ಬೆಂಗಳೂರು ಸೇರಿ ಈ ಜಿಲ್ಲೆಗಳ ಪ್ರಯಾಣಿಕರಿಗೆ ಸಿಹಿ ಸುದ್ದಿ; KSRTCಯ ಮೊದಲ ಇಲೆಕ್ಟ್ರಿಕ್ ಬಸ್‌ಗೆ ಚಾಲನೆ
ಸಾರಿಗೆ ಸಚಿವ ಶ್ರೀರಾಮುಲು ಅವರು KSRTCಯ ಮೊದಲ ಇಲೆಕ್ಟ್ರಿಕ್ ಬಸ್ ಸೇವೆಗೆ ಚಾಲನೆ ನೀಡಿದರು. ಬೆಂಗಳೂರು ಸೇರಿದಂತೆ ಕೆಲವೊಂದು ಜಿಲ್ಲೆಗಳ ಪ್ರಯಾಣಿಕರಿಗೆ ಇದು ಅನುಕೂಲಕರವಾಗಲಿದೆ.
ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ಕೆಎಸ್ಆರ್ಟಿಸಿ (KSRTC)ಯ ಮೊದಲ ಎಲೆಕ್ಟ್ರಿಕ್ ಬಸ್ (Electric Bus)ಗೆ ಚಾಲನೆ ನೀಡಲಾಯಿತು. MEIL ಹಾಗೂ KSRTC ಜಂಟಿಯಾಗಿ ಇಂದಿನಿಂದ ರಸ್ತೆಗಿಳಿದಿರುವ ಪರಿಸರ ಸ್ನೇಹಿ ಬಸ್‌ಗೆ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು (B.Sriramulu) ಅವರು ಚಾಲನೆ ನೀಡಿದರು. ಇದು ಬೆಂಗಳೂರು ಮತ್ತು ಮೈಸೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ವಿರಾಜಪೇಟೆ ಮತ್ತು ಮಡಿಕೇರಿ ನಡುವೆ ಪ್ರಯಾಣಿಸುವ ಕರ್ನಾಟಕದ ಜನರಿಗೆ ಒಂದು ಸಿಹಿ ಸುದ್ದಿಯಾಗಿದೆ. ಈ ಹೊಸ ಬಸ್‌ಗೆ EV ಪವರ್ ಪ್ಲಸ್ ಎಂದು ಹೆಸರಿಡಲಾಗಿದ್ದು, KSRTC EV ಪವರ್ ಪ್ಲಸ್ (KSRTC EV Power Pluse) ಹಲವು ವಿಶೇಷತೆಗಳನ್ನು ಹೊಂದಿದೆ. ಅವುಗಳು ಈ ಕೆಳಗಿನಂತಿವೆ.
ಎರಡೂವರೆ ತಾಸು ಚಾರ್ಜ್ ಮಾಡಿದರೆ 300 km ಕ್ರಮಿಸುವಷ್ಟು ಸಾಮರ್ಥ್ಯ ಈ ಬಸ್ ಹೊಂದಿದೆ. ಬಸ್ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಾಗಿದ್ದು, ನೂತನ ತಂತ್ರಜ್ಞಾನವಾದ ರಿ ಜನರೇಷನ್ ಸಿಸ್ಟಮ್ ಅಳವಡಿಕೆ ಮಾಡಲಾಗಿದೆ. ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರಿ ಚಾರ್ಜ್ ಆಗುವ ರಿ ಜನರೇಷನ್ ಆಗುವ ಸಿಸ್ಟಮ್ ಈ ಬಸ್ನಲ್ಲಿ ಇರುವ ವಿಶೇಷಗಳಲ್ಲಿ ಒಂದಾಗಿದೆ.
ಇದನ್ನೂ ಓದಿ: ಸಿನಿಮಾಗಳಲ್ಲಿ ಅನವಶ್ಯಕವಾಗಿ ಕೇಸರಿ ಬಟ್ಟೆ ಬಳಕೆ ಯಾಕೆ? ಇದು ನೆಹರೂ ಲೆಗಸಿ ಸೃಷ್ಟಿ ಮಾಡಿದ ನರೇಟಿವ್ ಎಂದ ಬಿ ಎಲ್ ಸಂತೋಷ್
ಪ್ರಯಾಣದ ವೇಳೆ ಮೊಬೈಲ್ ಚಾರ್ಜ್ ಖಾಲಿಯಾದರೆ ತಲೆಬಿಸಿ ಮಾಡುವ ಪ್ರಮೇಯವೇ ಇಲ್ಲ. ಏಕೆಂದರೆ, ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್ಸ್ ಇದೆ. ಅಷ್ಟೇ ಅಲ್ಲದೆ ಮನರಂಜನೆಗಾಗಿ ಎರಡು ಟಿವಿ ಅಳವಡಿಕೆ ಮಾಡಲಾಗಿದೆ. ಇದಲ್ಲದೆ, ಈ ಪರಿಸರ ಸ್ನೇಹಿ ಬಸ್ ಸಂಪೂರ್ಣವಾಗಿ ಸೆನ್ಸಾರ್ ಹಿಡಿತದಲ್ಲಿ ಇರಲಿದೆ. ಒಟ್ಟಾರೆ ಬಸ್ನಲ್ಲಿ 43 + 2 ಸೀಟ್ಗಳು ಇರಲಿದೆ. ಫ್ರಂಟ್ ಲಾಗ್ ಮತ್ತು ಬ್ಯಾಕ್ ಲಾಗ್ ಕ್ಯಾಮೆರಾ ವ್ಯವಸ್ಥೆ ಇರಲಿದೆ. ಡ್ರೈವರ್ ಎಂಡ್ ಸಂಪೂರ್ಣವಾಗಿ ಡಿಜಿಟಲೈಸ್ಡ್ ಸಿಸ್ಟಮ್ ಹೊಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ