AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮದು ಭಾರತ ಮಾತಾಕೀ ಜೈ, ಅವರದು ಸೋನಿಯಾ ಮಾತಾಕೀ ಜೈ: ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ವ್ಯಂಗ್ಯ

ಬಿಜೆಪಿ ದೇಶ ಭಕ್ತರ ಪಕ್ಷ. ಇಡೀ ಜಗತ್ತಿನಲ್ಲೇ ಭಾರತೀಯ ಜನತಾ ಪಾರ್ಟಿ ದೊಡ್ಡ ಪಕ್ಷವಾಗಿದ್ದು, ಚೀನಾದ ಕಮ್ಯುನಿಸ್ಟ್ ಪಾರ್ಟಿಗಿಂತ ಹೆಚ್ಚು ಸದಸ್ಯರನ್ನು ಹೊಂದಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ನಮ್ಮದು ಭಾರತ ಮಾತಾಕೀ ಜೈ, ಅವರದು ಸೋನಿಯಾ ಮಾತಾಕೀ ಜೈ: ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ವ್ಯಂಗ್ಯ
ಸಿಎಂ ಬೊಮ್ಮಾಯಿ
TV9 Web
| Edited By: |

Updated on: Dec 31, 2022 | 4:28 PM

Share

ಬೆಂಗಳೂರು: ಕಾಂಗ್ರೆಸ್ (Congress) ಸದಸ್ಯರು ಕೇವಲ ಅಧಿಕಾರಕ್ಕಾಗಿ ಇರುವ ಪಕ್ಷದ ಸದಸ್ಯರು. ನಮ್ಮದು ಭಾರತ ಮಾತಾಕೀ ಜೈ, ಆದರೆ ಅವರದ್ದು ಸೋನಿಯಾ ಮಾತಾಕೀ ಜೈ ಎನ್ನುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಡಿದ್ದಾರೆ. ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ (BJP) ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿ, ಮನಮೋಹನ್ ಸಿಂಗ್ ಇದ್ದಾಗ ದೇಶ ಹಿಂದೆ ಹೋಗುತ್ತಿತ್ತು. 5 ವರ್ಷದ ಕಾಂಗ್ರೆಸ್, ಒಂದೂವರೆ ವರ್ಷದ ಸಮ್ಮಿಶ್ರ ಸರ್ಕಾರದ ದೌರ್ಭಾಗ್ಯವನ್ನು ಅನುಭವಿಸಿದ್ದೀರಿ. ಹತಾಶರಾಗಿ ಈಗ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಲೋಕಾಯುಕ್ತ ಮುಚ್ಚಿದವರು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಾರೆ. ಇವರ ಅವಧಿಯಲ್ಲಿ ಎಸಿಬಿಯಲ್ಲಿ ಬಿ ರಿಪೋರ್ಟ್ ಆಗಿದ್ದ ಎಲ್ಲಾ ಪ್ರಕರಣಗಳು ಲೋಕಾಯುಕ್ತಕ್ಕೆ ಶಿಫಾರಸು ಆಗಿವೆ. ಇವರ ಎಲ್ಲಾ ಹಗರಣಗಳು ಹೊರ ಬರುತ್ತವೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ಮಾಡಿದರು.

ಬಿಜೆಪಿ ದೇಶ ಭಕ್ತರ ಪಕ್ಷ

ಇಡೀ ಜಗತ್ತಿನಲ್ಲೇ ಭಾರತೀಯ ಜನತಾ ಪಾರ್ಟಿ ದೊಡ್ಡ ಪಕ್ಷ. ಚೀನಾದ ಕಮ್ಯುನಿಸ್ಟ್ ಪಾರ್ಟಿಗಿಂತ ಹೆಚ್ಚು ಸದಸ್ಯರನ್ನು ಹೊಂದಿದೆ. ಸಂಖ್ಯೆಯಲ್ಲಿ ಮಾತ್ರವಲ್ಲ ವಿಚಾರಗಳಲ್ಲೂ ವಿಶಾಲತೆ ಹೊಂದಿದ್ದೇವೆ. ಒಂದು ಪಕ್ಷ ಯಶಸ್ವಿಯಾಗಲು ಮೂರು ವಿಚಾರಗಳು ಬಹಳ ಅಗತ್ಯ. ನೀತಿ, ಸಿದ್ಧಾಂತ ಮತ್ತು ಒಳ್ಳೆಯ ನಾಯಕತ್ವ ಬಹಳ ಅಗತ್ಯವಾದದ್ದು. ಜೊತೆಗೆ ಕ್ರಿಯಾಶೀಲ ಸದಸ್ಯರು ಕೂಡ ಪಕ್ಷದ ಯಶಸ್ಸಿಗೆ ಕಾರಣ. ಬಿಜೆಪಿಯನ್ನು ಯಾಕೆ ಸೇರಿದ್ದೇವೆ ಎಂದು ಅರ್ಥ ಮಾಡಿಕೊಂಡಾಗ ಮಾತ್ರ ನಾವು ಕೆಲಸ ಮಾಡಲು ಸಾಧ್ಯ. ಬಿಜೆಪಿ ದೇಶ ಭಕ್ತರ ಪಕ್ಷ. ಇದನ್ನು ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ಹೇಳಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಸಿನಿಮಾಗಳಲ್ಲಿ ಅನವಶ್ಯಕವಾಗಿ ಕೇಸರಿ ಬಟ್ಟೆ ಬಳಕೆ ಯಾಕೆ? ಇದು ನೆಹರೂ ಲೆಗಸಿ ಸೃಷ್ಟಿ ಮಾಡಿದ ನರೇಟಿವ್ ಎಂದ ಬಿ ಎಲ್​ ಸಂತೋಷ್

ಪ್ಯಾಂಟ್, ಶರ್ಟ್ ಹೊಲಿಸಿಕೊಂಡವರಿಗೆ ಈಗ ಭಯ ಶುರುವಾಗಿದೆ: ನಳಿನ್ ಕುಮಾರ್

ಬೂತ್ ವಿಜಯ ಸಂಕಲ್ಪ ಸಮಾವೇಶದಲ್ಲಿ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್ ಕುಮಾರ್ ಮಾತನಾಡಿ, ಕಾಂಗ್ರೆಸ್​​ನಲ್ಲಿ ಸಿಎಂ ಅಭ್ಯರ್ಥಿ ಅಂತಾ ಪ್ಯಾಂಟ್, ಶರ್ಟ್ ಹೊಲಿಸಿದ್ದಾರೆ. ಈಗ ಭಯ ಶುರುವಾಗಿದೆ. ಒಂದು ಮತಗಟ್ಟೆಯ 25 ಮನೆಯಲ್ಲಿ ಬಿಜೆಪಿಯ ಧ್ವಜ ಹಾರಿಸಬೇಕು. ಜನವರಿ 21ರಿಂದ 29ರವರೆಗೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಜನರಿಗೆ ತಲುಪಿಸಲು ಅಭಿಯಾನ ನಡೆಯಲಿದೆ. ಮನೆಗಳಿಗೆ ಸ್ಟಿಕ್ಕರ್ ಅಂಟಿಸಬೇಕು, ಪ್ರತಿ ವಾರ್ಡ್​ನಲ್ಲಿ 5ಗೋಡೆ ಬರಹ ಇರಬೇಕು ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಲ್ಲಿ ಕ್ಷೀರ ಕ್ರಾಂತಿ ಆಗುತ್ತಿದೆ; ಮಂಡ್ಯ ಗೆಜ್ಜಲಗೆರೆಯಲ್ಲಿ ಬಸವರಾಜ ಬೊಮ್ಮಾಯಿ

ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ನಿರ್ಮೂಲನೆ: ಪ್ರಹ್ಲಾದ್ ಜೋಶಿ 

ಸಮಾವೇಶದಲ್ಲಿ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದು, ಅನೇಕ ಬಾರಿ ನಮ್ಮ ಬೂತ್​​ನಲ್ಲೇ ನಮಗೆ ಕಡಿಮೆ ಮತ ಬಂದಿರುತ್ತದೆ. ನಾವು ಅಧಿಕಾರಕ್ಕೆ ಬರುವ ಮುನ್ನ ಹಗರಣಗಳದ್ದೇ ಸುದ್ದಿಯಾಗುತ್ತಿತ್ತು. ಕುಟುಂಬ ರಾಜಕಾರಣದಿಂದಲೇ ಭ್ರಷ್ಟಾಚಾರ ನಡೆಯುತ್ತಿತ್ತು. ಕರ್ನಾಟಕದಲ್ಲಿ ಕುಟುಂಬ ರಾಜಕಾರಣ ನಿರ್ಮೂಲನೆಗೊಳಿಸುವ ಕೆಲಸ ಕರ್ನಾಟಕದಲ್ಲಿ ಕೂಡಾ ಜಾರಿಗೆ ಬರಲಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Web contact
Web contact

TV9 Kannada

Read More
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
Live: ಸಿಎಂ ಆಗಿ ಡಿಕೆ ಶಿವಕುಮಾರ್ ಪದಗ್ರಹಣ; ಲೈವ್​​ ನೋಡಿ
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​
ಡಿಸಿಎಂ ಆಗಿ ಆಯ್ಕೆ ಬೆನ್ನಲ್ಲೇ ಪರಮೇಶ್ವರ್​​ ಫಸ್ಟ್​​ ರಿಯಾಕ್ಷನ್​​