ಬೆಂಗಳೂರು: ಕಳೆದ ಕೆಲ ದಿನಗಳಿಂದ ಸಿಲಿಕಾನ್ ಸಿಟಿಯಲ್ಲಿ ಚಿರತೆಗಳು (Leopard) ಕಾಣಿಸಿಕೊಳ್ಳತ್ತಿವೆ. ಆಗಾಗ ಜನರ ಕಣ್ಣಿಗೆ, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಚಿರತೆಗಳ ಓಡಾಟ ಈಗ ಬೆಂಗಳೂರಿಗರಲ್ಲಿ ಆತಂಕ ಮೂಡಿಸಿದೆ. ಸದ್ಯ ನಗರದ ನಾಗರಬಾವಿ ಸುತ್ತಮುತ್ತ 2 ಮರಿ ಜತೆ ಚಿರತೆ ಒಂದು ಪ್ರತ್ಯಕ್ಷವಾಗಿದ್ದು, ರಸ್ತೆಯಲ್ಲಿ ಬೈಕ್ನಲ್ಲಿ ಹೋಗುವವರನ್ನು ಅಡ್ಡಗಟ್ಟುತ್ತಿದೆ ಎನ್ನಲಾಗುತ್ತಿದೆ. 5 ದಿನಗಳಿಂದ ನಾಗರಬಾವಿ ಸುತ್ತಮುತ್ತ ಚಿರತೆ ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗೆ ರಾತ್ರಿ ವೇಳೆ ಚಿರತೆ ಕಂಡು ಬೈಕ್ ಸವಾರರೊಬ್ಬರು ವಾಪಸ್ ತೆರಳಿರುವಂತಹ ಘಟನೆ ನಡೆದಿತ್ತು. ಸದ್ಯ 2 ಮರಿ ಜತೆ ಚಿರತೆ ಓಡಾಡುತ್ತಿರುವ ದೃಶ ಸಿಸಿಕ್ಯಾಮರಾದಲ್ಲಿ ಸೆರೆಯಾಗಿದ್ದು, ರಾತ್ರಿ ವೇಳೆ ಮನೆಯಿಂದ ಹೊರಬರಲು ಜನರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಜೊತೆಗೆ ಕೆಲ ಕಡೆಗಳಲ್ಲಿ ಬೋನ್ ಇಟ್ಟಿದ್ದು, ಆದರೆ ಇದುವರೆಗೆ ಚಾಲಾಕಿ ಚಿರತೆ ಬೋನ್ ಮಾತ್ರ ಬಿದ್ದಿಲ್ಲ. ಪಂಚಾಯಿತಿಯಿಂದ ಅನೌನ್ಸ್ಮೆಂಟ್ ಮಾಡಿದ್ದು, ಒಂಟಿಯಾಗಿ ಓಡಾಡದಂತೆ ಜಾಗೃತಿ ಮೂಡಿಸಲಾಗಿದೆ. ರಾತ್ರಿ ಹೊತ್ತು ತುಂಬಾ ಭಯದಿಂದ ಓಡಾಡುವಂತಾಗಿದೆ. ಮನೆಯಲ್ಲಿ ಸಾಕಿದ ಪ್ರಾಣಿಗಳನ್ನು ಕೊಲ್ಲುತ್ತಿದೆ ಅಂತ ಊರಿನ ಜನರು ಅಳಲು ತೊಡಿಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜನರ ನಿದ್ದೆಗೆಡಿಸಿದ ಚಿರತೆ ದಾಳಿ; ಶಾಲಾ ಕಾಲೇಜುಗಳಿಗಿಲ್ಲ ರಜೆ, ಇಂದು ಸಹ ಮುಂದುವರೆಯಲಿರುವ ಚೀತಾ ಕೂಂಬಿಂಗ್
ಇತ್ತೀಚೆಗೆ ಬೆಂಗಳೂರಿನ ನೈಸ್ ರಸ್ತೆಯ ತುರಹಳ್ಳಿ ಅರಣ್ಯ ಪ್ರದೇಶದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿತ್ತು. ಮೊದಲ ಬಾರಿಗೆ ಚಿರತೆ ಕಾಣಿಸಿಕೊಂಡಾಗ ಜಿಂಕೆ ಬೇಟೆಯಾಡಿದ್ದು, ಹಸುವನ್ನ ಬೇಟೆಯಾಡಿರುವಂತಹ ಘಟನೆ ಬಿ.ಎಂ.ಕಾವಲು ಅರಣ್ಯ ಪ್ರದೇಶದ ಬಳಿಯಿರುವ ಸಿದ್ದನಪಾಳ್ಯದಲ್ಲಿ ನಡೆದಿತ್ತು. ನಾಗಣ್ಣ ಎನ್ನುವವರಿಗೆ ಸೇರಿದ ಹಸುವನ್ನು ರಾತ್ರಿ ಮನೆ ಬಳಿ ಕಟ್ಟಿಹಾಕಿದ್ದಾಗ ಕೊಂದಿದೆ. ಈ ಹಿಂದೆ ಸಂಜೆ ವೇಳೆ ಹಸುವಿನ ಮೇಲೆ ದಾಳಿಗೆ ಚಿರತೆ ಯತ್ನಿಸಿತ್ತು. ಆದರೆ ಚಿರತೆ ದಾಳಿ ನಡೆಸಿದಾಗ ಮನೆಯವರು ಪಟಾಕಿ ಸಿಡಿಸಿ ಓಡಿಸಿದ್ದರು. ರಾತ್ರಿ ಹಸು ಕೊಂದಿರುವ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.
ಇದನ್ನೂ ಓದಿ: Leopard: ಬೆಂಗಳೂರಿನಲ್ಲಿ ಮತ್ತೆ ಶುರುವಾದ ಚಿರತೆ ಕಾಟ: ಹಸುವಿನ ಮೇಲೆ ದಾಳಿ, ಆತಂಕದಲ್ಲಿ ಜನ
ಸಿಲಿಕಾನ್ ಸಿಟಿ ಜನರಿಗೆ ಚಿರತೆ ಕಾಟ ಶುರುವಾಗಿದ್ದು ಇತ್ತೀಚೆಗೆ ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಚಿರತೆ ಪ್ರತ್ಯಕ್ಷವಾಗಿರುವಂತಹ ಘಟನೆ ಈ ಮುಂಚೆ ನಡೆದಿತ್ತು. ಕೆಂಗೇರಿ ಸುತ್ತಮುತ್ತಲಿನ ಜನರು ಚಿರತೆ ದಾಳಿ ಭೀತಿಯಲ್ಲಿದ್ದಾರೆ. ತುರಹಳ್ಳಿ ಅರಣ್ಯ ಪ್ರದೇಶದಿಂದ ಚಿರತೆಗಳು ಬಂದಿದ್ದವು. ಮುಖ್ಯರಸ್ತೆಗೆ ನುಗ್ಗಿ ಜಿಂಕೆ ಕೊಂದು ಚಿರತೆ ತಿಂದುಹೋಗಿರುವುದರಿಂದ ಆ ಭಾಗದಲ್ಲಿ ಜನರಲ್ಲಿ ಆತಂಕ ಉಂಟಾಗಿತ್ತು. 4 ಚಿರತೆಗಳು ಬಂದಿವೆ ಎಂದು ಸ್ಥಳೀಯರು ಹೇಳಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:49 pm, Fri, 6 January 23