ಮಹಿಳೆ ನಾಪತ್ತೆ ಕೇಸ್ಗೆ ಟ್ವಿಸ್ಟ್: ಏಕಪತ್ನಿ ವ್ರತಸ್ಥನಂತೆ ಪೋಸ್ ಕೊಟ್ಟವ ಸಿಕ್ಕಿಬಿದ್ದಿದ್ದು ಮತ್ತೊಬ್ಬಳ ಜೊತೆ
ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಪ್ರಿಯಾಂಕಾ ತುಮಕೂರಿನ ಕುಣಿಗಲ್‌ನಲ್ಲಿ ಪ್ರಿಯಕರ ಡೇವಿಡ್ ಮನೆಯಲ್ಲಿ ಪತ್ತೆಯಾಗಿದ್ದಾರೆ. ನಾಪತ್ತೆ ನಾಟಕವಾಡಿದ್ದ ಇಬ್ಬರನ್ನೂ ಹಾಸನಕ್ಕೆ ಕರೆತಂದ ಪೊಲೀಸರು, ಡಿವೈಎಸ್ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಡೇವಿಡ್‌ನ ನಾಟಕೀಯ ಜೀವನವೂ ಬಯಲಾಗಿದೆ. ಈ ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿದೆ.
ಹಾಸನ/ ತುಮಕೂರು, ಫೆಬವರಿ 15: ಮದುವೆಗೆಂದು ತೆರಳಿ ನಾಪತ್ತೆಯಾಗಿದ್ದ ಮಹಿಳೆ ಪ್ರಿಯಾಂಕಾಳನ್ನು ಪರಪುರುಷನ ಜೊತೆ ಪತ್ತೆ ಮಾಡಿರುವ ಪೊಲೀಸರು, ಪ್ರಿಯಾಂಕಾ ಮತ್ತು ಡೇವಿಡ್ ಇಬ್ಬರನ್ನೂ ವಶಕ್ಕೆ ಪಡೆದು ಹಾಸನದ ಡಿವೈಎಸ್ಪಿ ಕಚೇರಿಯಲ್ಲಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ನಾಪತ್ತೆಯಾದಾಗ ಆಕೆ ಕೊಲೆಯಾಗಿರಬಹುದು ಅಥವಾ ಅಪಹರಣಕ್ಕೊಳಗಾಗಿರಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಆದರೆ, ಕತೆ ಕಟ್ಟಿದ್ದ ಆಕೆ ಪತಿಯ ಸ್ನೇಹಿತನ ಜೊತೆಗೆ ಕಳೆದ ಎರಡುದಿನಗಳಿಂದ ಇದ್ದಿದ್ದು ತನಿಖೆ ವೇಳೆ ಬಯಲಾಗಿದೆ. ತ್ತೊಂದೆಡೆ ಊರಿಗೆ ಏಕಪತ್ನಿ ವ್ರತಸ್ಥನಾಗಿ ಕಂಡವನ ಮನೆಯಲ್ಲಿಯೇ ಪ್ರಿಯಾಂಕಾ ಪತ್ತೆಯಾಗಿರೋದು ಸ್ಥಳೀಯರು ಹೌಹಾರುವಂತೆ ಮಾಡಿದೆ. ಸ್ವಾರಿ ಗರ್ಲ್ಸ್, ನನ್ನ ಹೆಂಡತಿ ಫುಲ್ ಸ್ಟ್ರಿಕ್ಟ್ ಎಂದು ಬೈಕ್ ಮೇಲೆ ಸ್ಟಿಕ್ಕರ್ ಹಾಕಿಸಿಕೊಂಡಿದ್ದ ಈತ, ಅದರ ಟ್ಯಾಂಕ್ ಮೇಲೆ ಡಾರ್ಲಿಂಗ್ ಅಂತಲೂ ಬರೆಸಿದ್ದ. ಖುದ್ದು ಮನೆ ಮಾಲೀಕ ಹೇಳುವಂತೆ ಬೆಕ್ಕಿನಂತೆ ಓಡಾಡುತಿದ್ದ ಈತನ ಮನೆಯಲ್ಲಿ ಮಹಿಳೆ ಪ್ರಿಯಾಂಕಾ ಸೇರಿದ್ದೇಗೆ ಎಂಬ ಗೊಂದಲ ಮುಂದುವರಿದಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸತ್ಯ ಇನ್ನಷ್ಟೇ ಹೊರ ಬರಬೇಕಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
ಗುರುಗಳ ಲಹರಿ ಇರುವ ಶುಭ ದಿನ: ಸೆಪ್ಟೆಂಬರ್ 10 ರ ರಾಶಿ ಭವಿಷ್ಯ
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ

