ವಿಧಾನಸೌಧದಲ್ಲಿ 10.5 ಲಕ್ಷ ನಗದು ಪತ್ತೆ ಪ್ರಕರಣ: ಬಂಧಿತ ಎಇ ಜಗದೀಶ್‌ಗೆ ಜಾಮೀನು
ವಿಧಾನಸೌಧದ ಆವರಣದಲ್ಲಿ 10.5 ಲಕ್ಷ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಸಹಾಯಕ ಇಂಜಿನಿಯರ್ಗೆ ಜಾಮೀನು ದೊರೆತಿದೆ.
ಬೆಂಗಳೂರು: ವಿಧಾನಸೌಧ (Vidhana Soudha) ಆವರಣದಲ್ಲಿ 10.5 ಲಕ್ಷ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಜಗದೀಶ್‌ಗೆ (PWD Jr. Engineer Jagadeesh) ಜಾಮೀನು ಸಿಕ್ಕಿದೆ. ಬೆಂಗಳೂರಿನ ಒಂದನೇ ಎಂಎಂಟಿಸಿ ನ್ಯಾಯಾಲಯ ಇಂದು (ಜನವರಿ 06) ಪಿಡಬ್ಲ್ಯುಡಿ ಎಇ ಜಗದೀಶ್ ಅವರಿಗೆ ಜಾಮೀನು ನೀಡಿ ಆದೇಶ ಹೊರಡಿಸಿದೆ.
ಬುಧವಾರ ಸಂಜೆ 7 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ 10.5 ಲಕ್ಷ ರೂ. ನಗದು ಸಾಗಿಸುತ್ತಿದ್ದಾಗ ಸಹಾಯಕ ಇಂಜಿನಿಯರ್ ಜಗದೀಶ್ ಸಿಕ್ಕಿಬಿದ್ದಿದ್ದರು. ವಿಧಾನಸೌಧ ಪಡಸಾಲೆಯಲ್ಲಿ ಅನಧಿಕೃತ ಹಣ ಪತ್ತೆ ಪ್ರಕರಣ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗುತ್ತಿದ್ದಂತೆ ಇಂಜಿನಿಯರ್ ಜಗದೀಶ್ ಎಸ್ಕೇಪ್ ಆಗಿದ್ದರು. ಬಳಿಕ ಪೊಲೀಸರು ಜಗದೀಶ್ ಅವರನ್ನು ಬಂಧಿಸಿದ್ದರು.
ಜಗದೀಶ್ ಬಂಧನವಾಗುತ್ತಿದ್ದಂತೆಯೇ ಅವರ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು. ಈ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ ಒಂದನೇ ಎಂಎಂಟಿಸಿ ನ್ಯಾಯಾಲಯ, ಜಾಮೀನು ನೀಡಿದೆ.
ಜಗದೀಶ್ ಪರ ವಕೀಲ ಹೇಳಿದ್ದೇನು?
ವಿಧಾನಸೌಧ ದಲ್ಲಿ 10 ಲಕ್ಷ ಹಣ ಜಪ್ತಿ ಮಾಡಿದ ಪ್ರಕರಣ ಸಂಬಂಧ ಆರೋಪಿ ಪಿಡಬ್ಲ್ಯೂಡಿ ಎಇ ಜಗದೀಶ್ ಪರ ವೀಕಲ ಸ್ಪಷ್ಟನೆ ನೀಡಿದ್ದು, ಜಗದೀಶ್ ಲಂಚ ಕೊಡಬೇಕೆಂದು ತೆಗೆದುಕೊಂಡು ಹೋಗುತ್ತಿದ್ದ ಹಣ ಅಲ್ಲ, ಜಗದೀಶ್ ಮೇಲೆ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು, ಪ್ರಕರಣದ ಇತ್ಯರ್ಥಕ್ಕಾಗಿ ಬೆಂಗಳೂರಿಗೆ ಹಣ ತಂದಿದ್ದರು. ಈ ವೇಳೆ ಅರ್ಜೆಂಟ್ ಆಗಿ ಅಧಿಕಾರಿಯೊಬ್ಬರನ್ನು ಭೇಟಿ ಮಾಡಬೇಕಿತ್ತು. ಹೀಗಾಗಿ ವಿಧಾನಸೌಧಕ್ಕೆ ತೆರಳಿದ್ದರು. ಅಷ್ಟೇ ಹೊರತು ಯಾರಿಗೋ ಹಣ ನೀಡಬೇಕೆಂದು ಹೋಗಿಲ್ಲ ಎಂದರು. ಹಣದ ಬಗ್ಗೆ ಪೊಲೀಸರಿಗೆ ಎಲ್ಲಾ ಮಾಹಿತಿ ನೀಡಲಾಗಿದೆ. ಆದರೂ ಯಾಕೆ ಜಗದೀಶ್ರನ್ನು ಬಂಧಿಸಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
10.5 ಲಕ್ಷ ರೂ. ನಗದು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿ ಜಗದೀಶ್
ಜನವರಿ 04ರಂದು ಸಂಜೆ 7 ಗಂಟೆಗೆ ವಿಧಾನಸೌಧದ ಪಶ್ಚಿಮ ದ್ವಾರದ ಮೂಲಕ 10.5 ಲಕ್ಷ ರೂ. ನಗದು ಸಾಗಿಸುತ್ತಿದ್ದಾಗ ಸಹಾಯಕ ಇಂಜಿನಿಯರ್ ಜಗದೀಶ್ ಸಿಕ್ಕಿಬಿದ್ದಿದ್ದರು. ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದ್ದರು. ಬಳಿಕ ಜಗದೀಶ್ ಅವರನ್ನು ವಶಕ್ಕೆ ಪಡೆದುಕೊಂಡಿದ್ದ ಪೊಲೀಸರು, ಈ ಹಣ ಎಲ್ಲಿಂದ ಬಂತು? ಎಲ್ಲಿ ತೆಗೆದುಕೊಂಡು ಹೋಗುತ್ತಿದ್ದೀರಾ ಎನ್ನುವ ಪ್ರಶ್ನೆಗಳನ್ನು ಕೇಳಿ ವಿಚಾರಣೆಗೊಳಪಡಿಸಿದ್ದರು. ಆದ್ರೆ, ಯಾವುದೇ ಪ್ರಶ್ನೆಗೆ ಸರಿಯಾಗಿ ಉತ್ತರಿಸಿಲ್ಲ. ಅಲ್ಲದೇ ಹಣದ ಮೂಲದ ಬಗ್ಗೆ ಸರಿಯಾದ ಮಾಹಿತಿ ನೀಡಿರಲಿಲ್ಲ. ಇದರಿಂದ ವಿಧಾನಸೌಧ ಠಾಣೆ ಪೊಲೀಸರು ಸಹಾಯಕ ಇಂಜಿನಿಯರ್ ಜಗದೀಶ್ ಅವರನ್ನು ಬಂಧಿಸಿದ್ದರು.
ಮಂಡ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಗದೀಶ್ ಕಳೆದ ಐದಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.
Published On - 7:27 pm, Fri, 6 January 23