ಬೆಂಗಳೂರು: ಕಾರಿನೊಳಗೆ ನಾಯಿ ಲಾಕ್, ಶ್ವಾನದ ಪ್ರಾಣಕ್ಕೆ ಕುತ್ತು ತಂದಿಟ್ಟ ಮಾನಸಿಕ ಅಸ್ವಸ್ಥ

ತಾನು ಸಾಕಿದ ಶ್ವಾನವನ್ನು ಕಾರಿನಲ್ಲಿ ಲಾಕ್​​ ಮಾಡಿ, ಅದಕ್ಕೆ ಉಸಿರುಗಟ್ಟುವಂತೆ ಮಾಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಬೆಂಗಳೂರು: ಕಾರಿನೊಳಗೆ ನಾಯಿ ಲಾಕ್, ಶ್ವಾನದ ಪ್ರಾಣಕ್ಕೆ ಕುತ್ತು ತಂದಿಟ್ಟ ಮಾನಸಿಕ ಅಸ್ವಸ್ಥ
ಸಾಂದರ್ಭಿಕ ಚಿತ್ರ
Follow us
|

Updated on:Aug 10, 2023 | 11:43 AM

ಬೆಂಗಳೂರು, ಆ.10:  ತಾನು ಸಾಕಿದ ಶ್ವಾನವನ್ನು ಕಾರಿನಲ್ಲಿ ಲಾಕ್​​ ಮಾಡಿ, ಅದಕ್ಕೆ ಉಸಿರುಗಟ್ಟುವಂತೆ ಮಾಡಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ನಡೆದಿದೆ. ಇದೀಗ ಶ್ವಾನವನ್ನು ವಿಮಾನ ನಿಲ್ದಾಣ ಸಿಬ್ಬಂದಿಗಳು ಕಾಪಾಡಿದ್ದು, ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಟರ್ಮಿನಲ್ 1ರ ಲೇನ್ 3ರಲ್ಲಿ ಸೋಮವಾರ ನಡೆದಿದೆ ಎಂದು ವರದಿಯಾಗಿದೆ. 41 ವರ್ಷದ ವಿಕ್ರಮ್ ರಾಮದಾಸ್ ಲಿಂಗೇಶ್ವರ ಎಂಬ ವ್ಯಕ್ತಿ ಕಪ್ಪು ಬಣ್ಣದ ಫಿಯೆಟ್ ಕಾರನಲ್ಲಿ 3.52 ಕ್ಕೆ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕಾರನ್ನು ವಿಮಾನ ನಿಲ್ದಾಣದ ನಿಷೇಧಿತ ಪ್ರದೇಶದಲ್ಲಿ ನಿಲ್ಲಿಸಿ, ವಿಮಾನ ನಿಲ್ದಾಣದ ಒಳಗೆ ಹೋಗಿದ್ದಾರೆ. ಸುಮಾರು ಸಂಜೆ 5 ಗಂಟೆಗೆ, ಲ್ಯಾಂಡ್‌ಸೈಡ್ ಸೆಕ್ಯುರಿಟಿ ಕಾರನ್ನು ಗಮನಿಸಿ ನಿಷೇಧಿತ ಪ್ರದೇಶದಿಂದ ತೆರವುಗೊಳಿಸುವಂತೆ ಹಲವು ಬಾರಿ ಕೇಳಿಕೊಂಡಿದ್ದಾರೆ. ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ. ಬಳಿಕ ಭದ್ರತಾ ಅಧಿಕಾರಿಗಳು ಅನುಮಾನಗೊಂಡು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ಎಫ್) ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (ಬಿಡಿಡಿಎಸ್) ಗೆ ಮಾಹಿತಿ ನೀಡಿದ್ದಾರೆ.

ಸಂಜೆ 5.15ರ ಸುಮಾರಿಗೆ, ಎರಡೂ ತಂಡಗಳು ಕಾರಿನ ಹಿಂದಿನ ಸೀಟಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಶ್ವಾನವನ್ನು ಪತ್ತೆ ಮಾಡಿದ್ದಾರೆ. ನಂತರ ಸಿಐಎಸ್ಎಫ್ ತಂಡ ಕಾರಿನ ಕಿಟಕಿ ಒಡೆದು ನಾಯಿಯನ್ನು ರಕ್ಷಿಸಿದ್ದಾರೆ. ಶ್ವಾನಕ್ಕೆ ಚಿಕಿತ್ಸೆ ನೀಡಲಾಗಿದ್ದು, ಅದನ್ನು ಪ್ರಾಣಿ ರಕ್ಷಣಾ ಎನ್‌ಜಿಒಗೆ ಹಸ್ತಾಂತರಿಸಲಾಗಿದೆ.

ವಿಕ್ರಮ್ ರಾಮದಾಸ್ ಲಿಂಗೇಶ್ವರ ಅವರು ತಮ್ಮ ಕಾರನ್ನು ನಿಲ್ಲಿಸಿ ಗೇಟ್ 5 ಬಿ ಮೂಲಕ ಟರ್ಮಿನಲ್ ಪ್ರವೇಶಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳು ತೋರಿಸಿವೆ. ಟರ್ಮಿನಲ್ ಒಳಗೆ ಬರಬೇಕಾದರೆ ಆತನ ಕೈಯಲ್ಲಿ ಟಿಕೆಟ್ ಇತ್ತು. ಪೊಲೀಸರು ಆತನನ್ನು ವಿಚಾರಣೆಗೆ ಬರುವಂತೆ ಹೇಳಿದ್ದಾರೆ. ಆದರೆ ಪೊಲೀಸರ ತನಿಖೆಗೆ ಸಹಕರಿಸದ ವಿಕ್ರಮ್ ರಾಮದಾಸ್ ಲಿಂಗೇಶ್ವರ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಲಿಂಗೇಶ್ವರ ಮೇಲೆ ಐಪಿಸಿ ಸೆಕ್ಷನ್ 429 (ಜಾನುವಾರುಗಳನ್ನು ಕೊಲ್ಲುವುದು ಮತ್ತು ಅಂಗವಿಕಲಗೊಳಿಸುವುದು) ಮತ್ತು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಾಗಿತ್ತು. ಈ ಬಗ್ಗೆ ಅವರ ಮನೆಗೂ ಮಾಹಿತಿ ನೀಡಲಾಗಿತ್ತು, ಮನೆಯವರು ಲಿಂಗೇಶ್ವರಗೆ ಆರೋಗ್ಯ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಬಳಿಕ ಆತನನ್ನು ಜಾಮೀನ್​​ ಮೇಲೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಮಿಸ್​ ಆಗಿ ಬೇರೆ ಕ್ಯಾಬ್ ಹತ್ತಿದ ಮಹಿಳೆ, ಸಿಟ್ಟಿಗೆದ್ದು ಹಲ್ಲೆ ಮಾಡಿದ ಚಾಲಕ: ಮುಂದೇನಾಯ್ತು?

ಈ ಬಗ್ಗೆ ವಿಕ್ರಮ್ ರಾಮದಾಸ್ ಲಿಂಗೇಶ್ವರ ಅವರ ತಾಯಿ ಕಲ್ಪನಾ ಅವರು ಹೇಳಿರುವಂತೆ, ನನ್ನ ಮಗ ಮಾನಸಿಕ ಅಸ್ವಸ್ಥನಾಗಿದ್ದು, ನಾವು ಮೂಲತ ಮುಂಬೈನವರು. ಇದು ನಮ್ಮ ಮನೆಯ ನಾಯಿ, ವಿಕ್ರಮ್ ರಾಮದಾಸ್ ಲಿಂಗೇಶ್ವರ ತುಂಬಾ ಪ್ರೀತಿಯಿಂದ ಸಾಕಿದ ನಾಯಿ ಇದು, ಅವನು ಅದನ್ನು ರಾವಣ್ ಎಂದು ಕರೆಯುತ್ತಾನೆ, ಅವನಿಗೆ ರಾವಣ್ ಕೊಲ್ಲುವ ಯಾವ ಉದ್ದೇಶವು ಇಲ್ಲ ಎಂದು ಹೇಳಿದ್ದಾರೆ. ಅವನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೇಗೆ ಬಂದ ಎಂದು ಗೊತ್ತಿಲ್ಲ. ನಾನು ವಿಮಾನ ನಿಲ್ದಾಣ ಸಿಬ್ಬಂದಿಗಳಿಗೆ ಧನ್ಯವಾದ ಹೇಳುವೇ, ನಾಯಿ ಮತ್ತು ನನ್ನ ಮಗನ್ನು ಕಾಪಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ವಿಕ್ರಮ್ ರಾಮದಾಸ್ ಲಿಂಗೇಶ್ವರ ಅವರ ತಂದೆ ಪೊಲೀಸ್​​ ಠಾಣೆಗೆ ಭೇಟಿ ನೀಡಿದಾಗ ತನ್ನ ಅಪ್ಪ ಎನ್ನುವ ಬದಲು ಅಜ್ಜ ಎಂದು ಕರೆದಿದ್ದಾನೆ ಎಂದು ಹೇಳಿದ್ದಾರೆ. ಲಿಂಗೇಶ್ವರ ಒಬ್ಬ ಅಥ್ಲೀಟ್​​ ಆಟಗಾರನಾಗಿದ್ದು, ಅಂತರಾಷ್ಟ್ರೀಯ ಮಟ್ಟ ಹಾಕಿ ಪ್ಲೇಯರ್​ ಕೂಡ ಆಗಿದ್ದ. ಬಿಆರ್​​ಡಿಎಸ್​​ಎ (BRDSA)ನ ಉಪಾಧ್ಯಕ್ಷ ಕೂಡ ಆಗಿದ್ದರು. ಇದರ ಜತೆಗೆ ಕರ್ನಾಟಕ ಅಥ್ಲೀಟ್​​ ತರಬೇತಿದಾರನಾಗಿ ಕೂಡ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಬೆಂಗಳೂರಿನ ಸ್ಪಂದನಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿಕ್ರಮ್ ರಾಮದಾಸ್ ಲಿಂಗೇಶ್ವರ ಅವರ ತಂದೆ ಹೇಳಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:42 am, Thu, 10 August 23