ಅಯ್ಯಯ್ಯೋ..ಮಕ್ಕಳ ಕಾಲೇಜ್ ಫೀಸ್​ ಕಟ್ಟಲು ಕೂಡಿಟ್ಟಿದ್ದ ಹಣ ಕದ್ದ ಖದೀಮರು

ಮಟಮಟ ಮಧ್ಯಾಹ್ನ ಖದೀಮರು ಮನೆಗೆ ನುಗ್ಗಿ ಸಾವಿರಾರು ರೂ ಸೇರಿದಂತೆ ಚಿನ್ನಾಭರಣ ಕಳ್ಳತನ ಮಾಡಿರುವಂತಹ ಘಟನೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ಸ್‌ನಲ್ಲಿರುವ ಮನೆಯೊಂದರಲ್ಲಿ ನಡೆದಿದೆ. ಹಣ ಕಳೆದುಕೊಂಡ ಕುಟುಂಬ ಕಂಗಾಲಾಗಿದೆ. ಸದ್ಯ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಅಯ್ಯಯ್ಯೋ..ಮಕ್ಕಳ ಕಾಲೇಜ್ ಫೀಸ್​ ಕಟ್ಟಲು ಕೂಡಿಟ್ಟಿದ್ದ ಹಣ ಕದ್ದ ಖದೀಮರು
ಬೀರು ಮುರಿದು ಕಳ್ಳತನ

Updated on: Jun 22, 2025 | 11:36 AM

ಬೆಂಗಳೂರು, ಜೂನ್​ 22: ಮಕ್ಕಳ ಶಿಕ್ಷಣಕ್ಕೂ, ಇಲ್ಲಾ ಮದುವೆಗೂ ಅಥವಾ ಕಷ್ಟ ಕಾಲಕ್ಕೆ ಸಹಾಯವಾಗಲಿ ಅಂತ ಹಣ (money) ಕೂಡಿಡುವುದು ಸಾಮಾನ್ಯ. ಆದರೆ ಹೀಗೆ ಕೂಡಿಟ್ಟ ಹಣ ಕಳ್ಳತನವಾದರೆ (theft) ಏನು ಮಾಡುವುದು? ಇದೀಗ ಅಂತಹದ್ದೆ ಒಂದು ಘಟನೆ ನಗರದ ಪ್ಯಾಲೇಸ್ ಆವರಣದ ಮನೆಯೊಂದರಲ್ಲಿ ನಡೆದಿದೆ. ತಮ್ಮ ಹೆಣ್ಣುಮಕ್ಕಳ ಕಾಲೇಜ್ ಫೀಸ್​ಗೆ ಇಟ್ಟಿದ್ದ ಹಣವನ್ನು ಖದೀಮರು ಕಳ್ಳತನ ಮಾಡಿದ್ದಾರೆ. ನಿನ್ನೆ ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದಿರುವಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.

65 ಸಾವಿರ ರೂ ಸೇರಿ 5 ಗ್ರಾಂ. ಚಿನ್ನಾಭರಣ ಕಳ್ಳತನ

ಶ್ರೀನಿವಾಸ್​​ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದೆ. ಶ್ರೀನಿವಾಸ್ ದಂಪತಿ ಕೆಲಸಕ್ಕೆ ಹೋಗಿದ್ದರೆ, ಇತ್ತ ಮಕ್ಕಳು ಕಾಲೇಜಿಗೆ ಹೋಗಿದ್ದರು. ಇದೇ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಬಾಗಿಲು, ಬೀರು ಮುರಿದು 65 ಸಾವಿರ ರೂ ಸೇರಿದಂತೆ 5 ಗ್ರಾಂ. ಚಿನ್ನಾಭರಣ ಕಳ್ಳತನ ಮಾಡಿ ಪರಾರಿ ಆಗಿದ್ದಾರೆ.

ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಗಲಾಟೆ: ಅಂಗನವಾಡಿಯಲ್ಲಿ ಚಾಕು ಇರಿದು ಯುವಕನ ಬರ್ಬರ ಹತ್ಯೆ

ಇದನ್ನೂ ಓದಿ
ಹಣಕಾಸಿನ ವಿಚಾರಕ್ಕೆ ಗಲಾಟೆ: ಅಂಗನವಾಡಿಯಲ್ಲಿ ಚಾಕು ಇರಿದು ಯುವಕನ ಹತ್ಯೆ
ಡ್ರಂಕ್ ಆ್ಯಂಡ್ ಡ್ರೈವ್, ಅತಿವೇಗದ ಚಾಲನೆಯಿಂದ ಅಪಘಾತ: ಇಬ್ಬರ ಸಾವು
ಬೆಂಗಳೂರಿನ 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್​ಗಳ ಮೇಲೆ ಪೊಲೀಸರಿಂದ ದಾಳಿ
ಮಡಿಕೇರಿಯಲ್ಲಿ ಬರೋಬ್ಬರಿ 9 ಪೊಲೀಸರ ಮನೆಗಳಲ್ಲೇ ಕಳ್ಳತನ!

ಶ್ರೀನಿವಾಸ್​ ಅವರು ಸಾಲ‌ ಮಾಡಿ ಮೂವರು ಹೆಣ್ಣು ಮಕ್ಕಳ ಕಾಲೇಜ್ ಫೀಸ್ ಕಟ್ಟುವುದಕ್ಕೆ ಅಂತ ಹಣ ತಂದು ಮನೆಯಲ್ಲಿ ಇಟ್ಟಿದ್ದರು. ಸದ್ಯ ಹಣ ಕಳೆದುಕೊಂಡು ಕಾಲೇಜ್ ಫೀಸ್ ಕಟ್ಟಲಾಗದೆ ಕಂಗಾಲಾಗಿದ್ದಾರೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲಾಗಿದ್ದು, ಆರೋಪಿಗಳಿಗೆ ಹುಡುಕಾಟ ನಡೆದಿದೆ.

ಡೆಡ್ಲಿ ವಿಲ್ಹಿಂಗ್ ಮಾಡುತ್ತಿದ್ದ ಯುವಕನ ಬಂಧನ

ಡೆಡ್ಲಿ ವಿಲ್ಹಿಂಗ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೊಹಮ್ಮದ್ ಅಸ್ಲಾಂ ಬಂಧಿತ ಆರೋಪಿ. ವೆಸ್ಟ್ ಆಫ್ ಕಾರ್ಡ್ ರಸ್ತೆ ಹಾಗೂ ಮಾಗಡಿ ರಸ್ತೆಯಲ್ಲಿ ವಿಲ್ಹಿಂಗ್ ಮಾಡುತ್ತಿದ್ದ.

ಇದನ್ನೂ ಓದಿ: ಓವರ್ ಟೈಂ ಓಪನ್, ಅಶ್ಲೀಲ ಡ್ಯಾನ್ಸ್: ಬೆಂಗಳೂರಿನ 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್​ಗಳ ಮೇಲೆ ಪೊಲೀಸರಿಂದ ದಾಳಿ

ಸ್ಕೂಟಿಯನ್ನ ಆಲ್ಟ್ರೇಷನ್ ಮಾಡಿಸಿದ್ದ ಯುವಕ, ಬೇರೆಯವರ ಜೀವಕ್ಕೆ ತೊಂದರೆಯಾಗುವಂತೆ ವಿಲ್ಹಿಂಗ್ ಮಾಡಿತ್ತಿದ್ದ. ಸದ್ಯ ಆರೋಪಿಯ ಬೈಕ್ ವಶಕ್ಕೆ ಪಡೆದಿದ್ದು, ಮಾಗಡಿರೋಡ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.