ಹೊಸ ವರ್ಷದ ಪಾರ್ಟಿ ಮಾಡಬೇಕಾ?; ಸಂಜೆ 6ರಿಂದ ಬೆಂಗಳೂರಿನ ಎಂಜಿ ರಸ್ತೆ, ಇಂದಿರಾನಗರ, ಕೋರಮಂಗಲದ ರಸ್ತೆ ಬಂದ್

| Updated By: ಸುಷ್ಮಾ ಚಕ್ರೆ

Updated on: Dec 31, 2021 | 2:26 PM

Bengaluru New Year Guidelines: ಸಂಜೆಯಿಂದ ನ್ಯೂ ಇಯರ್ ಪಾರ್ಟಿ ನೆಪದಲ್ಲಿ ಸಾಕಷ್ಟು ಜನರು ಸೇರು ಸಾಧ್ಯತೆ ಇರುವುದರಿಂದ ಇಂದು ಸಂಜೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕ ಸಭೆಗಳನ್ನು ನಿಷೇಧಿಸಲಾಗಿದೆ. ಹಾಗೇ, ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗುವುದು.

ಹೊಸ ವರ್ಷದ ಪಾರ್ಟಿ ಮಾಡಬೇಕಾ?; ಸಂಜೆ 6ರಿಂದ ಬೆಂಗಳೂರಿನ ಎಂಜಿ ರಸ್ತೆ, ಇಂದಿರಾನಗರ, ಕೋರಮಂಗಲದ ರಸ್ತೆ ಬಂದ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಾಳೆ ಜನವರಿ 1 ಆದ್ದರಿಂದ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಇಂದು ರಾತ್ರಿ ಎಲ್ಲೆಡೆ ಪಾರ್ಟಿ ಮಾಡಿ, ಕುಣಿದು, ಎಂಜಾಯ್ ಮಾಡಲಾಗುತ್ತದೆ. ಕರ್ನಾಟಕದಲ್ಲೂ ಒಮಿಕ್ರಾನ್ ಕೇಸುಗಳು ಹೆಚ್ಚಾಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈಗಾಗಲೇ ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಸಾಮಾನ್ಯವಾಗಿ ನ್ಯೂ ಇಯರ್ ಹಿಂದಿನ ದಿನ ಸಂಜೆಯಿಂದಲೇ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ತುಂಬಿ ತುಳುಕುತ್ತಿರುತ್ತದೆ. ನೀವೇನಾದರೂ ಈ ಬಾರಿಯೂ ಬೆಂಗಳೂರಿನ ರಸ್ತೆಗಳಲ್ಲಿ ಪಾರ್ಟಿ ಮಾಡುವ ಪ್ಲಾನ್ ಮಾಡಿದ್ದರೆ ಅದು ಅಸಾಧ್ಯ. ಏಕೆಂದರೆ ಇಂದು ಸಂಜೆ 6 ಗಂಟೆಯಿಂದಲೇ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ, ಚರ್ಚ್​ ಸ್ಟ್ರೀಟ್​ಗಳನ್ನು ಬಂದ್ ಮಾಡಲಾಗುತ್ತದೆ.

ಹೊಸ ವರ್ಷದ ಮುನ್ನಾದಿನವಾದ ಇಂದು ಸಂಜೆ 6 ಗಂಟೆಯಿಂದ ಜನರಿಗಾಗಿ ಪ್ರಮುಖ ರಸ್ತೆಗಳನ್ನು ಮುಚ್ಚಲು ಪೊಲೀಸರು ನಿರ್ಧರಿಸಿದ್ದಾರೆ. ಸಂಜೆಯಿಂದ ನ್ಯೂ ಇಯರ್ ಪಾರ್ಟಿ ನೆಪದಲ್ಲಿ ಸಾಕಷ್ಟು ಜನರು ಸೇರು ಸಾಧ್ಯತೆ ಇರುವುದರಿಂದ ಇಂದು (ಡಿಸೆಂಬರ್ 31) ಪ್ರಮುಖ ರಸ್ತೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇಂದು ಸಂಜೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೊಸ ಆದೇಶವನ್ನು ಹೊರಡಿಸಿದ್ದಾರೆ.

ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲದಲ್ಲಿ ಸಂಜೆ 6 ಗಂಟೆಯಿಂದ ರಸ್ತೆಗಳನ್ನು ಮುಚ್ಚಲಾಗುತ್ತದೆ. ಹಾಗೇ, ಬೆಂಗಳೂರಿನಲ್ಲಿ ಯಾವುದೇ ಪ್ರದೇಶದಲ್ಲಿ ಹೊಸ ವರ್ಷವನ್ನು ಆಚರಿಸಲು ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿಷೇಧಿಸಲಾಗಿದೆ. ಜನರು ತಮ್ಮ ಮನೆಯೊಳಗೆ ಅಥವಾ ಕ್ಲಬ್​ಗಳಲ್ಲಿ ಪಾರ್ಟಿ ನಡೆಸಬಹುದು. ಹೊಸ ವರ್ಷಕ್ಕಾಗಿ ಬೆಂಗಳೂರಿನ ಯಾವುದೇ ಹೋಟೆಲ್‌ಗಳು, ಮಾಲ್‌ಗಳು, ರೆಸ್ಟೋರೆಂಟ್‌ಗಳು, ಕ್ಲಬ್‌ಗಳು ಅಥವಾ ಯಾವುದೇ ರೀತಿಯ ಸಂಸ್ಥೆಗಳು ವಿಶೇಷ DJ, ಈವೆಂಟ್‌ಗಳು ಅಥವಾ ಪಾರ್ಟಿಗಳನ್ನು ಆಯೋಜಿಸಬಾರದು.

ಇಂದು ಸಂಜೆ ಪಬ್, ರೆಸ್ಟೊರೆಂಟ್​ಗಳಲ್ಲಿ ಮುಂಗಡ ಕಾಯ್ದಿರಿಸಿಕೊಂಡಿದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಟಿಕೆಟ್ ಬುಕಿಂಗ್ ಮೆಸೇಜ್ ಪರಿಶೀಲಿಸಿದ ನಂತರವೇ ಜನರನ್ನು ಒಳಗೆ ಬಿಡಲಾಗುತ್ತದೆ. ಟಿಕೆಟ್ ಬುಕ್ ಮಾಡಿರುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ತೆಗೆದುಕೊಂಡಿರಬೇಕು. ಎಲ್ಲ ಅಂಗಡಿಗಳು, ಪಬ್, ಬಾರ್, ರೆಸ್ಟೊರೆಂಟ್​ಗಳನ್ನು ರಾತ್ರಿ 10 ಗಂಟೆಗೆ ಬಂದ್ ಮಾಡಲಾಗುತ್ತದೆ. ಇಂದು ಎಂಜಿ ರಸ್ತೆಯಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ.

ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಬೆಂಗಳೂರು ಸುತ್ತಮುತ್ತ ಜಿಲ್ಲೆಗಳಲ್ಲಿ ಯಾವೆಲ್ಲಾ ಪ್ರವಾಸಿ ಕೇಂದ್ರ ಬಂದ್; ಯಾವುವು ಮುಕ್ತ ಮುಕ್ತ ಮುಕ್ತ

Karnataka Night Curfew: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಆರಂಭ

Published On - 2:24 pm, Fri, 31 December 21