ಬೆಂಗಳೂರಲ್ಲಿ ಉಗ್ರ ಸಂಘಟನೆ ಐಸಿಸ್ ಜತೆ ಸಂಪರ್ಕ; ಬಂಧಿತ ಆರೋಪಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ

2020ರ ಜನವರಿ 23ರಂದು ಸದ್ದುಗುಂಟೆಪಾಳ್ಯ ಠಾಣೆಯಲ್ಲಿ 16 ಜನರ ಮೇಲೆ ಎಫ್ಐಆರ್ ದಾಖಲಾಗಿತ್ತು.

ಬೆಂಗಳೂರಲ್ಲಿ ಉಗ್ರ ಸಂಘಟನೆ ಐಸಿಸ್ ಜತೆ ಸಂಪರ್ಕ; ಬಂಧಿತ ಆರೋಪಿ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ
ಎನ್ಐಎ
Updated By: guruganesh bhat

Updated on: Sep 03, 2021 | 10:24 PM

ಬೆಂಗಳೂರು: ಉಗ್ರ ಸಂಘಟನೆ ಐಸಿಸ್ ಜತೆ ಸಂಪರ್ಕ ಹೊಂದಿದ್ದ ಆರೋಪದಡಿ ಸಿರಾಜುದ್ದಿನ್ ಅಲಿಯಾಸ್ ಖಾಲಿದ್  ಬಂಧಿಸಲ್ಪಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹೆಚ್ಚುವರಿ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ. ಕಳೆದ ವರ್ಷ ಸದ್ದುಗುಂಟೆಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಎನ್ಐಎ ಮತ್ತು ತಮಿಳುನಾಡಿನ ಕ್ಯೂ ಬ್ರ್ಯಾಂಚ್ ಸಿಬ್ಬಂದಿ ಮೂವರನ್ನು ಉಗ್ರ ಸಂಘಟನೆ ಐಸಿಎಸ್ ಜತೆ ಸಂಪರ್ಕ ಹೊಂದಿದ್ದ ಆರೋಪದಡಿ ಬಂಧಿಸಿದ್ದವು.

ಸದ್ದುಗುಂಟೆಪಾಳ್ಯ ಠಾಣೆಯಲ್ಲಿ 16 ಜನರ ಮೇಲೆ ಎಫ್ಐಆರ್ ದಾಖಲಾಗಿತ್ತು. ಪ್ರಮುಖ ಆರೋಪಿ ಖ್ವಾಜಾ ಮೊಯಿದ್ದೀನ್ ನಿರ್ದೇಶನದಂತೆ ಐಸಿಸ್ ಉಗ್ರ ಸಂಘಟನೆಗೆ ಯುವಕರ ನೇಮಕ ನಡೆಯುತ್ತಿತ್ತು. ತನಿಖೆ ನಡೆಸಿ ಪ್ರಕರಣ ಭೇದಿಸಿದ್ದ ಎನ್ಐಎ ಅಧಿಕಾರಿಗಳು ಕೆಲ ತಿಂಗಳ ಹಿಂದೆ ಖಾಲಿದ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದ್ದರು. ಅಪರಾಧ ಸಂಚು, ಶಸ್ತ್ರಾಸ್ತ್ರ ಪೂರೈಕೆ ಆರೋಪದಡಿ ಚಾರ್ಜ್​ಶೀಟ್ ಸಲ್ಲಿಕೆಯಾಗಿತ್ತು. ಹಿಂದೂ ಮುಖಂಡರ ಹತ್ಯೆಗೆ ಸಂಚು, ಮುಸ್ಲಿಂ ಯುವಕರ ನೇಮಕ ಮಾಡುತ್ತಿದ್ದರು ಎಂದು ಸಹ ಚಾರ್ಜ್​ಶೀಟ್​ ದಾಖಲಿಸಲಾಗಿದೆ. ಬಂಧಿತರು ಬೆಂಗಳೂರು, ತಮಿಳುನಾಡನ್ನು ಗುರಿಯಾಗಿಸಿದ್ದರು. ತಮಿಳುನಾಡಿನ ಪೊಲೀಸ್ ವಿಲ್ಸನ್ ಹತ್ಯೆಗೆ ಮುಂಬೈನಿಂದ ಆಯುಧ ತರಿಸಿದ್ದ ಬಂಧಿತ ಆರೋಪಿಗಳು ತರಿಸಿದ್ದರು. 2019ರ ಏಪ್ರಿಲ್​ ತಿಂಗಳಿನಿಂದ ಸಭೆ, ಶಸ್ತ್ರಾಸ್ತ್ರ ಪ್ರಯೋಗ ಮಾಡಿದ್ದರು ಎಂದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈಕುರಿತು 2020ರ ಜನವರಿ 23ರಂದು ಸದ್ದುಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: 

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ; ತಲೆಮರೆಸಿಕೊಂಡಿರುವ ಆರೋಪಿಗಳ ಮನೆ ಮೇಲೆ ಎನ್​ಐಎ ದಾಳಿ

Bajrang Dal: ಕರಾವಳಿಯಲ್ಲಿ ಶಾಶ್ವತ ಎನ್​ಐಎ ಕಚೇರಿ ಸ್ಥಾಪಿಸುವಂತೆ ಭಜರಂಗದಳ ಆಗ್ರಹ