Bengaluru News: ಬೆಂಗಳೂರಿನಲ್ಲಿ ಎಮ್ಮೆಗಳ ವಿರುದ್ಧ ಟೆಕ್ಕಿಗಳ ದೂರು
ಬೆಳಿಗ್ಗೆ ಆಫೀಸ್ಗೆ ಹೋಗುವಾಗ ನಗರದ ಕಸವನಹಳ್ಳಿ ರೋಡ್ನಲ್ಲಿ ಪ್ರತಿನಿತ್ಯ ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗುತ್ತಿದೆ ಎಂದು ಐಟಿ-ಬಿಟಿ ಕಂಪನಿ ಉದ್ಯೋಗಿಗಳು ದೂರು ನೀಡಿದ್ದಾರೆ.
ಬೆಂಗಳೂರು: ಮನುಷ್ಯರು ತೊಂದರೆ ಕೊಡುತ್ತಿದ್ದರೇ ದೂರು ಕೊಡುವುದನ್ನು ನೋಡಿದ್ದೇವೆ ಆದರೆ ಎಮ್ಮೆಗಳು ತೊಂದರೆ ಕೊಡುತ್ತಿವೆ ಎಂದು ಬೆಂಗಳೂರಿನ (Bengaluru) ಎಮ್ಮೆಗಳ (Buffalo) ವಿರುದ್ಧ ಟೆಕ್ಕಿಗಳು (Techie) ದೂರು ನೀಡಿದ್ದಾರೆ. ಹೌದು ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಬೆಳಿಗ್ಗೆ ಆಫೀಸ್ಗೆ ಹೋಗುವಾಗ ನಗರದ ಕಸವನಹಳ್ಳಿ ರೋಡ್ನಲ್ಲಿ ಪ್ರತಿನಿತ್ಯ ಎಮ್ಮೆಗಳು ಸರತಿ ಸಾಲಿನಲ್ಲಿ ಮಾರ್ಚ್ ಫಾಸ್ಟ್ ಮಾಡುತ್ತಾ ರೋಡ್ನಲ್ಲಿ ಹೋಗುತ್ತಿವೆ. ಇದರಿಂದ ದಿನನಿತ್ಯ 45 ನಿಮಿಷ ಟ್ರಾಫಿಕ್ ಜಾಮ್ ಆಗುತ್ತಿದ್ದು, ಟೆಕ್ಕಿಗಳು ಹೈರಾಣಾಗಿ ಹೋಗಿದ್ದಾರೆ.
ಈ ಹಿನ್ನೆಲೆ MNC ಟೆಕ್ಕಿಗಳು ಕಳೆದ 6-7 ತಿಂಗಳಿಂದ ಎಮ್ಮೆ ಸಮ್ಯಸೆಯಿಂದ. ಎಮ್ಮೆಗಳಿಂದ ಟ್ರಾಫಿಕ್ ಜಾಮ್ ಆಗಿ ಆಫೀಸ್ಗೆ ನಿತ್ಯ ತಡವಾಗುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳಿ ಅಂತ ಟೀಟ್ವರ್ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ