ಚಿತ್ರದುರ್ಗ ಮುರುಘಾಶ್ರೀಗೆ ಮತ್ತೊಂದು ಸಂಕಷ್ಟ: ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್ನಿಂದ ಬಾಡಿ ವಾರಂಟ್
ಬೆಂಗಳೂರಿನ ತಿಪ್ಪಶೆಟ್ಟಿ ಮಠದ ಆಸ್ತಿ ದುರ್ಬಳಕೆ ಆರೋಪದಡಿ ವಿಚಾರಣೆಗೆ ಹಾಜರಾಗದ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿಗೆ ನ್ಯಾಯಾಲಯ ಬಾಡಿ ವಾರಂಟ್ ಜಾರಿ ಮಾಡಿದೆ.
ಬೆಂಗಳೂರು: ಪೋಕ್ಸೋ (PCSO) ಪ್ರಕರಣದಲ್ಲಿ ಬಂಧನವಾಗಿರುವ ಚಿತ್ರದುರ್ಗ (Chiradurga) ಮುರುಘಾ ಮಠದ (Murugha Sri) ಶಿವಮೂರ್ತಿ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬೆಂಗಳೂರಿನ ತಿಪ್ಪಶೆಟ್ಟಿ ಮಠದ ಆಸ್ತಿ ದುರ್ಬಳಕೆ ಪ್ರಕರಣದ ವಿಚಾರಣೆಗೆ ಮುರುಘಾಶ್ರೀ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಈ ಹಿನ್ನೆಲೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್ ಫೆಬ್ರವರಿ 9 ರಂದು ನ್ಯಾಯಾಲಯದ ಎದುರು ಹಾಜರು ಪಡಿಸುವಂತೆ ಚಿತ್ರದುರ್ಗ ಎಸ್ಪಿ ಕೆ.ಪರಶುರಾಮ್‌ಗೆ ಸೂಚಿಸಿ, ಬಾಡಿ ವಾರಂಟ್ ನೀಡಿದೆ.
ಏನಿದು ತಿಪ್ಪಶೆಟ್ಟಿ ಮಠದ ಆಸ್ತಿ ದುರ್ಬಳಕೆ
ತಿಪ್ಪಶೆಟ್ಟಿ ಮಠದ 8 ಕೋಟಿ ಮೌಲ್ಯದ ಆಸ್ತಿಯನ್ನು 49 ಲಕ್ಷ ರೂಪಾಯಿಗಳಿಗೆ ಮಾರಾಮಾಡಲಾಗಿದೆ. ತಿಪ್ಪಶೆಟ್ಟಿ ಮಠಕ್ಕೆ ಸೇರಿದ ಕೆಂಗೇರಿ ಸೂಲಿಕೆರೆಯ ಜಮೀನು, ಮಠದ 7 ಎಕರೆ 18 ಗುಂಟೆ ಜಮೀನು ಅಕ್ರಮ ಮಾರಾಟ, ವಂಚನೆ, ವಿಶ್ವಾಸದ್ರೋಹ ಆರೋಪ ಕೇಳಿ ಬಂದಿತ್ತು. ಈ ಸಂಬಂಧ 2009ರಲ್ಲಿ ಮುರುಘಾಶ್ರೀ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಇದನ್ನೂ ಓದಿ:ಆಸ್ತಿ ಅವ್ಯವಹಾರ ಆರೋಪ: ಮುರುಘಾ ಶ್ರೀ ವಿರುದ್ಧ ಅರೆಸ್ಟ್ ವಾರಂಟ್ ಹೊರಡಿಸಿದ ಬೆಂಗಳೂರು ಕೋರ್ಟ್
ಸಮನ್ಸ್ ನೀಡಿದರೂ ಕೋರ್ಟ್ಗೆ ಹಾಜರಾಗದ ಹಿನ್ನೆಲೆಯಲ್ಲಿ ಮುರುಘಾ ಶರಣರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಲಾಗಿತ್ತು. ಕಲಂ 420, 405, 406, 418ಅಡಿ ಕೇಸ್ ದಾಖಲಾಗಿತ್ತು. 2 ವರ್ಷದ ಹಿಂದೆ ಮುರುಘಾಶ್ರೀಗಳ ವಿರುದ್ಧ ಪಂಚಾಕ್ಷರಯ್ಯ ಎಂಬುವರು ದೂರು ನೀಡಿದ್ದರು. ಕೋರ್ಟ್ಗೆ ಹಾಜರಾಗದೇ ಮುರುಘಾ ಶರಣರು ನಿರ್ಲಕ್ಷ್ಯ ತೋರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:49 pm, Fri, 6 January 23