AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

ಮದುವೆಗೆ ಬಂದ ಮಹಿಳೆ ನಾಪತ್ತೆ ಕೇಸ್​​: ಪತಿ ಸ್ನೇಹಿತನ ಮನೆಯಲ್ಲಿ ಮಹಿಳೆ ಸಿಕ್ಕಿಬಿದ್ದಿದ್ದೇಗೆ?

ಜಗದೀಶ ಬಿ.
| Edited By: |

Updated on:Feb 16, 2026 | 2:33 PM

Share

ನಾಪತ್ತೆ ನಾಟಕವಾಡಿ ಪತಿ ಸ್ನೇಹಿತ ಡೇವಿಡ್ ಜೊತೆ ಪರಾರಿಯಾಗಿದ್ದ ಮಹಿಳೆ ಪ್ರಿಯಾಂಕಾ ಪ್ರಕರಣ ಸಂಬಂಧ ಒಂದೊಂದೇ ಸ್ಫೋಟಕ ವಿಚಾರಗಳು ಬಯಲಾಗ್ತಿವೆ. ಡೇವಿಡ್​​ ಜೊತೆ ಪ್ರಿಯಾಂಕಾ ಕುಣಿಗಲ್​​ಗೆ ಆಗಮಿಸಿರುವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳು ಈಗ ಲಭ್ಯವಾಗಿದ್ದು, ಇವರಿಬ್ಬರ ಸಂಬಂಧ ಬಗ್ಗೆ ಪೊಲೀಸ್​​ ತನಿಖೆ ಮುಂದುವರಿದಿದೆ.

ತುಮಕೂರು, ಫೆಬ್ರವರಿ 16: ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾ ಪ್ರಕರಣ ಬಗೆದಷ್ಟು ಬಯಲಾಗುತ್ತಿದೆ. ಪತಿ ಸ್ನೇಹಿತನ ಮನೆಯಲ್ಲಿ ಪತ್ತೆಯಾಗಿದ್ದ ಈಕೆ ಆತನೊಂದಿಗೆ ಕುಣಿಗಲ್‌ಗೆ ಬಂದ ವಿಡಿಯೋ ಲಭ್ಯವಾಗಿದೆ. ನಾಪತ್ತೆಯಾಗಿದ್ದ ದಿನದ ರಾತ್ರಿಯೇ ಪ್ರಿಯಾಂಕಾ ಕುಣಿಗಲ್​​ಗೆ ಬಂದಿದ್ದಳು. ಗುರುವಾರ ಸಂಜೆ ನಾಲ್ಕು ಗಂಟೆಗೆ ತನ್ನ ರೂಮ್ ಬಿಟ್ಟಿದ್ದ ಡೇವಿಡ್, ಮರಳಿ ಪ್ರಿಯಾಂಕಾ ಜೊತೆ ಹಿಂದಿರುಗಿ ಬಂದಿದ್ದ. ಬೇಲೂರು ಪೊಲೀಸರು ಎಂಟ್ರಿ ಕೊಡುವವರೆಗೂ‌ ಮನೆಯಿಂದ ಈಚೆ ಬರದೇ ಪ್ರಿಯಾಂಕಾ ಒಳಗೇ ಇದ್ದಳು. ಹೀಗಾಗಿ ಆಕೆಗೆ ಹೋಟೆಲ್​​ನಿಂದ-ಊಟ ತಿಂಡಿಯನ್ನು ಡೇವಿಡ್​​ ಪಾರ್ಸಲ್ ತಂದುಕೊಡುತ್ತಿದ್ದ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕುಣಿಗಲ್​​ಗೆ ಎಂಟ್ರಿ ಕೊಟ್ಟಿದ್ದ ಬೇಲೂರು ಪೋಲೀಸರು, ಮನೆ ಬಳಿ ಬರುತ್ತಿದ್ದಂತೆ ಡೇವಿಡ್​​ ಮತ್ತು ಪ್ರಿಯಾಂಕಾ ಲಾಕ್​​ ಆಗಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Feb 16, 2026 02:29 PM

Follow Us
ಜಗದೀಶ ಬಿ.
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More