ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್​​ನಲ್ಲಿ ಕಿಡ್ನ್ಯಾಪ್: ಸ್ಪಾ ನಡೆಸುತ್ತಿದ್ದವನನ್ನ ಹೊತ್ತೊಯ್ದು ಹಣಕ್ಕೆ ಡಿಮ್ಯಾಂಡ್

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬೆಟ್ಟದಾಸನಪುರದಲ್ಲಿ ಸ್ಪಾ ನಡೆಸುತ್ತಿದ್ದ ವ್ಯಕ್ತಿಯನ್ನ ಸಿನಿಮೀಯ ಶೈಲಿಯಲ್ಲಿ ಮೂವರು ದುಷ್ಕರ್ಮಿಗಳು ಕಾರಿನಲ್ಲಿ ಬಂದು ಅಪಹರಿಸಿರುವ ಘಟನೆ ನಡೆದಿದೆ. ಹಣಕ್ಕೆ ಬೇಡಿಕೆ ಇಟ್ಟಿದ್ದು, ಕೊಲೆ ಬೆದರಿಕೆ ಕೂಡ ಹಾಕಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್​​ನಲ್ಲಿ ಕಿಡ್ನ್ಯಾಪ್: ಸ್ಪಾ ನಡೆಸುತ್ತಿದ್ದವನನ್ನ ಹೊತ್ತೊಯ್ದು ಹಣಕ್ಕೆ ಡಿಮ್ಯಾಂಡ್
ಕಿಡ್ನ್ಯಾಪ್ ಆದ ವ್ಯಕ್ತಿ, ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ
Image Credit source: tv9 kannada
Edited By:

Updated on: Feb 16, 2026 | 3:17 PM

ಆನೇಕಲ್​, ಫೆಬ್ರವರಿ 16: ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟದಾಸನಪುರ ಸಮೀಪ ಥೇಟ್ ಸಿನಿಮಾ ಸ್ಟೈಲ್​​ನಲ್ಲಿ ಮೂವರು ದುಷ್ಕರ್ಮಿಗಳು ಓರ್ವ ವ್ಯಕ್ತಿಯನ್ನ ಕಿಡ್ನ್ಯಾಪ್​​​ (Kidnapp) ಮಾಡಿರುವಂತಹ ಘ​​ಟನೆ ಮಾಡಿದೆ. ಬಿಹಾರ ಮೂಲದ ಅಶೀತ್ ಜ್ಹಾ(29) ಕಿಡ್ನ್ಯಾಪ್ ಆದ ವ್ಯಕ್ತಿ. ಎರಡು ಲಕ್ಷ ರೂ ಕೊಟ್ಟರೆ ಮಾತ್ರ ಅಶೀತ್​​​ನನ್ನು ಬಿಡುವುದಾಗಿ ಹೇಳಿರುವ ಅಪಹರಣಕಾರರು, ಒಂದು ವೇಳೆ ಹಣ ಕೊಡದಿದ್ದರೆ ಕೊಲೆ ಮಾಡುವುದಾಗ ಬೆದರಿಕೆ ಹಾಕಿದ್ದಾರೆ. ಸದ್ಯ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಬಿಹಾರ ಮೂಲದ ಅಶೀತ್ ಜ್ಹಾ, ತಿರುಪಾಳ್ಯದಲ್ಲಿ ವಾಸವಾಗಿದ್ದು, ಬೇಗೂರಿನ ಅಕ್ಷಯನಗರದಲ್ಲಿ ಸ್ಪಾ ನಡೆಸುತ್ತಿದ್ದರು. ಕಳೆದ ರಾತ್ರಿ ಮ್ಯಾನೇಜರ್ ಮನುಕುಮಾರ್ ಜೊತೆ ಬೈಕ್​​ನಲ್ಲಿ ಸ್ಪಾಯಿಂದ ಮನೆ ಕಡೆಗೆ ಹೊರಟಿದ್ದರು. ಈ ವೇಳೆ ದುಷ್ಕರ್ಮಿಗಳು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದು ಏಕಾಏಕಿ ಬೈಕ್​​ಗೆ ಡಿಕ್ಕಿ ಹೊಡೆದಿದ್ದಾರೆ.

ಬೈಕ್​​ನಿಂದ ಕೆಳಗೆ ಬೀಳುತ್ತಿದ್ದಂತೆ ಲಾಂಗ್​​ನಿಂದ ಕಾಲಿಗೆ ಹಲ್ಲೆ ಮಾಡಿ ಅಶೀತ್​​ನನ್ನ ಕಿಡ್ನ್ಯಾಪ್ ಮಾಡಿದ್ದಾರೆ. ಅಪಹರಣಕಾರರು ಸ್ಪಾ ಮಾಲೀಕ ಪ್ರಕಾಶ್ ಮಂಡಲ್​​ಗೆ ಫೋನ್​ ಮಾಡಿ ಎರಡು ಲಕ್ಷ ರೂ ಹಣ ಕೊಟ್ಟರೆ ಅಶೀತ್ ಬಿಡುವುದಾಗಿ ಹೇಳಿದ್ದಾರೆ. ಇಲ್ಲವೆಂದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.

ಇದನ್ನೂ ಓದಿ: ಮಹಿಳೆ ನಾಪತ್ತೆ ಕೇಸ್​​ಗೆ ಟ್ವಿಸ್ಟ್​​: ಏಕಪತ್ನಿ ವ್ರತಸ್ಥನಂತೆ ಪೋಸ್​​ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ

ಇನ್ನು ಕಿಡ್ನ್ಯಾಪ್​ ವೇಳೆ ದುಷ್ಕರ್ಮಿಗಳಿಂದ ಮನುಕುಮಾರ್ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಮನುಕುಮಾರ್​​​ನನ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿದ್ದಿಷ್ಟು 

ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್​ ಮಾತನಾಡಿದ್ದು, ಬೈಕ್​ನಲ್ಲಿ ಅಶೀತ್ ಜ್ಹಾ, ಮನುಕುಮಾರ್ ಹೋಗುತ್ತಿದ್ದರು. ರಾತ್ರಿ 9.30 ಸುಮಾರಿಗೆ ಕಿಡ್ನ್ಯಾಪ್ ನಡೆದಿದೆ. ಕಾರಿನಲ್ಲಿ ಬಂದ ಮೂವರು ಈ ಕೃತ್ಯ ಎಸಗಿದ್ದಾರೆ. ಚಾಕು ಮತ್ತೆ ಲಾಂಗ್​ನಿಂದ ಬೆದರಿಸಿ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

ಅಶೀತ್ ಜ್ಹಾ ಎಂಬಾತನನ್ನ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ. ಜೊತೆಯಲ್ಲಿದ್ದ ಮನುಕುಮಾರ್ ದೂರು ನೀಡಿದ್ದಾನೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿದೆ. ಎಸಿಪಿ ಸತೀಶ್ ಅವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ನವೀನ್, ಪಿಎಸ್ಐ ದರ್ಶನ್ ಸೇರಿದಂತೆ ಮೂರು ತಂಡ ರಚನೆ ಮಾಡಲಾಗಿದ್ದು, ಆರೋಪಿಗಳನ್ನ ಆದಷ್ಟು ಬೇಗ ಬಂಧಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಮು, ಆನೇಕಲ್​

ರಾಮು, ಟಿವಿ9 ವಾಹಿನಿ ಮುಖ್ಯ ಕಚೇರಿಯ ಬೆಂಗಳೂರಿನಲ್ಲಿ11 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದು,2023 ಜುಲೈ ತಿಂಗಳಿಂದ ಆನೇಕಲ್ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ನಾನು ಕ್ರೈಂ ಪೊಲಿಟಿಕಲ್ ಸಿನಿಮಾ ಮತ್ತು ಮೆಟ್ರೋ ಸ್ಟೋರೀಸ್ ಗಳನ್ನು ಕವರೇಜ್ ಮಾಡುತ್ತೇನೆ .

Read More
Loading...
Unable to load recommendations.
Follow Us