಗೆ ಇರುವ ಕನ್ನಡಿಯತ್ತ (ರೇರ್ ಮಿರರ್ –Rear Mirror) ಕಣ್ಣು ಹೊರಳಿಸಿದ್ದಾರೆ. ಸರಿಯಾಗಿ ಆಗ ಗೊತ್ತಾಗಿದೆ… ಅಯ್ಯೋ ಇನ್ನೇನು ಹಿಂಬದಿ ಚಕ್ರ ಕಳಚಿಬೀಳಲಿದೆ ಎಂಬುದು ಅವರ ಅರಿವಿಗೆ ಬಂದಿದೆ.

ಮತ್ತೆ ಹಿಂದೆಮುಂದೆ ನೋಡದೆ ಚಾಲಕ ಅರುಣ್ ಅವರು ಬಸ್ ಅನ್ನು ನಿಧಾನಕ್ಕೆ ತಹಬಂದಿಗೆ ತಂದವರೆ ಬಸ್ಸನ್ನು ರಸ್ತೆ ಬದಿ ನಿಲ್ಲಿಸಿ, ದೀರ್ಘ ನಿಟ್ಟುಸಿರುಬಿಟ್ಟಿದ್ದಾರೆ. ಸಹೋದ್ಯೋಗಿ ನಿರ್ವಾಹಕ ಶರಣಪ್ಪ ಜೊತೆ ಮಾತನಾಡುತ್ತಾ, ಸಧ್ಯ ಬಚಾವ್ ಆದವಪ್ಪೋ! ಎಂದಿದ್ದಾರೆ.

ಕಿತ್ತೋಗಿರೋ ಚಕ್ರದೊಂದಿಗೆ ಚಲಿಸುತ್ತಿದ್ದ ಬಸ್…

ಕಿತ್ತೋಗಿರೋ ಚಕ್ರದೊಂದಿಗೆ ಚಲಿಸುತ್ತಿದ್ದ ಬಸ್ ಅನ್ನು ನಿಲ್ಲಿಸಿ ಅಪಾಯ ತಪ್ಪಿಸಿದ್ದಾರೆ. ಚಾಲಕ ಅರುಣ್ ಮತ್ತು ನಿರ್ವಾಹಕ ಶರಣಪ್ಪಗೆ ಕೃತಜ್ಞತೆ ಹೇಳಿದ್ದಾರೆ ಪ್ರಯಾಣಿಕರು. ಅಂದಹಾಗೆ ಬಸ್ ನಲ್ಲಿ 20ಕ್ಕೂ ಹೆಚ್ಚು ಪ್ರಯಾಣಿಕರು ಇದ್ದರು. ಎಲ್ಲರೂ ಈಗ ಸುರಕ್ಷಿತ, ಸುರಕ್ಷಿತ! ಸದ್ಯಕ್ಕೆ, ಸಾರಿಗೆ ಬಸ್ ನ ವ್ಹೀಲ್‌ ಸಡಿಲಗೊಂಡು ನಿಂತಿರುವ ಬಸ್ ನ ವಿಡಿಯೋ ವೈರಲ್ ಆಗಿದೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 4:38 pm, Mon, 26 December 22

ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಯತ್ನಾಳ್ ಯಾವತ್ತೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ: ಕುಮಾರ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ