ಬೆಂಗಳೂರು: ಮೆಟ್ರೋ ಪಿಲ್ಲರ್ ಉರುಳಿ ಬಿದ್ದು ತಾಯಿ-ಮಗು ಸಾವು ಪ್ರಕರಣ ಕುರಿತು ಮೆಟ್ರೋ ಎಂಡಿ ಅಂಜುಂ ಪರ್ವೇಜ್ರನ್ನ ಬರೋಬ್ಬರಿ ಎರಡೂವರೆ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿದೆ. ಐ ಐ ಟಿ ವರದಿಯ ಆಧಾರದ ಮೇರೆಗೆ ಪೊಲೀಸರು 30 ಪ್ರಶ್ನೆಗಳನ್ನ ಕೇಳಿದ್ದಾರೆ. ಕಾಮಗಾರಿಗೆ ಸಂಬಂಧಪಟ್ಟ ಇಂಜಿನಿಯರ್ಸ್ಗಳಿಗೆ ಟ್ರೈನಿಂಗ್ ಕೊಟ್ಟಿದ್ದು ಯಾರು?, ಟ್ರೈನಿಂಗ್ ಪ್ರೊಸೆಸ್ ಯಾವ ರೀತಿಯಲ್ಲಿತ್ತು?, ಮೆಟ್ರೋ ಪ್ಲಿಲ್ಲರ್ ಡಿಸೈನ್ ಯಾರು ಮಾಡಿದ್ರು..?, ಆ ಒಂದು ಪಿಲ್ಲರ್ ಮಾತ್ರ ಬೀಳೋದಕ್ಕೆ ಪ್ರಮುಖ ಕಾರಣ ಏನು..? ಇದರ ಜೊತೆಗೆ ಕೆಲ ಡಾಕ್ಯೂಮೆಂಟ್ಸ್ಗಳನ್ನ ಕೇಳಿದ್ದಾರೆ. ಹೀಗಾಗಿ ಎಂಡಿ ಅಂಜುಂ ಪರ್ವೇಜ್ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಲಾಗದೆ. ಕೆಲ ದಾಖಲಾತಿಗಳೊಂದಿಗೆ ಮತ್ತೆ ವಾಪಸ್ಸು ವಿಚಾರಣೆಗೆ ಬರೋದಾಗಿ ಹೇಳಿಕೆ ನೀಡಿದ್ದಾರೆ.
ಇನ್ನು NCC ಬಿಎಂಆರ್ಸಿಎಲ್ ನಿಂದ ಮೆಟ್ರೋ ಕಾಮಗಾರಿ ಗುತ್ತಿಗೆ ಪಡೆದಿದ್ದ ಕಂಪನಿ ಹಣ ಮತ್ತು ಸಮಯ ಉಳಿಸಲು ಹೋಗಿ ಪಿಲ್ಲರ್ ಪ್ರೊಸೆಸಿಂಗ್ ಹಂತಗಳನ್ನೇ ಸ್ಕಿಪ್ ಮಾಡಿ ಎಡವಟ್ಟು ಮಾಡ್ಕೊಂಡ್ರಾ, ಇದರ ಜೊತೆಗೆ 12 ಅಡಿ ಎತ್ತರಕ್ಕಿಂತ ಕಬ್ಬಿಣದ ಸರಳುಗಳನ್ನ ಹಾಕಲು ಅವಕಾಶವಿಲ್ಲ, ಆದರೂ 12 ಅಡಿಗಿಂತ ಎತ್ತರವಾಗಿ ಕಬ್ಬಿಣದ ಸರಳುಗಳನ್ನ ನಿಲ್ಲಿಸಿರೋದು ವರದಿಯಲ್ಲಿ ಬೆಳಕಿಗೆ ಬಂದಿದೆ. ಇನ್ನು ಹಂತ ಹಂತವಾಗಿ ಸೆಂಟ್ರಿಂಗ್ ಹಾಕಿ ಪಿಲ್ಲರ್ ಬೇಸ್ ಕವರಿಂಗ್ ಕೆಲಸ ಮಾಡಬೇಕು. ಆದರೆ ಕಾಸ್ಟ್ ಕಟಿಂಗ್ ಮಾಡಲು NCC ಸ್ಟೇಜ್ ಸ್ಕಿಪ್ ಮಾಡಿದ್ದಾರೆ. ಹೀಗಾಗಿ 12 ಅಡಿಗೂ ಎತ್ತರವಿರುವ ಕಬ್ಬಿಣದ ಸರಳುಗಳನ್ನ ಪೊಲೀಸರು ಈಗಾಗಲೇ ಕಟ್ ಮಾಡಿಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ